ಅತ್ಯಾಚಾರಿ ರಾಮ್ ರಹೀಂಗೆ ಜೈಲು: ಟ್ವಿಟ್ಟರ್ ನಲ್ಲಿ ಅಬ್ಬಬ್ಬಾ ಎಂತೆಂತಾ ಜೋಕ್ಸ್

Posted By:
Subscribe to Oneindia Kannada

ಸ್ವಯಂ ಘೋಷಿತ ದೇವಮಾನವ ಎಂದು ತನ್ನನ್ನು ತಾನೇ ಘೋಷಿಸಿಕೊಂಡು ಮಾಡಬಾರದ ಕೆಲಸವನ್ನು ಮಾಡಿ ಜೈಲಿಗೆ ಸೇರಿರುವ ಡೇರಾ ಸಚ್ಚಾ ಸೌದಾ ಪಂಗಡದ ಧರ್ಮಗುರು ಗುರುಮೀತ್ ರಾಮ್ ರಹೀಮ್ ಸತತವಾಗಿ ನಾಲ್ಕು ದಿನಗಳಿಂದ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದ್ದಾರೆ.

ಸಾಮಾಜಿಕ ತಾಣದಲ್ಲಿ ರಾಮ್ ರಹೀಮ್ ಲೇವಡಿ ಮಾಡುವ ನೂರಾರು ಟ್ವೀಟುಗಳು ಹರಿದಾಡುತ್ತಿವೆ. ಇನ್ನು, ರಾಮ್ ರಹೀಮ್ ಜೊತೆ ಬಿಜೆಪಿ ಮುಖಂಡರನ್ನೂ ಎಳೆದು ತರಲಾಗುತ್ತಿದೆ.

ಬಾಬಾ ರಾಮ್ ರಹೀಂಗೆ 10 ಅಲ್ಲ, 20 ವರ್ಷ ಜೈಲು

ಇಂದು (ಆ 28) ರೋಹ್ಟಕ್ ನಗರದಲ್ಲಿರುವ ಸನಾರಿಯಾ ಜೈಲಿನಲ್ಲಿ ಶಿಕ್ಷೆಯ ಪ್ರಮಾಣ ಘೋಷಣೆಯಾದ ನಂತರ, ಟ್ವಿಟ್ಟಿಗರು ದೇವಮಾನವ ಮತ್ತು ಆತನ ಹಿಂಬಾಲಕರ ವಿರುದ್ದ ಹಾಸ್ಯಾಸ್ಪದ ಟ್ವೀಟ್ ಮಾಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ರಾಮ್ ರಹೀಮ್ ಜೊತೆ ಅವನಿಗೆ ಜೈಲು ಶಿಕ್ಷೆಯ ಆದೇಶ ಹೊರಡಿಸಿದ ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ ಅವರ ಖಡಕ್ ನಿರ್ಧಾರಕ್ಕೆ ಟ್ವಿಟ್ಟಿಗರು ಉಘೇ.. ಉಘೇ... ಅನ್ನುತ್ತಿದ್ದಾರೆ. ಐಪಿಸಿ ಸೆಕ್ಷನ್ 376ರ ಪ್ರಕಾರ ಅತ್ಯಾಚಾರ, ಸೆಕ್ಷನ್ 506ರ ಪ್ರಕಾರ ಜೀವ ಬೆದರಿಕೆ ಹಿನ್ನೆಲೆಯಲ್ಲಿ 20 ವರ್ಷ ಜೈಲು ವಾಸವನ್ನು ರಾಮ್ ರಹೀಂಗೆ ವಿಧಿಸಲಾಗಿದೆ.

ಹದಿನೈದು ವರ್ಷದ ಹಿಂದೆ ಅಂದರೆ 2002ರಲ್ಲಿ ಮಹಿಳೆಯೊಬ್ಬರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಪತ್ರ ಬರೆದು, ನನ್ನನ್ನೂ ಸೇರಿ ಕೆಲವು ಸಾಧ್ವಿಗಳನ್ನು ರಾಮ್ ರಹೀಮ್ ಅತ್ಯಾಚಾರ ಮಾಡಿದ್ದಾನೆಂದು ಪತ್ರದ ಮೂಲಕ ದೂರಿದ್ದರು. ಕೆಲವೊಂದು ಟ್ವೀಟ್ ಸ್ಯಾಂಪಲ್, ಮುಂದೆ ಓದಿ..

ವಿಶ್ವೇಶ್ವರ ಭಟ್ ಅವರ ಟ್ವೀಟ್

ಹತ್ತು ವರ್ಷ ಅತ್ಯಾಚಾರಕ್ಕೆ, ಹತ್ತು ವರ್ಷ ತನ್ನ ಚಿತ್ರದ ಮೂಲಕ ಟಾರ್ಚರ್ ಕೊಟ್ಟಿದ್ದಕ್ಕೆ, ಇನ್ನೊಂದು ವರ್ಷ ತನ್ನ ಭಯಂಕರ ಉಡುಗೆತೊಡುಗೆಗಾಗಿ ರಾಮ್ ರಹೀಂಗೆ ಜೈಲು ಶಿಕ್ಷೆ ನೀಡಿದ್ದರೆ ಚೆನ್ನಾಗಿತ್ತು ಎನ್ನುವ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಟ್ವೀಟ್

ಬಿಜಿಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೊತೆ ಟ್ವೀಟ್

ಕೋರ್ಟ್ ಆದೇಶ ಹೊರಬೀಳುತ್ತಲೇ ಬಿಜಿಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಮ್ ರಹೀಮ್ ನನ್ನು ಅನ್ ಫಾಲೋ ಮಾಡುತ್ತಿದ್ದಾರೆ ಎನ್ನುವ ಶಾ ಫೋಟೋದೊಂದಿಗೊಂದು ಟ್ವೀಟ್.

ಸ್ವಯಂಘೋಷಿತ ದೇವಮಾನವ ಅಸರಾಂ ಬಾಪು

ಇನ್ನೊಬ್ಬ ಸ್ವಯಂಘೋಷಿತ ದೇವಮಾನವ ಅಸರಾಂ ಬಾಪು ಜೊತೆ ರಾಮ್ ರಹೀಮ್ ಹೋಲಿಕೆ ಮಾಡಿ, ಜೈಲಿನಲ್ಲಿ ಅಸರಾಂ, ರಾಮ್ ರಹೀಂಗಾಗಿ ಕಾಯುತ್ತಿದ್ದಾರೆ ಎನ್ನುವ ಟ್ವೀಟ್.

ರಾಮ್ ರಹೀಮ್ ಸಿಂಗ್ ಬಾಲಿವುಡ್ ನಟನ ವಕೀಲರನ್ನು ಆಯ್ಕೆ ಮಾಡಬೇಕಿತ್ತು

ರಾಮ್ ರಹೀಮ್ ಸಿಂಗ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಕೀಲರನ್ನು ತನ್ನ ಪರ ವಾದಿಸಲು ನೇಮಿಸಬೇಕಾಗಿತ್ತು.

ಸಿಂಗಂ ಸ್ಟೈಲಿನಲ್ಲಿ ಎಳೆದುಕೊಂಡು ಬರುತ್ತಿರುವ ಚಿತ್ರ

ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಸಾಬೀತು. ಅಜಯ್ ದೇವಗನ್, ರಾಮ್ ರಹೀಮ್ ಸಿಂಗ್ ನನ್ನು ಸಿಂಗಂ ಸ್ಟೈಲಿನಲ್ಲಿ ಎಳೆದುಕೊಂಡು ಬರುತ್ತಿರುವ ಫೋಟೋಶಾಪ್ ಮಾಡಿರುವ ಚಿತ್ರ ಹಾಕಿ ಟ್ವೀಟ್

ತಾನು ನಿರ್ಮಿಸಿದ ಚಿತ್ರಕ್ಕಾಗಿಯೇ ಬಂಧಿಸಬೇಕಾಗಿತ್ತು

ರಾಮ್ ರಹೀಮ್ ನನ್ನು ತಾನು ನಿರ್ಮಿಸಿದ ಚಿತ್ರಕ್ಕಾಗಿಯೇ ಬಂಧಿಸಬೇಕಾಗಿತ್ತು ಎನ್ನುವ ಟ್ವೀಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soon after CBI court verdict of 20 years jail term to Dera Sacha Sauda chief Gurmeet Ram Rahim Singh, Twitter flooded with funny jokes. Here is some of the samples.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ