ಪ್ರಧಾನಿ ಮೋದಿ ನಮಗೆ ಕೊಟ್ಟಿದ್ದೂ ಲಾಲಿಪಾಪ್ ಎಂದ ಟ್ವಿಟ್ಟಿಗರು

ವಿರೋಧಪಕ್ಷಗಳು ಜಾತಿಗಳು ಮತ್ತು ಸಮುದಾಯಗಳಿಗೆ 'ಲಾಲಿಪಾಪ್' ನೀಡುತ್ತಿವೆ ಎಂದು ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ವಿರುದ್ಧ ಟ್ವಿಟ್ಟರಿಗರು ಮುಗಿಬಿದ್ದಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಮತಗಳನ್ನು ಸೆಳೆಯುವ ತಂತ್ರವಾಗಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಸಮುದಾಯದ ಜನರಿಗೆ ಲಾಲಿಪಾಪ್ ಆಸೆ ತೋರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಮುದಾಯ, ಜಾತಿ, ಕುಲಗಳನ್ನು ವಿಭಜಿಸುತ್ತವೆ. ಅವರಿಗೆ ಲಾಲಿಪಾಪ್‌ಗಳನ್ನು ನೀಡಲಾಗುತ್ತದೆ. ಕಳೆದ 5- 10 ವರ್ಷಗಳ ಹಿಂದಿನ ಚುನಾವಣೆಗಳನ್ನು ವಿಶ್ಲೇಷಿಸಿದರೆ ಮತಗಳನ್ನು ಪಡೆಯುವುದಕ್ಕಾಗಿ ಈ ರಾಜಕೀಯ ಪಕ್ಷಗಳು ಒಂದು ಜಾತಿಗೆ ಸುಳ್ಳು ಭರವಸೆಗಳನ್ನು ನೀಡುವುದನ್ನು ನೋಡಬಹುದು. ಅಧಿಕಾರಕ್ಕೆ ಬಂದ ಬಳಿಕ ಆ ಜಾತಿಯನ್ನು ಮರೆತುಬಿಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಮತ್ತೊಂದು ಜಾತಿಯತ್ತ ಹೊರಳಿ ಅವರಿಗೆ ಲಾಲಿಪಾಪ್ ನೀಡುತ್ತಾರೆ ಎಂದು ಲೇವಡಿ ಮಾಡಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ಮೋದಿ ಅವರು ಲೋಕಸಭೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಜಾಲಾಡಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

Array

ಲಾಲಿಪಾಪ್ ಹಾಡು

ಮೋದಿ ಅವರ ಲಾಲಿಪಾಪ್ ಹಾಡು ಕೇಳಿ ಎಂದು ಅರುನ್ ಕುರಿಯನ್ ಎಂಬುವವರು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಲಾಲಿಪಾಪ್ ಸುಳ್ಳುಗಳ ಫ್ಲೇವರ್ ಹೊಂದಿದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹದಿನೈದು ಲಕ್ಷ ರೂಪಾಯಿ, ಎರಡು ಕೋಟಿ ಉದ್ಯೋಗ ಸೃಷ್ಟಿ, ನಾಲ್ಕು ವರ್ಷಗಳಲ್ಲಿ ರೋಸಿಹೋಗುವಷ್ಟು ಸುಳ್ಳುಗಳನ್ನು ಕೇಳಿದ್ದೇವೆ ಎಂದು ಹೇಳಿದ್ದಾರೆ.

ಲಾಲಿಪಾಪ್ ಹಂಚಿದ ಪ್ರಧಾನಿ

ನಮಗೆ ಬೇಕಿರುವುದು ತಾನು ನೀಡಿರುವ ಭರವಸೆಗಳನ್ನು ಈಡೇರಿಸುವ ಪ್ರಧಾನಿಯೇ ಹೊರತು, ನಮ್ಮನ್ನು ವಿಭಜಿಸುವವರಲ್ಲ. ಆದರೆ, ಅದರ ಬದಲು ನಾವು ಲಾಲಿಪಾಪ್‌ಗಳನ್ನು ಹಂಚಿರುವ ಪ್ರಧಾನಿಯನ್ನು ಪಡೆದಿದ್ದೇವೆ. ಅವರು ನಮ್ಮಲ್ಲೀಗ ಶೂನ್ಯ ವಿಶ್ವಾಸಾರ್ಹತೆ ಬಿಟ್ಟು ಹೋಗಿದ್ದಾರೆ ಎಂದು ಡಾ. ಧನಂಜಯ್ ಕೆ ಎಂಬುವವರು ಟೀಕಿಸಿದ್ದಾರೆ.

ಭ್ರಷ್ಟರಿಗೆ ಟಿಕೆಟ್

ಅಪನಗದೀಕರಣದ ಬಳಿಕ ಭ್ರಷ್ಟಾಚಾರ ಕೊನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಮತ್ತೊಂದೆಡೆ ಬಿಜೆಪಿ ಭ್ರಷ್ಟ ಮುಖಂಡರಿಗೆ ಚುನಾವಣಾ ಟಿಕೆಟ್ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರತಿಯೊಂದು ನಡೆಯ ಹಿಂದೆಯೂ ಭ್ರಷ್ಟಾಚಾರ ಪ್ರಮುಖ ಪಾತ್ರವಹಿಸುತ್ತಿದೆ ಎಂದು ವೈಲ್ಡ್ ಚೈಲ್ಡ್ ಹೆಸರಿನಲ್ಲಿ ಟ್ವೀಟ್ ಮಾಡಲಾಗಿದೆ.

ಮೂರ್ಖರನ್ನಾಗಿಸುವ ಪ್ರಯತ್ನ

ಮೋದಿ ಅವರು 2014ರಲ್ಲಿ ತುಂಬಾ ಭರವಸೆಗಳನ್ನು ನೀಡಿದ್ದರು. ಆದರೆ ಅವೆಲ್ಲವೂ ಅಧಿಕಾರಕ್ಕೆ ಬರಲು ದೇಶದ ಜನರನ್ನು ಮೂರ್ಖರನ್ನಾಗಿಸುವ ಸುಳ್ಳುಗಳಾಗಿವೆ. ಮುಂದಿನ ಕಂತಿಗಾಗಿ ಸಮಯ ಬರುತ್ತಿದೆ ಎಂದು ಎಲಂಗೊ ಸುಬ್ರಮಣಿಯನ್ ಹೇಳಿದ್ದಾರೆ.

ಬೆಂಗಳೂರು ರೈಲಿಗೆ ಕೊಟ್ಟಿದ್ದೆಷ್ಟು?

ಬೆಂಗಳೂರು ಉಪನಗರ ರೈಲಿಗೆ ಕೇಂದ್ರ ಬಜೆಟ್‌ನಲ್ಲಿ 7,000 ಕೋಟಿ ರೂಪಾಯಿ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ರೈಲ್ವೆ ಪಿಂಕ್‌ ಬುಕ್‌ನಲ್ಲಿ ಹಂಚಿಕೆಯಾಗಿರುವುದು ಕೇವಲ 1 ಕೋಟಿ ರೂಪಾಯಿ. ಮೋದಿ ಅವರ ಲಾಲಿಪಾಪ್ ನೀತಿಗೆ ಇದು ಉತ್ತಮ ಉದಾಹರಣೆ ಎಂದು ಶುಭಮ್ ಜೈಸ್ವಾಲ್ ಟೀಕಿಸಿದ್ದಾರೆ.

ಲಾಲಿಪಾಪ್ ನೀಡಿದ ಆಯೋಗ

ಚುನಾವಣಾ ಆಯೋಗವು ಬಿಜೆಪಿಯ ನಕಲಿ ಜಾಹೀರಾತಿನ ಮೇಲೆ ನಿಷೇಧ ಹೇರಿದೆ. ನಿನ್ನೆ ಪ್ರಧಾನಿ ಮೋದಿ ಅವರು ಲಾಲಿಪಾಪ್‌ ಕುರಿತು ಮಾತನಾಡಿದರು. ಆದರೆ, ಇಂದು ಚುನಾವಣಾ ಆಯೋಗ ಕರ್ನಾಟಕದ ಜನರಿಗೆ ಸುಳ್ಳು ಹೇಳಿದ್ದಕ್ಕೆ ದೊಡ್ಡ ಲಾಲಿಪಾಪ್ ಅನ್ನೇ ಅವರಿಗೆ ನೀಡಿದೆ ಎಂದು ಜೆ.ಎಸ್. ಅನ್ವೇಷಾ ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+