ಲೈಂಗಿಕ ಕಿರುಕುಳ ಪ್ರಕರಣದ ಬೆನ್ನಲ್ಲೇ TVF ಸಿಇಒ ರಾಜೀನಾಮೆ

Subscribe to Oneindia Kannada

ಮುಂಬೈ, ಜೂನ್ 16: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ 'ದಿ ವೈರಲ್ ಫೀವರ್' (ಟಿವಿಎಫ್) ಸಿಇಒ ಅರುಣಭ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಇತ್ತೀಚೆಗೆ ನನ್ನ ಮೇಲೆ ನಡೆದ ವೈಯಕ್ತಿಕ ದಾಳಿಗಳಿಂದ ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಹೇಳಿದ್ದಾರೆ.

 TVF CEO Arunabh Kumar steps down after facing sexual harassment charges

ಹೀಗಿದ್ದೂ ತಾವು ಕಂಟೆಂಟ್ ತಂಡದಲ್ಲಿ ಮೆಂಟರ್ ಆಗಿ ಮುಂದುವರಿಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಅರುಣಭ್ ಕುಮಾರ್ ಜಾಗಕ್ಕೆ ಧವಲ್ ಗುಸೇನ್ ನೇಮಕ ಮಾಡಲಾಗಿದೆ.

ಈ ಹಿಂದೆ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನ ಮೇರೆಗೆ ಅರುಣಭ್ ಕುಮಾರ್ ವಿರುದ್ಧ ಮಾರ್ಚ್ 29ರಂದು ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಮತ್ತು 509ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು.

ಅರುಣಭ್ ಕುಮಾರ್ ಐಐಟಿ ಪಧವೀದರರಾಗಿದ್ದು 2011ರಲ್ಲಿ ಟಿವಿಎಫ್ ಕಂಪೆನಿ ಸ್ಥಾಪಿಸಿದ್ದರು. ಅಲ್ಲಿಂದ ಅಂತರ್ಜಾಲ ಮನೋರಂಜನಾ ಸಂಸ್ಥೆಯಾಗಿ ಟಿವಿಎಫ್ ದೊಡ್ಡ ಮಟ್ಟಕ್ಕೆ ಹೆಸರು ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Viral Fever (TVF) CEO Arunabh Kumar steps down from his position after facing sexual harassment charges, says will be available as a mentor in content team.
Please Wait while comments are loading...