ಕೆಸಿಆರ್ ವಿರುದ್ಧ ಟ್ವೀಟ್ ಆರೋಪ: ಸುನೀಲ್ ಕಣಗೋಲುಗಾಗಿ ಹುಡುಕಾಟ- ಕಾಂಗ್ರೆಸ್ ಕಿಡಿ
ಹೈದರಾಬಾದ್ ಡಿಸೆಂಬರ್ 14: ಸಿಎಂ ಕೆಸಿಆರ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಹೈದರಾಬಾದ್‌ನಲ್ಲಿರುವ ಪಕ್ಷದ ಚುನಾವಣಾ ತಂತ್ರಗಾರ ಎಂಬ ಬಿರುದಾಕಿಂತ ಸುನೀಲ್ ಕಣಗೋಲು ಅವರಿಗಾಗಿ ಶೋಧ ಕಾರ್ಯ ಶುರು ಮಾಡಿದ್ದಾರೆ. ಈಗಾಗಲೇ ಪಕ್ಷದ ಕೆಲವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಕಾಂಗ್ರೆಸ್ ಪ್ರಕಾರ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಆರೋಪದ ಮೇಲೆ ಚುನಾವಣಾ ತಂತ್ರ ತಂಡದ ಐವರನ್ನು ಬಂಧಿಸಲಾಗಿದೆ.
"ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕಣಗೋಲು ಅವರ ಕಚೇರಿಯಲ್ಲಿ ಸೈಬರ್ ಪೊಲೀಸರು ಸಿಬ್ಬಂದಿಗಳನ್ನು ಭಯಭೀತಗೊಳಿಸುತ್ತಿರುವುದು, ಕೆಸಿಆರ್ ಕಾಂಗ್ರೆಸ್ ಬಗ್ಗೆ ಎಷ್ಟು ಭಯಭೀತರಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹೀಗಿರುವಾಗ ಅವರ ಮಗ ಮತ್ತು ಮಗಳು ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಬೋಧಿಸುತ್ತಿರುವುದು ಎಂತಹ ವಿಪರ್ಯಾಸ" ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಸುನೀಲ್ ಕಣಗೋಲುಗಾಗಿ ಹುಡುಕಾಟ
ಸುನೀಲ್ ಕಣಗೋಲು ಅವರ ಕಚೇರಿಯಲ್ಲಿ ಸೈಬರ್ ಪೊಲೀಸರು ಸಿಬ್ಬಂದಿಯನ್ನು ಭಯಭೀತಗೊಳಿಸಿದ್ದಾರೆ. ಇದರಿಂದ ಕೆಸಿಆರ್ ಕಾಂಗ್ರೆಸ್ ಬಗ್ಗೆ ಎಷ್ಟು ಭಯಭೀತರಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಸಿಎಂ ಮಗ ಮತ್ತು ಮಗಳು ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಬೋಧಿಸುತ್ತಿರುವುದು ಎಂತಹ ವಿಪರ್ಯಾಸ ಎಂದು ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಹೇಳಿದ್ದಾರೆ. ರೇವಂತ್ ರೆಡ್ಡಿ ಪ್ರಕಾರ, ಪೊಲೀಸರು ಹುಡುಕಾಟದ ಸಮಯದಲ್ಲಿ ಯಾವುದೇ ದೂರಿನ ಪ್ರತಿ ಅಥವಾ ಎಫ್‌ಐಆರ್ ಹೊಂದಿಲ್ಲ ಅಥವ ದಾಖಲಾದ ಪ್ರತಿಯೂ ಅವರ ಬಳಿ ಇಲ್ಲ. ಸರ್ಚ್ ವಾರೆಂಟ್ ಇಲ್ಲದೆಯೇ ಪೊಲೀಸರು ಕಾಂಗ್ರೆಸ್ ವಾರ್ ರೂಮ್ ಗೆ ನುಗ್ಗಿ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ ಎಂದು ರೇವಂತ್ ರೆಡ್ಡಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
|
ಕೆಸಿಆರ್ ವಿರುದ್ಧ ಕಾಂಗ್ರೆಸ್ ಆರೋಪ
"ಸುಮಾರು 150 ಕಾಂಗ್ರೆಸ್ ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ. ನಾವು ನಾಳೆ ಆಯುಕ್ತರ ಕಚೇರಿ ಎದುರು ಮತ್ತು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ನಾಳೆ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ" ಎಂದು ರೆಡ್ಡಿ ತಿಳಿಸಿದ್ದಾರೆ.
ಐದು ವಿಭಿನ್ನ ವ್ಯಕ್ತಿಗಳಿಂದ ಐದು ದೂರುಗಳನ್ನು ಸ್ವೀಕರಿಸಿದ್ದೇವೆ ಮತ್ತು ಅವುಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

'ಭ್ರಷ್ಟಾಚಾರದ ವಿರುದ್ಧ ಹೋರಾಟ'
ತೆಲಂಗಾಣ ಕಾಂಗ್ರೆಸ್ ದಾಳಿಗಳಿಗೆ ಪ್ರತಿಕ್ರಿಯಿಸಿದೆ. ಪೊಲೀಸರ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೆಸಿಆರ್, ಪಕ್ಷದ ವಾರ್ ರೂಮ್ ಮೇಲೆ ದಾಳಿ ಮಾಡಬಹುದು ಆದರೆ "ಭ್ರಷ್ಟಾಚಾರದ ವಿರುದ್ಧದ ಯುದ್ಧವನ್ನು" ನಿಲ್ಲಿಸಲು ಸಾಧ್ಯವಿಲ್ಲ. ಏನೇ ಆಗಲಿ, ತೆಲಂಗಾಣ ಸಿಎಂ ಮತ್ತು ಅವರ ಕುಟುಂಬದ ಭ್ರಷ್ಟಾಚಾರದ ವಿರುದ್ಧ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಸುನೀಲ್ ಕಣಗೋಲು ಯಾರು?
ಈ ಹಿಂದೆ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ಜೊತೆ ಕೆಲಸ ಮಾಡಿದ್ದ ಸುನೀಲ್ ಕಣಗೋಲು ಈಗ ಮುಂಬರುವ ರಾಜ್ಯ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಸುನೀಲ್ ಅವರು ಕರ್ನಾಟಕ ಚುನಾವಣೆಯೊಂದಿಗೆ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ ಮತ್ತು ನಂತರ ಕಾಂಗ್ರೆಸ್‌ಗಾಗಿ ಪ್ರತಿ ರಾಜ್ಯ ಚುನಾವಣೆಯನ್ನು ನಿಭಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಅವರು ಈ ಹಿಂದೆ 2017 ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿ, ಲೋಕಸಭೆ 2019 ರ ಚುನಾವಣೆಯಲ್ಲಿ ಡಿಎಂಕೆ, ತಮಿಳುನಾಡು 2021 ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪರವಾಗಿ ಚುನಾವಣಾ ಕಾರ್ಯತಂತ್ರವನ್ನು ನಿಭಾಯಿಸಿದರು. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಎಐಎಡಿಎಂಕೆಗೆ ಉತ್ತಮ ಪ್ರದರ್ಶನ ನೀಡಿದ ಮತ್ತು ಪಕ್ಷದ ಕಾರ್ಯತಂತ್ರವನ್ನು ಹೆಚ್ಚಿಸಿದ ಕೀರ್ತಿ ಸುನೀಲ್ ಕಣಗೋಲು ಅವರಿಗೆ ನೀಡಲಾಯಿತು.












Click it and Unblock the Notifications