ಟ್ರೈನಿನಲ್ಲಿ ರೇಪ್ ಯತ್ನ: ಉಡುಪಿ ಯುವಕನ ಬಂಧನ

ವೃತ್ತಿಯಿಂದ ಫ್ಯಾಷನ್ ಡಿಸೈನರ್ ಆಗಿರುವ 20 ವರ್ಷದ ಬಾಧಿತ ಯುವತಿ ಮಹಾರಾಷ್ಟ್ರದಲ್ಲಿ ಕುದಾಲ್ ರೈಲ್ವೆ ಸ್ಟೇಷನ್ನಿನಲ್ಲಿ ಹತ್ತಿದ್ದಾರೆ. ಆದರೆ ಆಕೆ ಒಬ್ಬಳೇ ಇದ್ದಾಳೆ ಎಂಬುದನ್ನು ಅರಿತ 28 ವರ್ಷದ ಕಿಡಿಗೇಡಿ ಯುವಕ ಆಕೆಯ ಜತೆ ಮಾತಿಗೆ ಇಳಿದಿದ್ದಾನೆ. ಜತೆಗೆ ಕುಡಿಯಲು ತಂಪು ಪಾನೀಯವನ್ನೂ ನೀಡಿದ್ದಾನೆ.
ಆದರೆ ಯುವತಿಗೆ ಏನೋ ಅನುಮಾನ ಬಂದು ಯುವಕನ ಜತೆ ಹೆಚ್ಚು ಮಾತನಾಡದೆ ಪಾನೀಯವನ್ನೂ ಕುಡಿಯದೆ ಜಾಗ್ರತೆ ವಹಿಸಿದ್ದಾಳೆ. ಅದೇ ವೇಳೆ ಸಮಯಪ್ರಜ್ಞೆಯಿಂದ ಅಣ್ಣನಿಗೆ ಮೊಬೈಲಿಂದ ಫೋನ್ ಮಾಡಿ, ಹೀಗ್ಹೀಗೆ ಎಂದು ವಿಷಯ ತಿಳಿಸಿದ್ದಾಳೆ.
ಗಾಬರಿಗೊಂಡ ಹುಡುಗಿಯ ಸೋದರ ತಕ್ಷಣ ರತ್ನಗಿರಿ ಪೊಲೀಸರಿಗೆ ಮತ್ತು ರೈಲ್ವೆ ಸಂರಕ್ಷಣ ಪಡೆಗೆ ಮಾಹಿತಿ ನೀಡಿದ್ದಾರೆ. ಮತ್ಸ್ಯಗಂಧ ಎಕ್ಸ್ ಪ್ರೆಸ್ ಟ್ರೈನು ರತ್ನಗಿರಿಗೆ ಬರುವ ವೇಳೆಗೆ ಪೊಲೀಸರು ಯುವತಿಯನ್ನು ಸಂಪರ್ಕಿಸಿದ್ದಾರೆ.
ಆದರೆ ಟ್ರೈನು ಇನ್ನೇನು ತಮ್ಮ ಸರಹದ್ದನ್ನು ದಾಟುತ್ತಿದೆ ಎಂದು ಲೆಕ್ಕಾಚಾರ ಹಾಕಿದ ರತ್ನಗಿರಿ ಪೊಲೀಸರು ಮುಂದಿನ ಠಾಣೆಯಲ್ಲಿ ಅಂದರೆ ಪಾನ್ವೆಲ್ ನಲ್ಲಿರುವ ಪೊಲೀಸರಿಗೆ ದೂರು ನೀಡುವಂತೆ ಯುವತಿಗೆ ಉಚಿತ ಸಲಹೆ ನೀಡಿದ್ದಾರೆ. ಅದೇ ವೇಳೆ ಯುವತಿ ಮತ್ತು ಆರೋಪಿ ಯುವಕನನ್ನು ಅದೇ ಟ್ರೈನಿನಲ್ಲಿ ಪ್ರಯಾಣ ಮಾಡುವಂತೆ ರತ್ನಗಿರಿ ಪೊಲೀಸರು ಸೂಚಿಸಿದ್ದಾರೆ.
ಗಮನಾರ್ಹವೆಂದರೆ ರತ್ನಗಿರಿ ಪೊಲೀಸರು ಕಿಡಿಗೇಡಿ ಯುವಕನನ್ನು ಅನೌಪಚಾರಿಕವಾಗಿಯೂ ವಿಚಾರಣೆ ನಡೆಸಿಲ್ಲ. ಇದರಿಂದ ಕಂಗೆಟ್ಟ ಯುವತಿ TCಗೆ ದೂರಿದರೂ ಆತನೂ ಸಹ ಾಕೆಯ ದೂರನ್ನು ಕಿವಿಯ ಮೇಲೆ ಹಾಕಿಕೊಂಡಿಲ್ಲ. ಮುಂದೆ ಠಾಣೆಗೆ ಬರುತ್ತಿದ್ದಂತೆ ಯುವತಿ ಅಲ್ಲಿನ ಪೊಲೀಸರಿಗೆ ದೂರು ನೀಡಿದಾಗ ಅವರು ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications