ಡ್ರೀಂ ಗರ್ಲ್ ಹೇಮಾ ಮಾಲಿನಿಗೆ ಡ್ರೀಂ ಡೀಲ್ ಏನಿದು?
ಮುಂಬೈ, ಜ. 29: ಬಾಲಿವುಡ್ ನಟಿ, ಸಂಸದೆ ಹೇಮಮಾಲಿನಿ ಅವರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ. ನೃತ್ಯ ಅಕಾಡೆಮಿ ಆರಂಭಿಸಲು ಹೇಮಮಾಲಿನಿ ಅವರು ಮುಂಬೈನ ಅಂಧೇರಿಯಲ್ಲಿ ಪಡೆದುಕೊಂಡ ಜಾಗ ಈಗ ವಿವಾದಕ್ಕೆ ಕಾರಣವಾಗಿದೆ.
ಕೋಟ್ಯಂತರ ರುಪಾಯಿ ಬೆಲೆ ಬಾಳುವ ಭೂಮಿಯನ್ನು ಸಾವಿರಾರು ರುಪಾಯಿಗೆ ಪಡೆದುಕೊಂಡ ಆರೋಪ ಹೇಮಮಾಲಿನಿ ಮೇಲೆ ಹೊರೆಸಲಾಗಿದೆ.
ಓಶಿವಾರ ಪ್ರದೇಶದಲ್ಲಿರುವ ಸುಮಾರು 2,000 ಚದರ ಮೀಟರ್ ವಿಸ್ತ್ರೀರ್ಣದ ಭೂಮಿಯನ್ನು ಸಂಸದೆ ಹೇಮಮಾಲಿನಿಗೆ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯಿದೆ ಮೂಲಕ ಕಾರ್ಯಕರ್ತ ಅನಿಲ್ ಗಲಗಳಿ ಆವರು ಬಹಿರಂಗ ಪಡಿಸಿದ್ದಾರೆ. ಕೋಟ್ಯಂತರ ಬೆಲೆ(40 ಕೋಟಿ ರು ಎಂದು ಅಂದಾಜಿಸಲಾಗಿದೆ) ಬಾಳುವ ಈ ಭೂ ಪ್ರದೇಶ ಕೇವಲ 70,000 ರುಗಳಿಗೆ ಹೇಮ ಮಾಲಿನಿ ಅವರ ವಶವಾಗಿದೆ.
ಇದಕ್ಕೂ ಮುನ್ನ 1977ರಲ್ಲೂ ಅಂದಿನ ಶಿವಸೇನಾ-ಬಿಜೆಪಿ ಸರ್ಕಾರ ಹೇಮಮಾಲಿನಿಗೆ ಸಿಆರ್ ಜಡ್ಜ್(Coastal Regulation Zone) ನಲ್ಲಿದ್ದ ಪ್ರದೇಶವನ್ನು ಕಡಿಮೆ ದರಕ್ಕೆ ಮಂಜೂರು ಮಾಡಿತ್ತು. ಈ ಎರಡು ಮಂಜೂರಾದ ಜಾಗವನ್ನು ಸಂಸದೆಯಾದ ಮೇಲೂ ಹೇಮಮಾಲಿನಿ ಅವರು ಹಿಂತಿರುಗಿಸಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ಅನಿಲ್ ಆಪಾದಿಸಿದ್ದಾರೆ.
ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಸುಮಾರು 18.49 ಕೋಟಿ ರು ವೆಚ್ಚದಲ್ಲಿ ಹೇಮಮಾಲಿನಿ ಅವರು ನೃತ್ಯ ಅಕಾಡೆಮಿಯನ್ನು ಸ್ಥಾಪಿಸಲಿದ್ದಾರೆ. ಮಂಜೂರಾದ ಭೂಮಿಯ ಮೌಲ್ಯದ ಶೇ 25ರಷ್ಟು ಕಂತನ್ನು ಕೂಡಾ ಸರ್ಕಾರಕ್ಕೆ ಕಟ್ಟಿಲ್ಲ ಎಂದು ಅನಿಲ್ ಹೇಳಿದ್ದಾರೆ.

ಹೇಮಮಾಲಿನಿರಿಂದ ಭೂ ಕಬಳಿಕೆ ಇದೇ ಮೊದಲಲ್ಲ
ಇದಕ್ಕೂ ಮುನ್ನ 1977ರಲ್ಲೂ ಅಂದಿನ ಶಿವಸೇನಾ-ಬಿಜೆಪಿ ಸರ್ಕಾರ ಹೇಮಮಾಲಿನಿಗೆ ಸಿಆರ್ ಜಡ್ಜ್(Coastal Regulation Zone) ನಲ್ಲಿದ್ದ ಪ್ರದೇಶವನ್ನು ಕಡಿಮೆ ದರಕ್ಕೆ ಮಂಜೂರು ಮಾಡಿತ್ತು.
|
ಡ್ರೀಂ ಗರ್ಲ್ ಗೆ ಡ್ರೀಮ್ ಡೀಲ್ ಎಂದ ರಾಜ್ ದೀಪ್
ಡ್ರೀಂ ಗರ್ಲ್ ಗೆ ಡ್ರೀಮ್ ಡೀಲ್ ಎಂದು ಟೈಟಲ್ ಕೊಟ್ಟ ರಾಜ್ ದೀಪ್ ಸರ್ದೇಸಾಯಿ. ನಾನು ಕೂಡಾ ಹೇಮಮಾಲಿನಿ ಅಭಿಮಾನಿ ಆದರೆ, ಭೂ ಕಬಳಿಕೆಯಾಗಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
|
ಚದರ ಮೀಟರ್ ಗೆ 140 ರು ನಂತೆ ಮಾರಾಟ
2000 ಚದರ ಮೀಟರ್ ಪ್ರದೇಶವನ್ನು ಪ್ರತಿ ಚ.ಮೀಗೆ 140 ರು ನಂತೆ ಮಾರಾಟ ಮಾಡಲಾಗಿದೆ ಎಂದ ಆರ್ ಟಿಐ ಕಾರ್ಯಕರ್ತ ಅನಿಲ್
|
ಇದಕ್ಕಿಂತ ಬ್ರೇಕಿಂಗ್ ನ್ಯೂಸ್ ಇಲ್ಲಿದೆ ನೋಡಿ
ಇದಕ್ಕಿಂತ ಬ್ರೇಕಿಂಗ್ ನ್ಯೂಸ್ ಇಲ್ಲಿದೆ ನೋಡಿ, ವಾಧ್ರಾ ಅವರು ಹೇಮಮಾಲಿನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರಂತೆ!
|
ಅನ್ ರಿಯಲ್ ಟೈಮ್ಸ್ ನಿಂದ ಫೇಕ್ ಫೇಸ್ ಬುಕ್ ವಾಲ್
ಅನ್ ರಿಯಲ್ ಟೈಮ್ಸ್ ನಿಂದ ಫೇಕ್ ಫೇಸ್ ಬುಕ್ ವಾಲ್ ನಲ್ಲಿ ಬಂದಿರುವ ಸಂದೇಶಗಳು ಹೀಗಿವೆ ಓದಿ ಆನಂದಿಸಿ
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications