ಕುತೂಹಲ ಮೂಡಿಸಿದ ಉದ್ಧವ್ ಠಾಕ್ರೆ- ಅರವಿಂದ್ ಕೇಜ್ರಿವಾಲ್ ಭೇಟಿ: ಮುಂಬೈನ ಠಾಕ್ರೆ ನಿವಾಸದಲ್ಲಿ AAP ನಾಯಕರು
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮುಂಬೈನಲ್ಲಿರುವ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ನಾಯಕರು ದೇಶದ ಇಂದಿನ ಪರಿಸ್ಥಿತಿ ಕುರಿತು ಮಾತುಕತ
ಮುಂಬೈ, ಫೆಬ್ರವರಿ 25: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮುಂಬೈನಲ್ಲಿರುವ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ನಾಯಕರು ದೇಶದ ಇಂದಿನ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ.
ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಎಎಪಿ ಸಂಸದರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಅವರು ಶುಕ್ರವಾರ ಸಂಜೆ ಸೌಜನ್ಯದ ಭೇಟಿಗಾಗಿ ಠಾಕ್ರೆ ಅವರ ಮುಂಬೈ ಮನೆ ಮಾತೋಶ್ರೀಗೆ ತಲುಪಿದರು.

'ನಾವು ಅರವಿಂದ್ ಜೀ ಅವರನ್ನು ಸ್ವಾಗತಿಸಿದ್ದೇವೆ ಮತ್ತು ನಮ್ಮ ದೇಶವನ್ನು ಬಲಿಷ್ಠಗೊಳಿಸಲು ನಾವು ಏನು ಮಾಡಬಹುದು ಎಂದು ಚರ್ಚಿಸಿದ್ದೇವೆ. ನಮ್ಮೆಲ್ಲರಿಗೂ ಕೇವಲ ಸಿದ್ಧಾಂತವಿದೆ. ಅದು ದೇಶವನ್ನು ಬಲಿಷ್ಠಗೊಳಿಸುವುದು ಹೇಗೆಂಬುದಾಗಿದೆ' ಎಂದು ಉದ್ದವ್ ಠಾಕ್ರೆ ಹೇಳಿದರು.
ಪ್ರಸ್ತುತ ಉದ್ದವ್ ಠಾಕ್ರೆ ಅವರು, 'ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಬಣದ ಮುಖ್ಯಸ್ಥರಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಶಿವಸೇನೆ ಹೆಸರನ್ನು ಕಳೆದುಕೊಂಡ ನಂತರ 'ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಎಂದು ಹೆಸರಿಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್, ಇಂದಿನ ದೇಶದ ಪರಿಸ್ಥಿತಿ ಕುರಿತು ಉದ್ದವ್ ಠಾಕ್ರೆಯೊಂದಿಗೆ ಚರ್ಚೆ ನಡಿಸಿದ್ದೇನೆ ಎಂದು ಹೇಳಿದ್ದಾರೆ. 'ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಹಣದುಬ್ಬರವು ಜನರ ಆದಾಯವನ್ನು ಕಸಿದುಕೊಳ್ಳುತ್ತಿದೆ. ಆದರೂ, ಜನರ ಆದಾಯ ಹೆಚ್ಚಾಗುತ್ತಿಲ್ಲ. ಖರ್ಚು ಮಾತ್ರ ಅಧಿಕವಾಗುತ್ತಿದೆ' ಎಂದು ಕೇಜ್ರಿವಾಲ್ ಹೇಳಿದರು.

ಮುಂಬೈನಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿರುವ ಉದ್ಧವ್ ಠಾಕ್ರೆಯಿಂದ ನಾವು ಬಹಳಷ್ಟು ಕಲಿತಿದ್ದೇವೆ. ದೆಹಲಿಯಲ್ಲಿ ಅವರದೇ ತಂತ್ರವನ್ನು ಬಳಸಿದ್ದೇವೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದರು.
ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಭೇಟಿಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. 'ನಮ್ಮ ವಿನಮ್ರ ಆಹ್ವಾನವನ್ನು ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಮತ್ತು ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರಿಗೆ ಧನ್ಯವಾದಗಳು' ಎಂದು ಆದಿತ್ಯ ಠಾಕ್ರೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Thank you CM @ArvindKejriwal ji for accepting our humble invite for a cup of tea at Matoshri and coming along with CM @BhagwantMann ji and MPs Sanjay Singh ji and @raghav_chadha today. pic.twitter.com/HOhYAqfyul
— Aaditya Thackeray (@AUThackeray) February 24, 2023
ಶಿವಸೇನೆ ಮತ್ತು ಎಎಪಿ ಸಭೆಯ ಬಗ್ಗೆ ಹೆಚ್ಚಿನ ವಿವರಗಳು ಹೊರಬಂದಿಲ್ಲ. ಮಹಾರಾಷ್ಟ್ರದಲ್ಲಿ, ಠಾಕ್ರೆಯವರ ಪಕ್ಷವು ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿದೆ.












Click it and Unblock the Notifications