ನಕಾರಾತ್ಮಕ ಮತದಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು
ನವದೆಹಲಿ, ಸೆ. 27: ಮುಂಬರುವ ಚುನಾವಣೆಯಲ್ಲಿ ನಕಾರಾತ್ಮಕ ಮತದಾನ ಮಾಡುವ ಹಕ್ಕು ಸಿಕ್ಕಿರ್ವ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ ಆರಂಭಗೊಂಡಿದೆ. ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ ಅವರ ಆಮ್ ಆದ್ಮಿ ಪಕ್ಷದವರು ಇದು ಜನತೆಯ ಗೆಲುವು ಎಂದು ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡುವ ಅವಕಾಶದ ಜತೆಗೆ ಹೊಸ ಬಟನ್ ಕೂಡಾ ಮತದಾರರಿಗೆ ವರವಾಗಲಿದೆ.
ಮತದಾನದ ವೇಳೆಯಲ್ಲಿ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ತೀರ್ಪಿನ ಪ್ರಕಾರ ಮತ ಯಂತ್ರಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಸ ವಿನ್ಯಾಸದೊಂದಿಗೆ ಮತಯಂತ್ರ ನೀಡುವ ಭರವಸೆಯನ್ನು ನೀಡಿದೆ.
ಅಭ್ಯರ್ಥಿ ತಿರಸ್ಕರಿಸುವ ಈ ಹೊಸ ವ್ಯವಸ್ಥೆ ಸಹಜವಾಗಿ ಪಕ್ಷಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮುಕ್ತ ಸ್ವಾಗತ ಸಿಕ್ಕಿದೆ. ಪರ -ವಿರೋಧ ಪ್ರತಿಕ್ರಿಯೆಗಳು ಹಾಗೂ ಸುಪ್ರೀಂ ಕೋರ್ಟ್ ಆದೇಶ ಮುಖ್ಯಾಂಶದ ವಿವರ ಮುಂದೆ ಓದಿ...

ಗೊಂದಲ ಬೇಡ
* ಮತದಾರರಿಗೆ ಗೊಂದಲವಾಗದಂತೆ ಎವಿಎಂಗಳಲ್ಲಿ 'none of the above' ಆಯ್ಕೆ ಬಟನ್ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
* ಈ ಹೊಸ ವ್ಯವಸ್ಥೆಯಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಮೂಡುತ್ತದೆ. ಪ್ರಮುಖ ಪಕ್ಷಗಳು ನಕರಾತ್ಮಕ ಮತದಾನ ಪ್ರಕ್ರಿಯೆಯನ್ನು ಸ್ವಾಗತಿಸುವ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಮಾತುಕತೆ ನಡೆಸುತ್ತಿವೆ.
ಚುನಾವಣೆ ಪಾರದರ್ಶಕತೆ
* ನಕಾರಾತ್ಮಕ ಮತದಾನದಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಪಕ್ಷಗಳು ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಒತ್ತಡ ಉಂಟಾಗಲಿದೆ.
* ಈ ಹೊಸ ವ್ಯವಸ್ಥೆಗೆ ಕಾರಣವಾದ ಎನ್ ಜಿಒ ಸಲ್ಲಿಸಿದ್ದ ಅರ್ಜಿ ಪ್ರಕಾರ ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡುವ ಹಕ್ಕು ಮತದಾರನಿಗೆ ಇದೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.
ಸದ್ಯದ ವ್ಯವಸ್ಥೆ ಲೋಪ
* ಸದ್ಯದ ವ್ಯವಸ್ಥೆಯಲ್ಲೂ ಅಭ್ಯರ್ಥಿಯನ್ನು ನಿರಾಕರಿಸುವ ಹಕ್ಕು ಇದೆಯಾದರೂ ಅಭ್ಯರ್ಥಿ ತಿರಸ್ಕರಿಸುವ ಮತದಾರನ ಗೌಪ್ಯತೆ ಉಳಿಸಿಕೊಳ್ಳಲಾಗುತ್ತಿಲ್ಲ.
* ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತಿಲ್ಲ.
* ರಿಜೆಕ್ಟ್ ಆದ ಮತಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಕೂಡಾ ಸ್ಪಷ್ಟತೆ ಇಲ್ಲ. ಶೇ 40ಕ್ಕಿಂತ ಹೆಚ್ಚು ಮತಗಳು ನಿರಾಕರಣೆ ಮತಗಳಾಗಿದ್ದರೆ ಅಥವಾ ಇಬ್ಬರು ಅಭ್ಯರ್ಥಿಗಳ ಎಣಿಕೆ ಟೈ ಆದರೆ ಮಾತ್ರ ಪರಿಶೀಲಿಸಲಾಗುತ್ತಿದೆ.

ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ
* ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ ಅವರು ನಕರಾತ್ಮಕ ಮತದಾನ(right to reject) ಹಾಗೂ ವ್ಯರ್ಥ ಜನಪ್ರತಿನಿಧಿ ಹಿಂದಕ್ಕೆ ಕರೆಸಿಕೊಳ್ಳುವುದು(right to recall) ಜಾರಿಗೆ ತರಲು ಶ್ರಮಿಸಿದವರಾಗಿದ್ದಾರೆ.
* right to recall ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಇನ್ನೂ ಚರ್ಚೆ ನಡೆಯುತ್ತಲೇ ಇದೆ. right to reject ಗೆ ಸದ್ಯಕ್ಕೆ ಬೆಲೆ ಸಿಕ್ಕಿದೆ.

ಕೇಂದ್ರದ ವಿರೋಧ
ಕೇಂದ್ರದ ಯುಪಿಎ ಸರ್ಕಾರ ಮೊದಲಿನಿಂದಲೂ ಮತ ನಿರಾಕರಣೆ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದೆ. ಚುನಾವಣೆ ಎಂದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತಿರಸ್ಕರಿಸುವ ಪ್ರಕ್ರಿಯೆ ಅಲ್ಲ. ಹೊಸ ಬಟನ್ ಗೊಂದಲ ಮೂಡಿಸುತ್ತದೆ ಎಂದು ಪ್ರತಿ ಪಾದಿಸಿದೆ. ಆದರೆ, ಕೆಲವು ಕಾಂಗ್ರೆಸ್ ಶಾಸಕರು ಈ ವ್ಯವಸ್ಥೆಯನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಾರೆ.
|
ರಾಜ್ ದೀಪ್ ಟ್ವೀಟ್
ಸಿಎನ್ ಎನ್ ಐಬಿಎನ್ ಸಂಸ್ಥೆಯ ಮುಖ್ಯಸ್ಥ ರಾಜದೀಪ್ ಸರ್ದೇಸಾಯಿ ಟ್ವೀಟ್ ನಲ್ಲಿ ಕೇಳಿರುವ ಪ್ರಶ್ನೆ
|
ರಾಹುಲ್ ಗಾಂಧಿ ಹೆಸರು ಬದಲಾಯಿಸಿಕೊಳ್ಳುತ್ತಾನಂತೆ ಹೌದೆ?
ರಾಹುಲ್ ಗಾಂಧಿ ಹೆಸರು ಬದಲಾಯಿಸಿಕೊಳ್ಳುತ್ತಾನಂತೆ ಹೌದೆ?
|
ಲೆಕ್ಕಾಚಾರ ಹೇಗಿದೆ
NOTA ಲೆಕ್ಕಾಚಾರ ಹೇಗೆ ನಡೆಯುತ್ತದೆ ವಿವರಣೆ ಇಲ್ಲಿದೆ
|
ಮೋದಿ ಪ್ರತಿಕ್ರಿಯೆ
ಗುಜರಾತ್ ಮುಖ್ಯಮಂತ್ರಿ ಮೋದಿ ಅವರು ನೀಡಿದ ಪ್ರತಿಕ್ರಿಯೆ ಉಲ್ಲೇಖ ಇಲ್ಲಿದೆ
|
49 o ಬದಲಾವಣೆಯೇ?
ಹಾಲಿ ಇರುವ 49 o ನಿಮಯದ ಬದಲಾವಣೆಯೇ ವಿವರ ಇಲ್ಲಿದೆ
|
ಇದಕ್ಕೂ ಕೇಂದ್ರ ಸುಗ್ರಿವಾಜ್ಞೆ
ಸುಪ್ರೀಂಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದರೆ?
|
ಮಾಧ್ಯಮಗಳ ಪಾತ್ರ
ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದೆ ಇನ್ನೇನಿದ್ದರೂ ಮಾಧ್ಯಮಗಳು ಜನ ಜಾಗೃತಿ ಮೂಡಿಸಬೇಕು
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್












Click it and Unblock the Notifications