ಟ್ವಿಟ್ಟರ್ ಉದ್ದೇಶಪೂರ್ವಕವಾಗಿಯೇ ನಿಯಮ ಪಾಲಿಸುತ್ತಿಲ್ಲ: ರವಿಶಂಕರ್ ಪ್ರಸಾದ್
ನವದೆಹಲಿ, ಜೂನ್ 16: ಹೊಸ ಐಟಿ ನಿಯಮಗಳನ್ನು ಅನುಸರಿಸಲು ಟ್ವಿಟ್ಟರ್ ವಿಫಲವಾಗಿದೆ. ಅನೇಕ ಅವಕಾಶಗಳನ್ನು ನೀಡಿದ್ದರೂ ಉದ್ದೇಶಪೂರ್ವಕವಾಗಿ ಪಾಲಿಸದಿರುವ ನಿರ್ಧಾರವನ್ನು ತೆಗೆದುಕೊಂಡಂತಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಹೊಸ ಐಟಿ ನಿಯಮ ಪಾಲಿಸದ ಬಗ್ಗೆ ಕೂನಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಡಿರುವ ಪ್ರಸಾದ್, ತಮ್ಮನ್ನು ತಾವು ವಾಕ್ಚಾತುರ್ಯದ ಧ್ವಜ ಧಾರಕ ಎಂದು ಬಿಂಬಿಸಿಕೊಳ್ಳುವ ಟ್ವಿಟರ್, ಮಧ್ಯವರ್ತಿ ಮಾರ್ಗಸೂಚಿಗಳಿಗೆ ಬಂದಾಗ ಉದ್ದೇಶಪೂರ್ವಕವಾಗಿ ಧಿಕ್ಕರಿಸುವ ಮಾರ್ಗವನ್ನು ಆರಿಸಿಕೊಳ್ಳುವುದು ಆಶ್ಚರ್ಯಕರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಹೊಸ ಮಾರ್ಗಸೂಚಿಗಳ ಅಳವಡಿಕೆಗೆ ಟ್ವಿಟ್ಟರ್ ಹೆಚ್ಚಿನ ಕಾಲಾವಕಾಶ ಕೋರಿತ್ತು. ಆದರೆ ನಮ್ಮ ನಿರಂತರ ಮನವಿಗಳು ಹಾಗೂ ಸಮಯ ವಿಸ್ತರಣೆಯಾಚೆಗೂ ಐಟಿ ನಿಯಮಗಳನ್ನು ಒಪ್ಪಿಕೊಳ್ಳಲು ಅದು ವಿಫಲವಾಗಿದೆ.

ಇದರೊಂದಿಗೆ ಟ್ವಿಟ್ಟರ್, ಭಾರತದಲ್ಲಿನ ತನ್ನ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ. ಇನ್ನು ಮುಂದೆ ಅದು ಯಾವುದೇ ಮೂರನೇ ವ್ಯಕ್ತಿಯ ವಿಚಾರಗಳಿಗೆ ಐಪಿಸಿ ಅಡಿಯಲ್ಲಿ ಕಾನೂನು ಕ್ರಮ ಎದುರಿಸಲು ಅರ್ಹವಾಗಿದೆ' ಎಂದು ಸರಕಾರದ ಮೂಲಗಳು ತಿಳಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ನಿಯಮಗಳನ್ನು ಅನುಸರಿಸಲು ಟ್ವಿಟರ್‌ಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ ಎಂದು ಪ್ರಸಾದ್ ಪ್ರತಿಪಾದಿಸಿದರು. ಆದರೆ ಉದ್ದೇಶಪೂರ್ವಕವಾಗಿ ಪಾಲಿಸದಿರುವ ಹಾದಿಯನ್ನು ಆರಿಸಿಕೊಂಡಿದೆ ಎಂದರು.
'ಸುರಕ್ಷಿತ ಬಂದರು ನಿಬಂಧನೆಗೆ ಟ್ವಿಟರ್‌ಗೆ ಅರ್ಹತೆ ಇದೆಯೇ ಎಂಬ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. ಆದಾಗ್ಯೂ, ಈ ವಿಷಯವಾಗಿ ಹೇಳಬೇಕೆಂದರೆ ಮೇ 26ರಿಂದ ಜಾರಿಗೆ ಬಂದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.












Click it and Unblock the Notifications