ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ವೇಳೆಗೆ 33 ಲಕ್ಷ ಮನೆ ನಿರ್ಮಾಣದ ಗುರಿ

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2022ರ ಹೊತ್ತಿಗೆ ದೇಶದ ಎಲ್ಲ ನಾಗರಿಕರಿಗೂ ಸೂರು ಒದಗಿಸಲು ನಿರ್ಧರಿಸಿದೆ.

ಇದರ ಜೊತೆಯಲ್ಲಿ ನಗರದಲ್ಲಿನ ಬಡವರಿಗಾಗಿ ಸಮಗ್ರ ವಸತಿ ಯೋಜನೆ ಜಾರಿಗೆ ತರಲಾಗಿದೆ. ಖಾಸಗಿ ವಲಯಕ್ಕೂ ಇದರಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಇಂಥ ಯೋಜನೆಗಳಲ್ಲಿ ಖಾಸಗಿ ವಲಯದವರಿಗೂ ಭಾಗವಹಿಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.

Budget 2018: Major announcements on Housing

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಮನೆ ಕೊಳ್ಳುವವರಿಗೆ ನೆರವಾಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗಿದೆ. ವಿಶೇಷ ಆರ್ಥಿಕ ವಲಯದ ನಿವಾಸಿಗಳು, ಗ್ರಾಮೀಣ ಪ್ರದೇಶ, ಕೈಗಾರಿಕಾ ಪ್ರದೇಶದಲ್ಲಿ ಮನೆ ಖರೀದಿಸಿದರೂ ಹೊಸ ಸೌಲಭ್ಯ ದೊರೆಯಲಿದೆ.

2022ರ ಒಳಗೆ ಸರ್ವರಿಗೂ ಸೂರು ಎಂಬ ಕೇಂದ್ರ ಸರಕಾರದ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ ನಿರ್ಮಾಣ ಸಾಮಾಗ್ರಿಗಳ ಮೇಲಿನ ಜಿಎಸ್ಟಿಯಲ್ಲಿ ಹಾಲಿ ಶೇಕಡಾ 18ರ ಸ್ಥರದಿಂದ 12ಕ್ಕೆ ಇಳಿಕೆ ಮಾಡಬೇಕಾಗಿದೆ. ಇದರಿಂದ ಬಳಕೆದಾರರಿಗೆ ಲಾಭವಾಗಲಿದೆ.

English summary
Union Budget 2018: Major announcements on Housing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X