• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿ ಯೋಜನೆಗೆ ಶಹಬ್ಬಾಸ್ ಎಂದ ವಿಶ್ವಸಂಸ್ಥೆ!

|

ನವದೆಹಲಿ, ಜೂನ್ 6: ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಮಹತ್ತರ ಯೋಜನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನವೂ ಒಂದು. ಅದಕ್ಕೆ ವ್ಯಾಪಕ ಪ್ರತಿಕ್ರಿಯೆ ಮತ್ತು ಪ್ರಶಂಸೆ ವ್ಯಕ್ತವಾಗಿದ್ದವು.

ಇದೀಗ ವಿಶ್ವಸಂಸ್ಥೆ ಕೂಡ ಸ್ವಚ್ಛ ಭಾರತ ಯೋಜನೆಯಿಂದ ಭಾರತದಲ್ಲಿ ಪರಿಸರಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ಶ್ಲಾಘಿಸಿದೆ.

ಸ್ವಚ್ಛ ಭಾರತದ ರಾಯಭಾರಿ ಈ ಮಗು: ಮುದ್ದಾದ ವಿಡಿಯೋ ನೋಡಿದ್ದೀರಾ?

ಸ್ವಚ್ಛ ಭಾರತ ಯೋಜನೆಯಿಂದ ಅಂತರ್ಜಲ ಕಲುಷಿತವಾಗುವ ಪ್ರಮಾಣ ಸಾಕಷ್ಟು ತಗ್ಗಿದೆ ಎಂದು ಯುನಿಸೆಫ್ (ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ) ವರದಿ ಹೇಳಿದೆ.

ಸ್ವಚ್ಛ ಭಾರತ ಯೋಜನೆ (ಗ್ರಾಮೀಣ) ಕುರಿತ ಎರಡು ಸ್ವತಂತ್ರ ಅಧ್ಯಯನಗಳನ್ನು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಬುಧವಾರ ಬಿಡುಗಡೆ ಮಾಡಿದರು. ಈ ಮಹತ್ವದ ಯೋಜನೆಯು ಜನರ ಜೀವನದ ಮೇಲೆ ಸುದೀರ್ಘ ಸಮಯದವರೆಗೆ ಸಕಾರಾತ್ಮಕ ಪರಿಣಾಮ ಬೀರುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ಕೆ ಸ್ವತಃ ಬೀದಿಗಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್

ಯುನಿಸೆಫ್ ಮತ್ತು ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಈ ಎರಡು ಅಧ್ಯಯನಗಳನ್ನು ನಡೆಸಿದ್ದು, ಪರಿಸರದ ದಿನ ಆರಂಭವಾಗಿದ್ದವು. ಸ್ವಚ್ಛ ಭಾರತ ಯೋಜನೆಯ ಪರಿಸರೀಯ ಪರಿಣಾಮಗಳು ಮತ್ತು ಸಂವಹನದ ಹೆಜ್ಜೆಗಳ ಮಟ್ಟವನ್ನು ಮೌಲ್ಯಮಾಪನ ಮಾಡುವುದು ಈ ಯೋಜನೆಯ ಗುರಿಯಾಗಿತ್ತು.

ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ

ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ

ಈ ಯೋಜನೆಯನ್ನು ಕೊಂಡಾಡಿರುವ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಸ್ವಚ್ಛತೆಯು ಪರಿಸರದ ಎಲ್ಲ ವಿಭಾಗಗಳಲ್ಲಿ ಹಾಗೂ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬಯಲು ಶೌಚಾಲಯ ಹೆಚ್ಚಿರುವ ಪ್ರದೇಶಗಳಲ್ಲಿ ಸಮುದಾಯಗಳ ಮನಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ನಡೆಸಿದ ಅಧ್ಯಯನದಲ್ಲಿ ಸ್ವಚ್ಛ ಭಾರತ ಅಭಿಯಾನವು ಬಯಲು ಶೌಚಾಲಯ ಮುಕ್ತವಾಗುವ ಮೂಲಕ ಮೂರು ಲಕ್ಷಕ್ಕೂ ಅಧಿಕ ಜೀವಗಳು ಭಾರತದಲ್ಲಿ ಬದುಕುಳಿಯಲಿವೆ ಎಂದು ಅಂದಾಜಿಸಿತ್ತು ಎಂದಿದ್ದಾರೆ.

ಮೂರು ರಾಜ್ಯಗಳಲ್ಲಿ ಅಧ್ಯಯನ

ಮೂರು ರಾಜ್ಯಗಳಲ್ಲಿ ಅಧ್ಯಯನ

ಯುನಿಸೆಫ್‌ನ 'ನೀರು, ಮಣ್ಣು ಮತ್ತು ಆಹಾರದ ಮೇಲೆ ಸ್ವಚ್ಛ ಭಾರತ ಯೋಜನೆಯ ಪರಿಸರೀಯ ಪರಿಣಾಮ' ಅಧ್ಯಯನದ ಅಡಿ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಬಯಲು ಶೌಚ ಮುಕ್ತ ಗ್ರಾಮಗಳು ಹಾಗೂ ಬಯಲು ಶೌಚ ಮುಕ್ತವಾಗಿರದ ಹಳ್ಳಿಗಳಿಂದ ಸಂಗ್ರಹಿಸಿದ ಅಂತರ್ಜಲ ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

ಗಂಗೆಗೆ ಪ್ರಾಣತ್ಯಾಗ ಮಾಡಿದ ಡಾ.ಜಿಡಿ ಅಗರ್ವಾಲ್ ಯಾರು?

ಈ ಹಳ್ಳಿಗಳಲ್ಲಿ ಕಲುಷಿತತೆ ಹೆಚ್ಚು

ಈ ಹಳ್ಳಿಗಳಲ್ಲಿ ಕಲುಷಿತತೆ ಹೆಚ್ಚು

ಬಯಲುಶೌಚ ಮುಕ್ತವಾಗಿರದ ಗ್ರಾಮಗಳಲ್ಲಿನ ಅಂತರ್ಜಲ ಕಲುಷಿತಗೊಂಡ ಪ್ರಮಾಣ ಅಧಿಕ ಮಟ್ಟದಲ್ಲಿತ್ತು. ನೀರಿನ ಕಲುಷಿತತೆ ಪ್ರಮಾಣ ಸರಾಸರಿ 11.25ರಷ್ಟು ಅಧಿಕವಾಗಿತ್ತು. (ಮನುಷ್ಯರಿಂದಲೇ ಆಗುವ ಸರಾಸರಿ 12.7 ಪಟ್ಟು ಕಲುಷಿತತೆ ಪತ್ತೆಹಚ್ಚಬಹುದು) ಅಲ್ಲಿನ ಮಣ್ಣು 1.13 ಪಟ್ಟು ಹೆಚ್ಚು ಕಲುಷಿತಗೊಂಡಿತ್ತು. ಆಹಾರ ಕಲುಷಿತತೆ ಮಟ್ಟ 1.48 ಪಟ್ಟು ಹೆಚ್ಚಾಗಿತ್ತು. ಅಲ್ಲದೆ, ಮನೆಗಳಲ್ಲಿನ ಕುಡಿಯುವ ನೀರಿನ ಸಂಪರ್ಕಗಳಲ್ಲಿನ ಕಲುಷಿತತೆ ಪ್ರಮಾಣ 2.68 ಪಟ್ಟು ಅಧಿಕವಾಗಿತ್ತು.

ನಿರಂತರ ಪ್ರಯತ್ನದ ಫಲ

ನಿರಂತರ ಪ್ರಯತ್ನದ ಫಲ

ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ ಕಲುಷಿತತೆ ಪ್ರಮಾಣ ಗಮನಾರ್ಹವಾಗಿ ತಗ್ಗಿದೆ. ಇದು ಸ್ವಚ್ಛತೆಯ ಸುಧಾರಣೆ ಮತ್ತು ಶೌಚಾಲಯಗಳ ಬಳಕೆಯ ಹೆಚ್ಚಳದಿಂದಲೇ ಸಾಧ್ಯವಾಗಿದೆ ಎಂದು ಯುನಿಸೆಫ್ ಹೇಳಿದೆ. ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮಾಡುವ ನಿರಂತರ ಮೇಲ್ವಿಚಾರಣೆ ಮತ್ತು ಜನರ ಮನಸ್ಥಿತಿಯಲ್ಲಿನ ಪರಿವರ್ತನೆಗಳು ಸಹ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದೆ.

English summary
A UNICEF study said that, one of the important programs of Narendra Modi government Swachh Bharat Mission helped to reduce the contamination of groundwater.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X