Unified Pension Scheme: ಹೊಸ ಪಿಂಚಣಿ ಯೋಜನೆಯ ಆರ್ಥಿಕ ಭದ್ರತೆ, ಪ್ರಯೋಜನ ಏನು? ಇಲ್ಲಿದೆ ವಿವರ

ಬೆಂಗಳೂರು, ಆಗಸ್ಟ್ 25: ರಾಷ್ಟ್ರೀಯ ಪಿಂಚಣಿ ಯೋಜನೆಗೆ (NPS) ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರವು ಶನಿವಾರ 'ಏಕೀಕೃತ ಪಿಂಚಣಿ ಯೋಜನೆ'ಯನ್ನು (UPS) ಜಾರಿಗೆ ಅನುಮೋದನೆ ನೀಡಿದೆ. ಈ ಮೂಲಕ ಸರ್ಕಾರಿ ನೌಕರರ ವ್ಯಾಪಕ ಬೇಡಿಕೆ, ಒತ್ತಾಯಕ್ಕೆ ಮನ್ನಣೆ ಸಿಕ್ಕಂತಾಗಿದೆ. ಇಷ್ಟು ದಿನ ನೌಕರರಲ್ಲಿ ಕಾಡುತ್ತಿದ್ದ ಆರ್ಥಿಕ ಅಭದ್ರತೆಯ ಆತಂಕ ಇದೀಗ ದೂರವಾಗಿದೆ. ಈ ಯೋಜನೆ ವಿಶೇಷತೆಗಳು, ಮಹತ್ವದ ಇಲ್ಲಿ ತಿಳಿಯಿರಿ.

ರಾಷ್ಟ್ರೀಯ ಪಿಂಚಣಿ ಯೋಜನೆಗೆ (NPS) ಮುಂದಾಗಿದ್ದ ಸರ್ಕಾರವು ಪಿಂಚಣಿ ಮೊತ್ತ ಒದಗಿಸುವ ಖಾತರಿ ಇಲ್ಲದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಯಿತು. ಈ ಯೋಜನೆ ಜಾರಿಯಾದರೆ ನೌಕರರಿಗೆ ಆರ್ಥಿಕ ಅಭದ್ರತೆ ಕಾಡಲಿದೆ ಎಂದು ಅವರು ದೂರಿದ್ದರು. ಹಳೆಯ ಪಿಂಚಣಿ ಯೋಜನೆ ಇರಲಿ, ಇಲ್ಲವೇ ಮಾರ್ಪಾಡು ಮಾಡುವಂತೆ ಒತ್ತಾಯಿಸಿದ್ದರು.

Unified Pension Scheme Speciality and What is Benefits for Government Employees

ಇದೀಗ ಪಿಂಚಣಿ ಯೋಜನೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿ ಏಕೀಕೃತ ಪಿಂಚಣಿ ಯೋಜನೆಗೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ವಿವಿಧ ಸಂಘಟನೆಗಳ ಜೊತೆಗೆ ವಿವಿಧ ಎಲ್ಲ ರಾಜ್ಯಗಳ ಮುಖ್ಯಸ್ಥರ ಜೊತೆಗೆ ನೂರಕ್ಕೂ ಅತ್ಯಧಿಕ ಸಭೆಗಳನ್ನು ಕೈಗೊಂಡ ಈ ಯೋಜನೆ ಜಾರಿ ಸೂಕ್ತವೆಂದು ತಿಳಿಸಿದೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ನೌಕರರ ಪಿಂಚಣಿ ವಿಚಾರ ಅಂಶವುಳ್ಳ ಈ ಯೋಜನೆ ಜಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಎಸ್‌ಬಿಐ) ಮತ್ತು ವಿಶ್ವಬ್ಯಾಂಕ್ ಸಹ ಸಮಾಲೋಚಿಸಿ ಶಿಫಾರಸು ಮಾಡಿವೆ. ಸದ್ಯ ಸಂಪುಟವು ಅಸ್ತು ಎಂದಿದ್ದು, ಶೀಘ್ರವೇ ಈ ಯೋಜನೆ ಜಾರಿಗೆ ಬರಲಿದೆ ಎಂದರು.

Unified Pension Scheme Speciality and What is Benefits for Government Employees

ಏಕೀಕೃತ ಪಿಂಚಣಿ ಯೋಜನೆಯ (ಯುಪಿಎಸ್) ಇದು ನೌಕರರಿಗೆ ಖಚಿತ ಪಿಂಚಣಿ ಸೌಲಭ್ಉ ನೀಡುತ್ತದೆ. ಸರ್ಕಾರಿ ಉದ್ಯೋಗಿಗಳ ಖಾತರಿಯ ನಂತರದ ಆದಾಯದ ಪ್ರಾಥಮಿಕ ಬೇಡಿಕೆಗೆ ಪರಿಹಾರ ನೀಡುತ್ತದೆ. ಈ ಯೋಜನೆ ಹೆಚ್ಚು ಆರ್ಥಿಕ ಭದ್ರತೆ ನೀಡುತ್ತದೆ.

ಏಕೀಕೃತ ಪಿಂಚಣಿ ಯೋಜನೆ ವೈಶಿಷ್ಟ್ಯಗಳೇನು?

* ಈ ನೂತನ ಯೋಜನೆಯಲ್ಲಿ ನಿವೃತ್ತ ವೇತನದಾರರು ಸರಾಸರಿ ಮೂಲ ವೇತನದ ಶೇಡಕಾ 50ರಷ್ಟು ಮೊತ್ತದ ಪಿಂಚಣಿ ಹಣವನ್ನು ಅವರು ನಿವೃತ್ತಿ ನಂತರ ಪಡೆಯುತ್ತಾರೆ. ಇದರಲ್ಲಿ ಕನಿಷ್ಠ 25 ವರ್ಷಗಳ ಸೇವೆ ಮಾಡಿದ ನಿವೃತ್ತ ನೌಕರರಿಗೆ ಈ ಪ್ರಯೋಜ ವಿನ್ಯಾಯಗೊಳಿಸಲಾಗಿದೆ. ಇನ್ನೂ 25ಕ್ಕಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಸೇವೆಯ ಅವಧಿ ಆಧಾರದಲ್ಲಿ ಯೋಜನೆ ಅನ್ವಯವಾಗಲಿದೆ.

* ಒಂದು ವೇಳೆ ಕೇಂದ್ರ ಸರ್ಕಾರಿ ಉದ್ಯೋಗ ಕೆಲಸದಲ್ಲಿದ್ದಾಗಲೇ ಅಕಾಲಿಕಕಾಗಿ ಮರಣ ಹೊಂದಿದಲ್ಲಿ ಮೃತರ ಕುಟುಂಬಕ್ಕೆ ಪಿಂಚಣಿ ಸಿಗುತ್ತದೆ. ಎಲ್ಲ ಮೊತ್ತ ಸಿಗದೇ, ಮರಣ ಹೊಂದಿದ ಉದ್ಯೋಗಿ ಪಡೆಯತ್ತಿ ಒಟ್ಟು ಮೊತ್ತದ ಶೇಕಡಾ 60ರಷ್ಟು ಭಾಗವು ಅವಲಂಬಿತರಿಗೆ ಆರ್ಥಿಕ ಭದ್ರತೆಯಾಗಿ ಸಿಗುವುದು ಖಚಿತವಾಗಿದೆ.

* ಒಬ್ಬ ಉದ್ಯೋಗಿ ಕನಿಷ್ಠ 10 ವರ್ಷ ಸರ್ಕಾರಿ ವ್ಯಾಪ್ತಿಯಲ್ಲಿ ಸೇವೆ ನೀಡಿದ್ದರೆ ಈ ಯುಪಿಎಸ್ ಯೋಝನೆಯಡಿ ಮಾಸಿ ಕನಿಷ್ಠ ₹10,000 ಪಿಂಚಣಿ ಸೌಲಭ್ಯ ಒದಗಿಸಲಿದೆ. ಕಡಿಮೆ ವೇತನ ಹೊಂದಿದ ಉದ್ಯೋಗಿಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇನ್ನೂ ಯಾವುದೇ ನೌಕರನಿಗೂ ನಿವೃತ್ತಿಯ ನಂತರದ ಆರ್ಥಿಕ ಅನಿಶ್ಚಿತತೆ ಹೋಗಲಾಡಿಸಿ ಸೂಕ್ತ ಭದ್ರತೆ ನೀಡಲಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+