ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಪೀಡಿತ ಕೇರಳಕ್ಕೆ 700 ಕೋಟಿ ಆರ್ಥಿಕ ನೆರವು ಕೊಟ್ಟ ಯುಎಇ

By Manjunatha
|
Google Oneindia Kannada News

ಕೊಚ್ಚಿ, ಆಗಸ್ಟ್ 21: ಪ್ರವಾಹ ಪೀಡಿತ ಕೇರಳಕ್ಕೆ ಯುಎಇ ಸರ್ಕಾರವು 700 ಕೋಟಿ ರೂಪಾಯಿ ನೆರವು ಘೋಷಿಸಿದೆ. ಈ ವಿಷಯವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗಳಿಗೆ ತಿಳಿಸಿದ್ದು, ಅರಬ್ ದೇಶಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಯುಎಇಯು ಕೆಲವು ದಿನಗಳ ಹಿಂದೆಯಷ್ಟೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ರಚಿಸಿ ಕೇರಳದ ಸಹಾಯಕ್ಕೆ ನಿಂತಿತ್ತು. ಇದೀಗ 700 ಕೋಟಿ ಮೊತ್ತ ನೀಡುವ ಮೂಲಕ ತಾನು ಕೇರಳದ ಜೊತೆಗಿದ್ದೇನೆ ಎಂದು ತೋರಿಸಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಅರಬ್ ದೇಶದ ಯಶಸ್ಸಿನಲ್ಲಿ ಕೇರಳ ಜನರ ಬಹುದೊಡ್ಡ ಪಾಲಿದೆ, ಅವರ ಸಹಾಯಕ್ಕೆ ನಾವು ಬದ್ಧ ಎಂದು ಇತ್ತೀಚೆಗಷ್ಟೆ ಯುಎಇನ ಅಧ್ಯಕ್ಷ ಶೇಖ್ ಖಲೀಫಾ ಹೇಳಿದ್ದರು. ಈಗ ಅವರು ನುಡಿದಂತೆ ನಡೆದಿದ್ದಾರೆ.

UAE government gives 700 crore help to Kerala

ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!

ಕೇರಳದಲ್ಲಿ ಪ್ರವಾಹದಿಂದ ಈವರೆಗೆ 20000 ಕೋಟಿಗೂ ಹೆಚ್ಚಿನ ಹಾನಿ ಉಂಟಾಗಿದೆ. ಕೇಂದ್ರ ಸರ್ಕಾರವು 500 ಕೋಟಿ ಹಣವನ್ನು ಕೇರಳಕ್ಕಾಗಿ ಬಿಡುಗಡೆ ಮಾಡಿದೆ. ಜೊತೆಗೆ ಕೇರಳ ಪ್ರವಾಹನ್ನು 'ಗಂಭೀರ ಸ್ವರೂಪದ ಪ್ರಾಕೃತಿಕ ವಿಕೋಪ' ಎಂದು ಘೋಷಿಸಿದೆ. ಆದರೆ ಯುಎಇಯು ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವಿಗಿಂತಲೂ ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಘೋಷಿಸಿದೆ.

ನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾ ನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾ

UAE government gives 700 crore help to Kerala

ಅರಬ್ ದೇಶಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಲಯಾಳಿಗಳು ವಾಸವಿದ್ದು, ಹಲವಾರು ದಶಕಗಳಿಂದಲೂ ಕೇರಳಿಗರು ಅರಬ್ ದೇಶದಲ್ಲಿ ದುಡಿಯುತ್ತಿದ್ದಾರೆ. ಹಾಗಾಗಿ ಅರಬ್ ದೇಶಕ್ಕೆ ಕೇರಳಿಗರ ಮೇಲೆ ವಿಶೇಷ ಮಮತೆ.

English summary
UAE government gives 700 crore rupees help to flood affected Kerala. It already created a comity to help Kerala. Central government given 500 crore for Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X