ತುನೀಶಾ ಪ್ರಕರಣ: ಸಾವಿಗೂ ಮುನ್ನ ಗೆಳೆಯ ಶೀಜನ್ ಜೊತೆ ಮಾತು- ತನಿಖೆಗೆ ಸಹಕರಿಸದ ಆರೋಪಿ

ಮುಂಬೈ ಡಿಸೆಂಬರ್ 29: ಕಿರುತೆರೆ ನಟಿ ತುನೀಶಾ ಶರ್ಮಾ ಅವರ ನಿಗೂಢ ಸಾವಿನ ಸುತ್ತ ಹಲವಾರು ಅನುಮಾನಗಳು ತನಿಖೆಗಳು ನಡೆಯುತ್ತಿವೆ. 20 ವರ್ಷದ ನಟಿಯ ಆತ್ಮಹತ್ಯೆ ಪ್ರಕರಣದಲ್ಲಿ, ಪೊಲೀಸರು ಕೊಲೆಯ ಅಂಶವನ್ನು ಸಹ ತನಿಖೆ ನಡೆಸುತ್ತಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ವರದಿ ಪ್ರಕಾರ, ನೇಣಿಗೆ ಕೊರಳೊಡ್ಡುವ ಮುನ್ನ ಮೃತ ತುನೀಶಾ ಆರೋಪಿ ಶೀಜನ್‌ಖಾನ್‌ನೊಂದಿಗೆ ಸಂಭಾಷಣೆ ನಡೆಸಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಮಹಾರಾಷ್ಟ್ರದ ವಲಿವ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಆಕೆಯ ತಾಯಿ, ಚಿಕ್ಕಪ್ಪ ಮತ್ತು ಚಾಲಕನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಮಹಾರಾಷ್ಟ್ರದ ವಲಿವ್ ಪೊಲೀಸರು ಬುಧವಾರ ತುನೀಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ, ಆಕೆಯ ಚಿಕ್ಕಪ್ಪ ಪವನ್ ಶರ್ಮಾ ಮತ್ತು ಅವರ ಚಾಲಕನನ್ನು ಕರೆಸಿ ತುನೀಶಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಆರೋಪಿ ತುನೀಶಾ ಅವರ ಗೆಳೆಯ ಮತ್ತು ಸಹನಟ ಶೀಜಾನ್ ಖಾನ್ ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ವಾಲಿವ್ ಪೊಲೀಸರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಇದೊಂದು ಗಂಭೀರ ಮತ್ತು ಹೈ ಪ್ರೊಫೈಲ್ ಪ್ರಕರಣವಾಗಿದ್ದು, ವಿಸ್ತೃತ ತನಿಖೆ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tunishas case: Talk with friend Sheezan before death - Accused not cooperating with investigation

ಪೊಲೀಸರ ಪ್ರಕಾರ, ತುನೀಶಾ ಸಾವಿನ ನಂತರ, ಆಕೆಯ ಸಹನಟ ಶೀಜನ್ ಖಾನ್ ವಿಚಾರಣೆಯ ಸಮಯದಲ್ಲಿ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ ಅಥವಾ ತನಿಖೆಗೆ ಸಹಕರಿಸಲಿಲ್ಲ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಎರಡು ಐಫೋನ್ ಸೇರಿದಂತೆ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೀಜನ್ ಫೋನ್‌ನಿಂದ ತುನೀಶಾ ಮತ್ತು ಆಕೆಯ ತಾಯಿಯೊಂದಿಗೆ ಚಾಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ ಶೀಜನ್ ತನ್ನ ಇನ್ನೋರ್ವ ಗೆಳತಿ ಜೊತೆ ಚಾಟ್ ಮಾಡುತ್ತಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತುನೀಶಾ ಸತ್ತ ದಿನದಂದು ಶೀಜನ್ ತನ್ನ 'ಗೆಳತಿ'ಯೊಂದಿಗೆ ಎರಡು ಗಂಟೆಗಳ ಕಾಲ ಮಾತನಾಡಿದ್ದ ಎಂದು ಅವರು ಹೇಳಿಕೊಂಡಿದ್ದಾರೆ.

Tunishas case: Talk with friend Sheezan before death - Accused not cooperating with investigation

ಶೀಜನ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತುನೀಶಾಳ ತಾಯಿ ಆರೋಪಿಸಿದ್ದಾರೆ. ತುನೀಶಾಳ ತಾಯಿಯ ಹೇಳಿಕೆ ಮೇರೆಗೆ ಶೀಜನ್‌ನನ್ನು ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ತನಿಖೆಯ ಸಮಯದಲ್ಲಿ, ಪೊಲೀಸರು ಶೀಜನ್ನ್‌ನನ್ನು 'ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' ಸೆಟ್‌ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+