ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿ ವೃದ್ಧ ಮಹಿಳೆಗೆ ಆನ್‌ಲೈನ್‌ನಲ್ಲಿ ವಂಚನೆ: ಆಫ್ರಿಕನ್‌ ಪ್ರಜೆಗಳ ಬಂಧನ

|
Google Oneindia Kannada News

ಅಹಮದಾಬಾದ್, ಡಿಸೆಂಬರ್‌ 26: ಗುಜರಾತ್‌ನ ಅಹಮದಾಬಾದ್‌ನ ವೃದ್ಧ ಮಹಿಳೆಯೊಂದಿಗೆ ಆನ್‌ಲೈನ್‌ನಲ್ಲಿ ನಕಲಿ ಗುರುತಿನ ಮೂಲಕ ಸ್ನೇಹ ಬೆಳೆಸಿ ವಂಚಿಸಿರುವ ಆಫ್ರಿಕನ್‌ ಪ್ರಜೆಗಳನ್ನು ಬಂಧಿಸಲಾಗಿದೆ.

ಉಡುಗೊರೆಗಳು ಮತ್ತು ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್‌ನಿಂದ ಬಿಡುಗಡೆ ಮಾಡಿಸಿಕೊಳ್ಳಲು ಹಣ ನೀಡುವಂತೆ ಹೇಳಿ 34 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಈ ಇಬ್ಬರು ಆಫ್ರಿಕನ್ನರನ್ನು ಸೆರೆ ಹಿಡಿಯಲಾಗಿದೆ.

ಕ್ರಿಸ್‌ಮಸ್‌: ಡಿಸೆಂಬರ್‌ 21ರಿಂದ ಮಂಗಳೂರು ಜಂಕ್ಷನ್‌- ಗುಜರಾತ್‌ ಉಧ್ನಾ ನಡುವೆ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ ಕ್ರಿಸ್‌ಮಸ್‌: ಡಿಸೆಂಬರ್‌ 21ರಿಂದ ಮಂಗಳೂರು ಜಂಕ್ಷನ್‌- ಗುಜರಾತ್‌ ಉಧ್ನಾ ನಡುವೆ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ

ನೈಜೀರಿಯಾದ ಪ್ರಜೆ ಒಲಬಿಸಿ ಒಕಾಫೋರ್ (29) ಮತ್ತು ಆಕೆಯ ಸಹಚರ ಐವರಿ ಕೋಸ್ಟ್‌ನ ಅಕಾ ಗೆರಾರ್ಡ್ (32) ಅವರನ್ನು ಭಾನುವಾರ ನವದೆಹಲಿಯಲ್ಲಿ ಬಂಧಿಸಿ ಸೋಮವಾರ ಇಲ್ಲಿಗೆ ಕರೆತರಲಾಗಿದೆ ಎಂದು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರಾಧದಲ್ಲಿ ಭಾಗಿಯಾಗಿರುವ ಇತರ ಕೆಲವು ಗ್ಯಾಂಗ್ ಸದಸ್ಯರನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Two African nationals held for duping Guj woman of Rs 34 lakh

ಅಧಿಕೃತ ಪ್ರಕಟಣೆಯ ಪ್ರಕಾರ, 63 ವರ್ಷದ ಮಹಿಳೆಯೊಬ್ಬರು ಡಿಸೆಂಬರ್ 23 ರಂದು ಸೈಬರ್ ಕ್ರೈಂ ಬ್ರಾಂಚ್ ಅನ್ನು ಸಂಪರ್ಕಿಸಿದ್ದಾರೆ. ಕೆಲವು ಅಪರಿಚಿತ ವ್ಯಕ್ತಿಗಳು 33.92 ಲಕ್ಷ ರೂ ಹಣವನ್ನು ವಂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಫ್‌ಐಆರ್‌ ಪ್ರಕಾರ, 'ಆಂಡ್ರೆಸ್ ಮಾರ್ಟಿನೆಜ್' ಎಂದು ಫೇಸ್‌ಬುಕ್ ಐಡಿ ಹೊಂದಿರುವ ವ್ಯಕ್ತಿಯು ಸೆಪ್ಟೆಂಬರ್‌ನಲ್ಲಿ ವಯಸ್ಸಾದ ಮಹಿಳೆಯೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ್ದು, ತಾನು ಸ್ಕಾಟ್‌ಲ್ಯಾಂಡ್‌ನ ಶ್ರೀಮಂತ ಉದ್ಯಮಿಯಾಗಿದ್ದು, ಆಕೆಯನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಆಕೆ ನಿರಾಕರಿಸಿದಾಗ, ವ್ಯಕ್ತಿಯು ಆಗಾಗ್ಗೆ ಚಾಟ್ ಮಾಡುವ ಮೂಲಕ ಅವಳ ನಂಬಿಕೆಯನ್ನು ಗಳಿಸಿದ್ದಾನೆ. ವಿದೇಶಿ ಪ್ರವಾಸದ ಸಮಯದಲ್ಲಿ ಬಂದೂಕು ತೋರಿಸಿ ದರೋಡೆ ಮಾಡಲಾಗಿದೆ ಎಂದು ಹೇಳಿಕೊಂಡು ಆರ್ಥಿಕ ಸಹಾಯವನ್ನು ಕೇಳಿದ್ದಾನೆ. ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಹಣವನ್ನು ಹಿಂದಿರುಗಿಸುವುದಾಗಿ ಆತ ಭರವಸೆ ನೀಡಿದರು ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ.

Two African nationals held for duping Guj woman of Rs 34 lakh

ವಂಚಕನ ಆದೇಶದಂತೆ ದೂರುದಾರರು ಎರಡು ತಿಂಗಳ ಅವಧಿಯಲ್ಲಿ ಸುಮಾರು 20 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದಾರೆ. ಆಕೆ ತನ್ನ ಹಣವನ್ನು ಮರಳಿ ಕೇಳಿದಾಗ, ಆರೋಪಿಯು ತಾನು ಬ್ರಿಟಿಷ್ ಪೌಂಡ್‌ನಲ್ಲಿ ಉಡುಗೊರೆಗಳು, ಆಭರಣಗಳು ಮತ್ತು ನಗದು ಹೊಂದಿರುವ ಪಾರ್ಸೆಲ್ ಕಳುಹಿಸಿದ್ದಾಗಿ ಹೇಳಿದ್ದಾನೆ.

ತನ್ನ ನಂಬಿಕೆಯನ್ನು ಗೆಲ್ಲಲು, ಮುಂಬೈ ಮೂಲದ ಕಸ್ಟಮ್ಸ್ ಅಧಿಕಾರಿಯಂತೆ ನಟಿಸುತ್ತಿದ್ದ ಮಹಿಳೆಯೊಬ್ಬರು ಸಂತ್ರಸ್ತೆಗೆ ಕರೆ ಮಾಡಿ, ಪಾರ್ಸೆಲ್ ಪಡೆಯಲು 'ಕಸ್ಟಮ್ಸ್ ತೆರಿಗೆ' ಪಾವತಿಸುವಂತೆ ಕೇಳಿಕೊಂಡಿದ್ದಾರೆ. ಸಂತ್ರಸ್ತೆಯನ್ನು ಮನವೊಲಿಸಲು ಆರೋಪಿಯು ವಿವಿಧ ಪಾರ್ಸೆಲ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದ ಎಂದು ತಿಳಿದುಬಂದಿದೆ.

ನಂತರ ಸಂತ್ರಸ್ತೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ 13 ಲಕ್ಷ ರೂ ಜಮಾ ಮಾಡಿದ್ದಾರೆ. ಇದೆಲ್ಲ ಆದ ನಂತರವೂ, ಆಕೆ ಅನುಮಾನಗೊಂಡು ಸ್ಥಳೀಯ ಬ್ಯಾಂಕ್ ಅನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ನಂತರ ಮಹಿಳೆ ಸೈಬರ್ ಕ್ರೈಂ ಬ್ರಾಂಚ್ ಅನ್ನು ಸಂಪರ್ಕಿಸಿದ್ದಾರೆ.

ನಂತರ ಆರೋಪಿಗಳನ್ನು ಮೊಬೈಲ್ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ವಿವರಗಳ ಮೂಲಕ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವ್ಯಾಪಾರ ಮತ್ತು ವೈದ್ಯಕೀಯ ವೀಸಾಗಳ ಮೇಲೆ ಆಗಸ್ಟ್‌ನಲ್ಲಿ ಭಾರತಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

English summary
Two African nationals were arrested for allegedly duping an from Gujarat's Ahmedabad of Rs 34 lakh by befriending her online
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X