ಸೋನು 'ಅಜಾನ್' ವಿವಾದಕ್ಕೆ ಟ್ವಿಟ್ಟರಲ್ಲಿ ಮಿಶ್ರ ಪ್ರತಿಕ್ರಿಯೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 17: ಏಪ್ರಿಲ್ 17ರ ಮುಂಜಾನೆ ಎರಡು ಟ್ವೀಟ್ ಮಾಡಿರುವ ಸೋನು ನಿಗಮ್ ಅವರು ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಅಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಗೆ ಎಚ್ಚರಗೊಳ್ಳಲಿ ಎಂದು ಕೇಳಿದ್ದು ಈಗ ವಿವಾದ, ಚರ್ಚೆ ಹುಟ್ಟುಹಾಕಿದ್ದು, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.

ಸೋನು ನಿಗಮ್ ಅವರು ಯಾಕೆ ಈ ರೀತಿ ಆಡುತಿದ್ದರೋ ಗೊತ್ತಿಲ್ಲ. ಜಾಗರಣೆ ಸಂದರ್ಭದಲ್ಲಿ ರಾತ್ರಿ ಪೂರ ಭಜನೆ ಹೇಳುವಾದ ಮತೀಯತೆ, ಒತ್ತಾಯ ಪೂರ್ವಕ ಆಚರಣೆ ಹೇರಿಕೆ ಎಲ್ಲವೂ ಎಲ್ಲಿ ಹೋಗಿತ್ತೊ ಎಂದು ಒಬ್ಬರು ಪ್ರಶ್ನಿಸಿದ್ದಾರೆ.[ವಿಮಾನದಲ್ಲಿ ಸೋನು ಹಾಡಿನ ವಿವಾದ, ಸಿಬ್ಬಂದಿ ಸಸ್ಪೆಂಡ್]

ಮತ್ತೊಬ್ಬರು ಸೋನು ಮಾದರಿಯಲ್ಲೇ ಟ್ವೀಟ್ ಮಾಡಿ God bless Sonu Nigam. I am not Sonu Nigam, yet I wake every morning to a world where Sonu Nigam exists. when will Sonu Nigam stop Sonu Nigam." ಎಂದು ಕೇಳಿದ್ದಾರೆ. [ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು]

ಅಜಾನ್ ಬಗ್ಗೆ ಸೋನು

ಅಜಾನ್ ಬಗ್ಗೆ ಸೋನು

ಮುಸ್ಲಿಮರ ಬೆಳಗಿನ ನಮಾಜಿನಿಂದ ನನ್ನ ನಿದ್ದೆ ಹಾಳಾಯಿತು ಎಂದು ಗಾಯಕ ಸೋನು ನಿಗಮ್ ಅವರು ಸರಣಿ ಟ್ವೀಟ್ ಮಾಡಿ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೋನು ಅವರ ಟ್ವೀಟ್ಸ್ ಗೆ ಸಹಮತ ಹಾಗೂ ವಿರೋಧ ವ್ಯಕ್ತಪಡಿಸಿದ ಟ್ವೀಟ್ ಗಳು ಬಂದಿವೆ.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]

ಸೋನುಗೆ ರೇಟಿಂಗ್ ಕೊಡಿ

ಸೋನು ವಿವಾದಕ್ಕೆ ಪರಿಹಾರ ಏನು? ಸೋನುಗೆ ರೇಟಿಂಗ್ ಕಡಿಮೆ ಮಾಡಿ ಎಂದು ಸ್ನಾಪ್ ಚಾಟ್ ಮಾದರಿ ಅಪ್ಲಿಕೇಷನ್ ಡೀಗ್ರೇಡ್ ಮಾಡಿ ಎಂದು ಹಾಸ್ಯಮಯ ಟ್ವೀಟ್

ರಾತ್ರಿ ಭಜನೆ ಓಕೆನಾ

ಮುಂಜಾನೆ ಅಜಾನ್ ನಿಂದ ನಿದ್ದೆಗೆಡುತ್ತದೆ ಎಂದಾದರೆ, ರಾತ್ರಿ ಇಡೀ ಭಜನೆ ಮಾಡುವುದು, ಜಾಗರಣೆಯಿಂದ ನಿದ್ದೆಗೆಡುವುದಿಲ್ಲವೇ?

ಮೆರವಣಿಗೆ

ಮೆರವಣಿಗೆ ಹೆಸರಿನಲ್ಲಿ ಅಬ್ಬರದ ಸಂಗೀತ, ಐಟಂ ಸಾಂಗ್ ಹಾಕಿ, ಸಾರ್ವಜನಿಕರಿಗೆ ತೊಂದರೆ ಮಾಡುವುದು ನಡೆಯುತ್ತಲೇ ಇದೆ ಎಂದ ನಟಿ ರೀಚಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There were mixed reactions to the tweets by the singer Sonu Nigams Azaan. A tweet by singer, Sonu Nigam has sent twitterati into a frenzy, he tweeted 'When will this forced religiousness end in India,"
Please Wait while comments are loading...