ಗಂಟೆಗಳ ಲೆಕ್ಕದಲ್ಲಿ ಊಬರ್ ಆಟೋ ಬಾಡಿಗೆಗೆ ಲಭ್ಯ
ನವದೆಹಲಿ, ಆಗಸ್ಟ್ 27: ಆಟೋಗಳನ್ನು ಬಾಡಿಗೆಗೆ ನೀಡುವ ಸೇವೆಯನ್ನು ಊಬರ್ ಭಾರತದಲ್ಲಿ ಆರಂಭಿಸಿದೆ. ಬೆಂಗಳೂರು ಸೇರಿದಂತೆ ಐದು ನಗರದಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ.
Recommended Video
ಈ ಯೋಜನೆ ಅನ್ವರು ಜನರು ಆಟೋಗಳನ್ನು ಹಲವು ಗಂಟೆಗಳ ಅವಧಿಗೆ ಬಾಡಿಗೆಗೆ ಪಡೆಯಬಹುದು ಮತ್ತು ಹಲವಾರು ಕಡೆ ನಿಲ್ಲಿಸಲು ಸಹ ಅವಕಾಶವಿದೆ. ಇದೇ ಮೊದಲ ಬಾರಿಗೆ ಊಬರ್ ಭಾರತದಲ್ಲಿ ಇದನ್ನು ಜಾರಿಗೆ ತಂದಿದೆ.
ಬೆಂಗಳೂರು, ದೆಹಲಿ, ಎನ್‌ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆಯಲ್ಲಿ ಈ ಸೇವೆ ಲಭ್ಯವಿದೆ. 1 ಗಂಟೆ/ 10 ಕಿ. ಮೀ. ಆಟೋ ಬಾಡಿಗೆ ಪಡೆಯಲು 169 ರೂ. ಪಾವತಿ ಮಾಡಬೇಕು. ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ದರದಲ್ಲಿ ವ್ಯತ್ಯಾಸವಿದ್ದು, 8 ಗಂಟೆ ತನಕ ಬಾಡಿಗೆ ಪಡೆಯಲು ಅವಕಾಶವಿದೆ.

'ಲಾಕ್ ಡೌನ್ ಮುಗಿದ ಬಳಿಕ ಎಲ್ಲಾ ನಗರದಲ್ಲಿ ವಾಣಿಜ್ಯ ಚಟುವಟಿಕೆ ಆರಂಭವಾಗಿದೆ. ಆಟೋಗಳನ್ನು ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ನೀಡುವುದರಿಂದ ಜನರಿಗೆ ಬೇರೆ-ಬೇರೆ ಕಡೆ ಸಂಚಾರ ನಡೆಸಲು ಅನುಕೂಲವಾಗಲಿದೆ' ಎಂದು ಊಬರ್ ಹೇಳಿದೆ.
'ಭಾರತದಲ್ಲಿ ಆಟೋ ಬಹಳ ಜನರು ಬಳಕೆ ಮಾಡುವ ವಾಹನವಾಗಿದೆ. ಕಡಿಮೆ ದರದಲ್ಲಿ ಆಟೋಗಳನ್ನು ಬಾಡಿಗೆಗೆ ನೀಡುವ ಮೂಲಕ ಜನರನ್ನು ತಲುಪಲು ನಾವು ಪ್ರಯತ್ನ ನಡೆಸುತ್ತಿದ್ದೇವೆ' ಎಂದು ಊಬರ್ ಪ್ರಕಟಣೆಯಲ್ಲಿ ಹೇಳಿದೆ.
ಕೋವಿಡ್ ಸಂದರ್ಭದಲ್ಲಿ ಆಟೋದಲ್ಲಿ ಸಾಮಾಜಿಕ ಅಂತರ ಕಾಪಾಡಲು ಊಬರ್ ಬಜಾಜ್ ಜೊತೆ ಒಪ್ಪಂದ ಮಾಡಿಕೊಂಡಿದೆ. 1 ಲಕ್ಷ ಆಟೋಗಳಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ನಡುವಿನ ಅಂತರ ಕಾಪಾಡಲು ಸ್ಕ್ರೀನ್ ಆಳವಡಿಕೆಯನ್ನು ಬಜಾಜ್ ಮಾಡಿಕೊಡಲಿದೆ.
ಭಾರತದ 20 ನಗರಗಳ 1 ಲಕ್ಷ ಆಟೋ ಚಾಲಕರಿಗೆ ಊಬರ್ ಸುರಕ್ಷತಾ ಕಿಟ್ ಸಹ ವಿತರಣೆ ಮಾಡಿದೆ. ಚಾಲಕರು ಮಾಸ್ಕ್ ಧರಿಸುವುದನ್ನು ಊಬರ್ ಕಡ್ಡಾಯಗೊಳಿಸಿದೆ.











Click it and Unblock the Notifications