ರಾಹುಲ್ ಲೈಂಗಿಕತೆಯನ್ನೂ ಉಚಿತ ನೀಡುತ್ತಾರಾ : ಮಧು ಕಿಶ್ವರ್ ಟ್ವೀಟ್

ಬೆಂಗಳೂರು, ಜನವರಿ 30 : "ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಪುರುಷರಿಗೂ ವರ್ಷದ ಇಂತಿಷ್ಟು ದಿನ 'ಉಚಿತ ಲೈಂಗಿಕ ಕ್ರಿಯೆ'ಗೂ ಅವಕಾಶ ಮಾಡಿಕೊಡುವವರೆಗೆ ತಡೆಯಿರಿ" ಎಂದು 'ಮಾನುಷಿ' ಮಾನವ ಹಕ್ಕು ಸಂಸ್ಥೆಯ ಸಂಸ್ಥಾಪಕಿಯಾಗಿರುವ ಮಧುಪೂರ್ಣಿಮಾ ಕಿಶ್ವರ್ ಅವರು ವಿವಾದದ ಕಿಡಿಯೆಬ್ಬಿಸಿದ್ದಾರೆ.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಆಹಾರ ರಕ್ಷಣಾ ಕಾಯ್ದು ಆಹಾರದ ಹಕ್ಕು ನೀಡಲಿದೆ ಮತ್ತು ಪ್ರತಿಯೊಬ್ಬ ಬಡ ನಾಗರಿಕರಿಗೂ ಕನಿಷ್ಠ ಆದಾಯ ಬರುವಂತೆ ಮಾಡುವುದಾಗಿ ರಾಹುಲ್ ಗಾಂಧಿ ವಾಗ್ದಾನ ನೀಡಿದ ಮೇಲೆ, ಬಡತನ ರೇಖೆಗಿಂತ ಕೆಳಗಿನ ನಾಗರಿಕರಿಗೆ ಗೋಧಿ ಮತ್ತು ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಕಾಂಗ್ರೆಸ್ ಬೆಂಬಲಿಗರೊಬ್ಬರು ಟ್ವೀಟ್ ಮಾಡಿದ್ದರು.

ಉಚಿತವಾಗಿ ಗೋಧಿ ಮತ್ತು ಅಕ್ಕಿ ನೀಡುವ ಟ್ವೀಟ್ ಗೆ ಮಧುಪೂರ್ಣಿಮಾ ಕಿಶ್ವರ್ ಅವರು ಮೇಲಿನಂತೆ ಉತ್ತರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಟ್ವೀಟ್ ಕಾಂಗ್ರೆಸ್ ಬೆಂಬಲಿಗರನ್ನು ಕೆರಳಿಸಿದೆ. "ನೀವು ಈ ರೀತಿ ಮಾತಾಡುತ್ತಿರುವುದನ್ನು ನಿಜಕ್ಕೂ ನಂಬಲಿಕ್ಕೆ ಆಗುತ್ತಿಲ್ಲ, ದುಃಖಕರ ಸಂಗತಿ" ಎಂದು ರಾಹುಲ್ ದೇವ್ ಎಂಬುವವರು ಮಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tweeples fume as Madhu Kishwar mocks Rahul Gandhi

ಅಶೋಕ್ ಕನ್ನಡದ ಕಂದ ಎಂಬ ಟ್ವಿಟ್ಟರ್ ಖಾತೆ ಇರುವವರು, ನೀವೆಂದಾದರೂ ಲೈಂಗಿಕ ಕ್ರಿಯೆಗೆ ಹಣ ನೀಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಅವರು ಯಾವತ್ತೂ ಹಣ ನೀಡುತ್ತಾರೆ, ಅದು ಪುರುಷರಿಂದ ಪುರುಷರಿಗೆ ಬದಲಾಗುತ್ತದೆ ಎಂದು ಒಬ್ಬರು ಚಾಟಿ ಬೀಸಿದ್ದಾರೆ. ಒಂದಾನೊಂದು ಕಾಲದಲ್ಲಿ ಈಶ್ವರನು ಮಿದುಳಿಲ್ಲದ ಕಿಶ್ವರ್ ನನ್ನು ಕಳಿಸಿದ್ದ, ಅದರ ಪರಿಣಾಮವನ್ನು ನಾವೀಗ ನೋಡುತ್ತಿದ್ದೇವೆ ಎಂದು ಮತ್ತೊಬ್ಬರು ಕೆಣಕಿದ್ದಾರೆ.

ಇವೆಲ್ಲಕ್ಕೆ ತಿರುಗೇಟು ನೀಡಿರುವ ಮಧುಪೂರ್ಣಿಮಾ ಕಿಶ್ವರ್ ಅವರು, "ಉಚಿತ ಲೈಂಗಿಕತೆಯನ್ನು ಬೆಂಬಲಿಸಲು ನಾನೇನು ಹುಚ್ಚಿಯಲ್ಲ. ಹಲವಾರು ವಸ್ತುಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿರುವ ರಾಹುಲ್ ಗಾಂಧಿಯವರು, ಲೈಂಗಿಕತೆಯನ್ನೂ ಆ ಪಟ್ಟಿಗೆ ಸೇರಿಸುತ್ತಾರಾ ಎಂದು ಕೆಣಕಿದ್ದಕ್ಕೆ, ನೀಲಿಚಿತ್ರ ವೀಕ್ಷಣೆಯನ್ನು 'ಅಭಿವ್ಯಕ್ತಿ ಸ್ವಾತಂತ್ರ್ಯ' ಎಂದು ನಂಬಿರುವವರು ಬೇಜಾರು ಮಾಡಿಕೊಂಡಿದ್ದು ನೋಡಿ ಅಚ್ಚರಿಯಾಗುತ್ತಿದೆ" ಎಂದು ಕಟಕಿಯಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡುವಂಥ ಬೇಕಾಬಿಟ್ಟಿ ವಾಗ್ದಾನಗಳಿಂದ ನಿಮಗೆ ಯಾವುದೇ ತೊಂದರೆ ಇಲ್ಲವೆ? ಅದು ಉಚಿತ, ಇದು ಉಚಿತ ಎಂದು ಹೇಳುವ ಬದಲು, ಜನರು ತಾವೇ ದುಡಿದು ತಿನ್ನಲು ಅವಕಾಶವಾಗುವಂತೆ ಉದ್ಯೋಗ ಸೃಷ್ಟಿಸಬೇಕು. ಭಾರತವನ್ನು ಭಿಕ್ಷುಕರ ಮನೆಯನ್ನಾಗಿಸಲು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಶಾಕಿಂಗ್ ಆಗಿವೆ. ಅದನ್ನು ಮೋದಿಯವರೇ ಮಾಡಲಿ ರಾಹುಲ್ ಅವರೇ ಮಾಡಲಿ ಎಂದು ಮಧುಪೂರ್ಣಿಮಾ ಕಿಶ್ವರ್ ಅವರು ಕೆಂಡ ಕಾರಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪರವಿರೋಧ ವಾಗ್ದಾದಗಳು, ನಿಂದನೆಗಳು ತಾರಕಕ್ಕೇರುತ್ತಿವೆ. ಕೆಲಬಾರಿ ವೈಯಕ್ತಿಕ ಟೀಕೆಗಳು ಎಲ್ಲೆಯನ್ನು ಮೀರಿ ಪಕ್ಷಕ್ಕೂ ನಾಯಕರಿಗೂ ಮುಜುಗರ ಮಾಡುತ್ತಿವೆ. ಸುಬ್ರಮಣಿಯನ್ ಸ್ವಾಮಿ ಅವರು ಪ್ರಿಯಾಂಕಾ ಗಾಂಧಿ ವದ್ರಾ ಬಗ್ಗೆ ಮಾಡಿರುವ ಟ್ವೀಟ್ ಕೂಡ ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+