UGC NET 2022: ಪರೀಕ್ಷೆ ದಿನಾಂಕ ಪ್ರಕಟ, ಮಾಹಿತಿ ಸ್ಲಿಪ್ ಡೌನ್‌ಲೋಡ್‌ಗೆ ಈ ವಿಧಾನ ತಿಳಿಯಿರಿ
ಬೆಂಗಳೂರು, ಫೆಬ್ರವರಿ 13: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (NET) 2022ರ ಡಿಸೆಂಬರ್ ಪರೀಕ್ಷೆ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಘೋಷಣೆ ಮಾಡಿದೆ.
ಯುಜಿಸಿ ನೆಟ್ 2022 ಪರಿಕ್ಷೆಯು ಫೆಬ್ರವರಿ 21 ಮತ್ತು ಮಾರ್ಚ್ 10ರ ಮಧ್ಯೆ ನಡೆಸಲು ಪರೀಕ್ಷಾ ಮಂಡಳಿ ನಿರ್ಧರಿಸಿದೆ.
ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ugcnet.nta.nic.in ಗೆ ಭೇಟಿ ನೀಡಿ ಪರೀಕ್ಷಾ ಮಾಹಿತಿಯ ಸ್ಲೀಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕಳೆದ ತಿಂಗಳ ಜನವರಿ 23ಕೊನೆಯ ದಿನ ಎಂದು ತಿಳಿಸಲಾಗಿತ್ತು. ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡುವಾಗ ಅಭ್ಯರ್ಥಿಗಳು ನಾಲ್ಕು ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಪ್ರಕಾರವಾಗೇ ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಇದೆಲ್ಲಕ್ಕು ಮುನ್ನ ಅಭ್ಯರ್ಥಿಗಳು ಪರೀಕ್ಷಾ ಮಾಹಿತಿ ಸ್ಲಿಪ್ ಡೌನ್‌ಲೋಡ್ ಮಾಡುವುದು ಹೇಗೆ, ಅದರ ವಿಧಾನಗಳೇನು ಎಂದು ಇಲ್ಲಿ ತಿಳಿಯಿರಿ.
UGC NET 2022 ಪರೀಕ್ಷೆ ಸ್ಲೀಪ್ ಹೀಗೆ ಪಡೆಯಿರಿ
* ಮೊದಲು ಅಧಿಕೃತ ವೆಬ್‌ಸೈಟ್ ಆಗಿರುವ https://ugcnet.nta.nic.in ಗೆ ಭೇಟಿ ನೀಡಿ.
* ವೆಬ್‌ಸೈಟ್‌ನ ಮುಖಪುಟದಲ್ಲಿ ನೀಡಲಾದ ಸ್ಲಿಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮನ್ನು ಹೊಸ ಪುಟಕ್ಕೆ ನಿರ್ದೇಶಿಸಲಾಗುತ್ತದೆ, ಅಗತ್ಯವಿರುವ ಮಾಹಿತಿ ನಮೂದಿಸಿ.
* ನಮೂದಿಸಿದ ಬಳಿಕ ಸಲ್ಲಿಕೆ ಬಟನ್ ಒತ್ತಿರಿ.

* ಪರೀಕ್ಷಾ ಮಾಹಿತಿಯ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇಂಟಿಮೇಶನ್ ಸ್ಲಿಪ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪರೀಕ್ಷಾ ಏಜೆನ್ಸಿ ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅರ್ಜಿ ನಮೂನೆಯಲ್ಲಿ ತಾವು ಆಯ್ಕೆ ಮಾಡಿದ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಆಡಳಿತಾತ್ಮಕ ಕಾರಣಗಳಿಂದ ನಿಮ್ಮ ಆಯ್ಕೆ ನಗರದ ಪಕ್ಕದ ನಗರದಲ್ಲಿ ಪರೀಕ್ಷಾ ನಿಗದಿ ಮಾಡಬಹುದು ಎಂದು ತಿಳಿಸಿದೆ.












Click it and Unblock the Notifications