TTD Ayurvedic VV: ತಿರುಪತಿಯಲ್ಲಿ ಟಿಟಿಡಿಯಿಂದ ವಿಶ್ವದರ್ಜೆ ಸೌಲಭ್ಯದ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಯೋಜನೆ
ತಿರುಪತಿ, ಡಿಸೆಂಬರ್ 13: ಆಂಧ್ರ ಪ್ರದೇಶದ ತಿರುಮಲದ ದೇವಸ್ಥಾನವು, ಆಡಳಿತ ಮಂಡಳಿಗೆ ತನ್ನದೇ ವೈಶಿಷ್ಯತೆ ಹೊಂದಿದೆ. ಈ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮತ್ತೊಂದು ಮಹತ್ವದ ಯೋಜನೆಗೆ ಕೈ ಹಾಕಿದೆ. ತಿರುಪತಿಯಲ್ಲಿ ವಿಶ್ವದರ್ಜೆಯ ಮೂಲಸೌಲಭ್ಯಗಳು ಮತ್ತು ಸಂಪನ್ಮೂಲ ಇರುವ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಜ್ಜಾಗಿದೆ.
ಆಯುರ್ವೇದದ ಪ್ರಾಚೀನ ವಿಜ್ಞಾನಕ್ಕೆ ಉತ್ತೇಜನ ನೀಡುವ ಮತ್ತು ಮತ್ತು ಮುನ್ನಡೆಸುವ ಮಹತ್ವದ ಕ್ರಮದ ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ತಿರುಪತಿಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಪ್ರಕಟಿಸಿದೆ. ಆಯುರ್ವೇದದಲ್ಲಿ ಕಲಿಯುವ ಉತ್ಸಾಹ ಉಳ್ಳವರಿಗೆ ಇಲ್ಲಿ ಭವಿಷ್ಯದಲ್ಲಿ ಅವಕಾಶ ಸಿಗಲಿದೆ.

ಇತ್ತೀಚೆಗೆ ತಿರುಪತಿಯಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮದ ಉದ್ಘಾಟನೆ ವೇಳೆ ತಿರುಮಲ ತಿರುಪತಿ ದೇವಸ್ಥಾನ (TTD) ಆರೋಗ್ಯ ಮತ್ತು ಶಿಕ್ಷಣದ ಜಂಟಿ ಕಾರ್ಯ ನಿರ್ವಾಹಕ ಅಧಿಕಾರಿ ಸದಾ ಭಾರ್ಗವಿ ವಿಶ್ವವಿದ್ಯಾನಿಲಯದ ಸ್ಥಾಪನೆ ಕುರಿತ ಯೋಜನೆಗಳನ್ನು ಅನಾವರಣಗೊಳಿಸಿದರು.
ಜಾಗತಿಕ ನಾಯಕನಾಗಲು ಭಾರತಕ್ಕೆ ಆಯುರ್ವೇದ ಸೇವೆ ಪೂರಕ
ಆಯುಷ್ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿರುವ ಸಿಎಂಇ ಕಾರ್ಯಕ್ರಮವು ವಿವಿಧ ರಾಜ್ಯಗಳಿಂದ ಭಾಗವಹಿಸುವವರಿಗೆ 12 ಪ್ರಸಿದ್ಧ ಆಯುರ್ವೇದ ತಜ್ಞರು ಸೆಷನ್‌ಗಳನ್ನು ಪ್ರಸ್ತುತದಲ್ಲಿ ನಡೆಸುತ್ತಿದೆ. ವೈದ್ಯಕೀಯ ವಲಯದಲ್ಲಿ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಯೊಂದಿಗೆ ಸಂಯೋಜಿಸಿ ಆರೋಗ್ಯ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸಲು ಆಯುರ್ವೇದ ವೈದ್ಯ ಸೇವೆ ಪೂರಕ ಎಂದು ಭಾರ್ಗವಿಯವರು ಹೇಳಿದರು.

ವೇದಗಳಲ್ಲಿ ಅಡಕವಾಗಿರುವ ವಿಶಾಲವಾದ ವೈದ್ಯಕೀಯ ಜ್ಞಾನವು ಹಾಗು ಇಂದಿನ ಸಮಕಾಲೀನ ಸಂಶೋಧನೆಯೊಂದಿಗೆ ಸಂಯೋಜಿಸಿದಾಗ ಸಮಾಜಕ್ಕೆ ಪರಿಣಾಮಕಾರಿಯಾಗಿ ಪ್ರಯೋಜನ ನೀಡಬಹುದಾಗಿದೆ. ಈ ಮೂಲಕ ಅವರು ಆಯುರ್ವೇದದ ಮಹತ್ವ, ಸಾಮರ್ಥ್ಯವನ್ನು ಒತ್ತಿ ಹೇಳಿದರು.
ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಕಲಿಕೆ ಸಿಗಲಿದೆ
ಟಿಟಿಡಿ ಸ್ಥಾಪಿಸಲು ಉದ್ದೇಶಿಸಿರುವ ಭವಿಷ್ಯದ ಪ್ರಸ್ತಾವಿತ ಆಯುರ್ವೇದ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವ ಹೆಚ್ಚಿಸುವ ಜೊತೆಗೆ ಉನ್ನತ ದರ್ಜೆಯ ಸೌಲಭ್ಯಗಳು ಮತ್ತು ಸಂಪನ್ಮೂಲಗಳಡಿ ಕಲಿಯಲು ಅವಕಾಶ ಕಲ್ಪಿಸುತ್ತದೆ. ಈ ವಲಯದಲ್ಲಿನ ಸಂಶೋಧನಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಆಯುರ್ವೇದದ ಪ್ರಗತಿಗೆ ತಜ್ಞ ವೈದ್ಯರನ್ನು ಕೊಡುಗೆಯಾಗಿ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಆಯುರ್ವೇದ ವಿಶ್ವಿವಿದ್ಯಾಲಯ ಸ್ಥಾಪನೆ ಕುರಿತು ಭಾರ್ಗವಿ ಅವರು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಸಹಮತ ನೀಡಿದರು. ಆದಷ್ಟು ಈ ಶೀಘಗ್ರವೇ ತಿರುಪತಿಯಲ್ಲಿ ನೂತನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಲಿದೆ.












Click it and Unblock the Notifications