ಯೋಧರ ವೇಷದಲ್ಲಿ 94 ಕೆಜಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ತ್ರಿಪುರ, ಮಾರ್ಚ್ 2: ಯೋಧರ ವೇ‍ಷ ಧರಿಸಿ 94 ಕೆಜಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 29 ರಂದು ಈ ಘಟನೆ ನಡೆದಿದ್ದು, ಬಂಧಿತರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಿ ಎಸ್ ಎಫ್ ಯೋಧರ ಯೂನಿಫಾರ್ಮ್ ತೊಟ್ಟು, ಯೋಧರು ಬಳಸುವ ಜೀಪ್ ನಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಸದ್ಯಕ್ಕೆ ಅವರಿಂದ ಬಿ ಎಸ್ ಎಫ್ ನಕಲಿ ಗುರುತಿನ ಚೀಟಿಯನ್ನು ಮತ್ತು 94 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Two Fake BSF Persons Arrested Tripura

ದೇಶ ಕಾಯುವ ಯೋಧರ ವೇಷ ಧರಿಸಿ ಗಾಂಜಾ ಸೇವಿಸಿರುವುದು, ಯೋಧರ ಬಟ್ಟೆ ಧರಿಸಿರುವುದು ಹಾಗೂ ಯೋಧರ ಗುರುತಿಸಿ ಚೀಟಿ ನಕಲು ಮಾಡಿರುವುದು, ಯೋಧರು ಬಳಸುವಂತಹ ವಾಹನ ಬಳಸಿರುವುದು, ಇದೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ.

ದೇಶದ ಸುರಕ್ಷಿತೆ ಬಗ್ಗೆ ಬಹಳ ದೊಡ್ಡ ಮಟ್ಟದ ಚರ್ಚೆಗಳು ನಡೆದಿದೆ. ಇಂತಹ ಸಮಯದಲ್ಲಿ ಯೋಧರ ವೇಷ ಧರಿಸಿ ಇಂತಹ ಅಕ್ರಮವೆಸಗಿರುವುದು ಸೈನಿಕರ ಭದ್ರತೆ ಬಗ್ಗೆಯೂ ಪ್ರಶ್ನಿಸುವಂತಿದೆ. ಇವರಿಗೆ ಯೋಧರು ಬಳಸುವಂತಹ ವಾಹನ, ಬಟ್ಟೆ ಸಿಕ್ಕಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+