ಏರ್ ಇಂಡಿಯಾ ಟ್ವಿಟ್ಟರ್ ಖಾತೆ ಹ್ಯಾಕ್! ಆತಂಕದಲ್ಲಿ ಪ್ರಯಾಣಿಕರು
ನವದೆಹಲಿ, ಮಾರ್ಚ್ 15: ಏರ್ ಇಂಡಿಯಾ ವಿಮಾನಯಾನದ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ.
ಏರ್ ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸಾಲು ಸಾಲು ಟ್ವೀಟ್ ಗಳನ್ನು ಪೋಸ್ಟ್ ಮಾಡಲಾಗಿದ್ದು, ಒಂದು ಟ್ವೀಟ್ ನಲ್ಲಿ 'ಏರ್ ಇಂಡಿಯಾದ ಎಲ್ಲ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ' ಎಂದು ಹಾಕಲಾಗಿತ್ತು.
ಕೆಲ ಕ್ಷಣಗಳಲ್ಲಿ ಏರ್ ಇಂಡಿಯಾದ ಟ್ವಿಟ್ಟರ್ ಖಾತೆಯ ಹೆಸರನ್ನೂ ಬದಲಿಸಲಾಗಿತ್ತು. ಗುರುವಾರ ಬೆಳಗ್ಗಿನ ಜಾವ ಈ ಬೆಳವಣಿಗೆ ನಡೆದಿದ್ದು, ಈ ಕುರಿತು ಏರ್ ಇಂಡಿಯಾದಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.

ಸಾವಿರಕ್ಕೂ ಹೆಚ್ಚು ಫಾಲೋವರ್ ಗಳಿರುವ ಏರ್ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ 'ಎಲ್ಲಾ ಫ್ಲೈಟ್ ಗಳೂ ರದ್ದಾಗಿವೆ' ಎಂದು ಒಮ್ಮೆಲೇ ಟ್ವೀಟ್ ಪೋಸ್ಟ್ ಆಗಿದ್ದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಟ್ವಿಟ್ಟರ್ ಖಾತೆಯಲ್ಲಿ ಟರ್ಕಿಶ್ ಪರವಾಗಿ ಟ್ವೀಟ್ ಗಳನ್ನು ಮಾಡಲಾಗುತ್ತಿದ್ದು, ಇದನ್ನು ಅಯ್ಯಿಲ್ದಿಜ್ ಟಿಮ್ (Ayyildiz Tim) ಎಂಬ ಟರ್ಕಿಶ್ ಸೈಬರ್ ಆರ್ಮಿ ಹ್ಯಾಕ್ ಮಾಡಲಾಗಿದೆ ಎನ್ನಲಾಗುತ್ತಿದೆ.












Click it and Unblock the Notifications