26/11 ಮೃತರಿಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶ್ರದ್ಧಾಂಜಲಿ
ಮುಂಬೈ, ಅಕ್ಟೋಬರ್ 19: ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ತಮ್ಮ ಮೂರು ದಿನಗಳ ಭಾರತ ಭೇಟಿಯ ಮೊದಲ ದಿನವಾದ ಬುಧವಾರ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಭಾರತದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ ಶೋಂಬಿ ಶಾರ್ಪ್ ಟ್ವೀಟ್‌ನಲ್ಲಿ, ವಿಶ್ವಸಂಸ್ಥೆ ಭಾರತ ತಂಡದ ಪರವಾಗಿ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರನ್ನು ಭಾರತಕ್ಕೆ ಸ್ವಾಗತಿಸಲು ನಿಜವಾದ ಸಂತೋಷವಾಗಿದೆ. ಭಾರತವು ಹೇಗೆ ಮುನ್ನಡೆಯುತ್ತಿದೆ ಎಂಬುದನ್ನು ಹಂಚಿಕೊಳ್ಳುವ ಅದ್ಭುತ ಎರಡು ದಿನಗಳನ್ನು ಎದುರು ನೋಡುತ್ತಿದ್ದೇನೆ. ಹಲವು ಕ್ಷೇತ್ರಗಳಲ್ಲಿ ಎಸ್‌ಡಿಜಿಗಳು ಮತ್ತು ಎಲ್‌ಎನ್‌ಒಬಿಗಳ ಸಾಧನೆ ಮತ್ತು ವಿಶ್ವಸಂಸ್ಥೆ ಭಾರತ ತಂಡದ ಪಾಲುದಾರಿಕೆಗೆ ಹೆಮ್ಮೆಯಿದೆ ಎಂದು ಬರೆದಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮೂರು ದಿನಗಳ ಭೇಟಿಗಾಗಿ ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ಗುಟೆರೆಸ್ ಅವರು ಅಕ್ಟೋಬರ್ 20ರವರೆಗೂ ಭಾರತದಲ್ಲಿ ಇರಲಿದ್ದಾರೆ. ಅವರು ಜನವರಿ 2022ರಲ್ಲಿ ತಮ್ಮ ಎರಡನೇ ಅವಧಿಯ ಅಧಿಕಾರವನ್ನು ಪ್ರಾರಂಭಿಸಿದಾಗಿನಿಂದ ಇದು ಯುಎನ್‌ಎಸ್‌ಜಿಯ ಮೊದಲ ಭಾರತ ಭೇಟಿಯಾಗಿದೆ. ಗುಟೆರಸ್ ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು 2018ರ ಏಪ್ರಿಲ್ 1ರಂದು ಭೇಟಿ ನೀಡಿದ್ದರು.

ಮುಂಬೈ ಐಐಟಿಯಲ್ಲಿ ಭಾಷಣ
ಭಾರತದ ಮುಂಬೈಗೆ ಆಗಮಿಸುತ್ತಿರುವ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರಿಗೆ ಆತ್ಮೀಯ ಸ್ವಾಗತ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ 26/11 ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗುಟೆರಸ್ ಭಾರತಕ್ಕೆ ಭೇಟಿ ಆರಂಭಿಸಿದ್ದಾರೆ. ಭಾರತ @75: ಯುಎನ್-ಭಾರತ ಪಾಲುದಾರಿಕೆ, ದಕ್ಷಿಣ ಸಹಕಾರವನ್ನು ಬಲಪಡಿಸುವುದು ಎಂಬ ವಿಷಯದ ಕುರಿತು ಯುಎನ್‌ಎಸ್‌ಜಿ ಮುಂಬೈ ಐಐಟಿಯಲ್ಲಿ ಸಾರ್ವಜನಿಕ ಭಾಷಣವನ್ನು ಸಹ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಗ್ಲಾಸ್ಗೋದಲ್ಲಿ ಮೋದಿ ಲೈಫ್ ಪರಿಕಲ್ಪನೆ ಪರಿಚಯ
ಗುಟೆರಸ್ ಅವರು 20 ಅಕ್ಟೋಬರ್ 2022 ರಂದು ಗುಜರಾತ್‌ನಲ್ಲಿ (ಏಕ್ತಾ ನಗರ, ಕೆವಾಡಿಯಾ), ಅವರು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಬುಕ್‌ಲೆಟ್, ಲೋಗೋ ಮತ್ತು ಟ್ಯಾಗ್‌ಲೈನ್‌ನ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಳ್ಳಲಿದ್ದಾರೆ. 2021 ರ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ಸಿಒಪಿ 26ರ ಸಮಯದಲ್ಲಿ ಪಿಎಂ ಮೋದಿಯವರು ಲೈಫ್ ಪರಿಕಲ್ಪನೆಯನ್ನು ಪರಿಚಯಿಸಿದರು ಎಂದು ನೆನಪಿಸಿಕೊಳ್ಳಬಹುದು.

ಎಸ್ ಜೈಶಂಕರ್ ಅವರೊಂದಿಗೆ ಚರ್ಚೆ
ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಆರಂಭಿಕ ಸಾಧನೆಯನ್ನು ಪ್ರದರ್ಶಿಸಲು ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಿಷನ್ ಲೈಫ್ ಭಾರತದ ಯೋಜನೆಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್ ಅವರು ಜಾಗತಿಕ ಕಾಳಜಿಯ ವಿಷಯಗಳ ಕುರಿತು ಹಾಗೂ ಭಾರತದ ಮುಂಬರುವ ಜಿ 20 ಅಧ್ಯಕ್ಷೀಯತೆ ಮತ್ತು ಸುಧಾರಿತ ಬಹುಪಕ್ಷೀಯತೆ ಸೇರಿದಂತೆ ಯುಎನ್‌ನೊಂದಿಗೆ ಭಾರತದ ಒಪ್ಪಂದವನ್ನು ಉತ್ತೇಜಿಸುವ ಕ್ರಮಗಳ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ.

ಮೊದಲ ಸೌರಶಕ್ತಿ ಚಾಲಿತ ಗ್ರಾಮಕ್ಕೆ ಭೇಟಿ
ಕೆವಾಡಿಯಾದಲ್ಲಿ ಗುಟೆರೆಸ್ ಏಕತೆಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ನಿರೀಕ್ಷೆಯಿದೆ. ಅವರು ಮೊಧೇರಾ (ಗುಜರಾತ್) ನಲ್ಲಿರುವ ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮ ಮತ್ತು ಪ್ರದೇಶದ ಇತರ ಅಭಿವೃದ್ಧಿ ಯೋಜನೆಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೊಧೇರಾದ ಸೂರ್ಯ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications