Tirumala: ತಿರುಪತಿಗೆ ಭೇಟಿ ನೀಡಿದ ಪವನ್ ಕಲ್ಯಾಣ್ ಕೈಯಲ್ಲಿ 'ಕೆಂಪು ಪುಸ್ತಕ'.. ಏನಿದು?
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು ತಿರುಮಲ ಶ್ರೀಗಳ ದರ್ಶನ ಪಡೆದರು. ಪವನ್ ಕಲ್ಯಾಣ್ ತನ್ನ ಇಬ್ಬರು ಪುತ್ರಿಯರೊಂದಿಗೆ ಮಹಾದ್ವಾರದ ಮೂಲಕ ದೇವಾಲಯಕ್ಕೆ ಪ್ರವೇಶಿಸಿದ ವೇಳೆ ಅವರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ದೇವಸ್ಥಾನ ಭೇಟಿ ವೇಳೆ ಪವನ್ ಕಲ್ಯಾಣ್ ಕೈಯಲ್ಲಿ 'ಕೆಂಪು ಪುಸ್ತಕ' ಇರುವುದು ಕಂಡು ಬಂದಿದೆ.
ಹೌದು.. ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಳಕೆ ಆರೋಪದ ಬಳಿಕ ದೇವಸ್ಥಾನವನ್ನು ಶುದ್ಧೀಕರಣಗೊಳಿಸಲಾಯಿತು. ದೇವಸ್ಥಾನ ಶುದ್ದೀಕರಣದ ಬಳಿಕ ಪವನ್ ಕಲ್ಯಾಣ ಅವರ ಮೊದಲ ಭೇಟಿ ಇದಾಗಿದೆ. ಪವನ್ ತನ್ನ ಇಬ್ಬರು ಪುತ್ರಿಯರೊಂದಿಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡರು. ನಂತರ ದೇವಸ್ಥಾನದ ವಿದ್ವಾಂಸರು ಆಶೀರ್ವಚನ ನೀಡಿದರು.

ಪವನ್ ಕೈಯಲ್ಲಿದ್ದ ಪುಸ್ತಕ ಯಾವುದು?
ಈ ವೇಳೆ ಪವನ್ ಕಲ್ಯಾಣ್ ಅವರ ಕೈಯಲ್ಲಿ ಇದ್ದ ಪುಸ್ತಕ ಎಲ್ಲರ ಗಮನ ಸೆಳೆದಿದೆ. ಇದು ವಾರಾಹಿ ಘೋಷಣೆ ಪುಸ್ತಕ ಎನ್ನಲಾಗುತ್ತಿದೆ. ಇದು ಸನಾತನ ಧರ್ಮಕ್ಕೆ ಸಂಬಂಧಿಸಿದ ಅಂಶಗಳೊಂದಿಗೆ ರಚಿಸಲಾಗಿದೆ. ಗುರುವಾರ ತಿರುಪತಿಯಲ್ಲಿ ನಡೆಯಲಿರುವ ವಾರಾಹಿ ಸಭೆಯಲ್ಲಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಾರಾಹಿ ಘೋಷಣೆ ಪುಸ್ತಕದ ವಿಷಯಗಳನ್ನು ಜನರಿಗೆ ತಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಈ ಪುಸ್ತಕವನ್ನು ಇಂದು ಶ್ರೀವಾರಿ ದರ್ಶನ ವೇಳೆ ತಮ್ಮೊಂದಿಗೆ ತಂದು ಅದನ್ನು ಶ್ರೀವಾರಿ ಪಾದಗಳಿಗೆ ಸ್ಪರ್ಶಿಸಿ ಆಶೀರ್ವಾದ ಪಡೆದರು. ಆ ಬಳಿಕ ಪುಸ್ತಕವನ್ನು ದೇವಸ್ಥಾನದ ಹೊರಗೆ ಮಾಧ್ಯಮದವರಿಗೆ ತೋರಿಸಿದರು. ಇನ್ನೂ ತಿರುಮಲ ಶ್ರೀಗಳ ದರ್ಶನದ ನಂತರ ನಿತ್ಯ ಅನ್ನದಾನ ಕೇಂದ್ರಕ್ಕೆ ತೆರಳಿ ಅಲ್ಲಿ ಅನ್ನಪ್ರಸಾದವನ್ನು ಪವನ್ ಸ್ವೀಕರಿಸಿದರು.
ಕೆಂಪು ಪುಸ್ತಕ ಹೇಗಿದೆ?
ಈ ಪುಸ್ತಕದ ಮುಖಪುಟದ ಮೇಲ್ಭಾಗದಲ್ಲಿ ಕೆಂಪು ಬಣ್ಣದಲ್ಲಿ '!! ಧರ್ಮೋ ರಕ್ಷತಿ ರಕ್ಷಿತಃ !!' ಎಂದು ಬರೆಯಲಾಗಿದೆ. ಹಾಗೆಯೇ ಪುಸ್ತಕದ ಮಧ್ಯದಲ್ಲಿ ವಾರಾಹಿ ಅಮ್ಮನವರ ಚಿತ್ರವಿದೆ.. ಅದರ ನಂತರ ವಾರಾಹಿ ಘೋಷಣೆ ಇದೆ. ತಿರುಪತಿ 03-10-2024 ಎಂದು ಪುಸ್ತಕದ ಕೆಳಭಾಗದಲ್ಲಿ ಮುದ್ರಿಸಲಾಗಿದೆ.

ಪವನ್ ಕಲ್ಯಾಣ್ ಕೈಯಲ್ಲಿದ್ದ ಆ ಪುಸ್ತಕದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಜನ ಅದರಲ್ಲಿ ಏನಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಗುರುವಾರ ತಿರುಪತಿಯಲ್ಲಿ ನಡೆಯಲಿರುವ ವಾರಾಹಿ ಸಭೆಯಲ್ಲಿ ಪವನ್ ಕಲ್ಯಾಣ್ ವಾರಾಹಿ ಘೋಷಣೆ ಪುಸ್ತಕದ ವಿಷಯಗಳನ್ನು ಜನರಿಗೆ ತಿಳಿಸಲಿದ್ದಾರೆ ಎಂದು ಜನಸೇನಾ ಪಕ್ಷ ಹೇಳಿದೆ. ಗುರುವಾರ ಸಂಜೆ 4 ಗಂಟೆಗೆ ತಿರುಪತಿಯ ಬಾಲಾಜಿ ಕಾಲೋನಿ ಸರ್ಕಲ್‌ನ ಎಸ್‌ವಿ ಸಂಗೀತ ಕಾಲೇಜು ಬಳಿಯ ಎಸ್‌ವಿಯು ಕ್ಯಾಂಪ್ ಶಾಲೆಯಲ್ಲಿ ವಾರಾಹಿ ಬಹಿರಂಗ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಪುಸ್ತಕದಲ್ಲಿ ಏನಿದೆ ಎಂದು ತಿಳಿದು ಬರಲಿದೆ.
ಮೆಟ್ಟಿಲು ಹತ್ತಲು ಸುಸ್ತಾದ ಪವನ್!
ಪವನ್ ಕಲ್ಯಾಣ್ ಅವರು ಮಂಗಳವಾರ ಮಧ್ಯಾಹ್ನ ಗನ್ನವರಂ ವಿಮಾನ ನಿಲ್ದಾಣದಿಂದ ರೇಣಿಗುಂಟಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಅಲಿಪಿರಿಗೆ ಬಂದು.. ಅಲಿಪಿರಿಯ ಪಾದಚಾರಿ ಮಾರ್ಗಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಹೊರಟರು. ಪವನ್ ಕಲ್ಯಾಣ್ ಮೆಟ್ಟಿಲು ಹತ್ತುವಾಗ ದಣಿದಂತೆ ಕಂಡುಬಂದಿದ್ದಾರೆ. ಹೀಗಾಗಿ ದಾರಿ ಮಧ್ಯೆ ವಿಶ್ರಾಂತಿ ಪಡೆಯುತ್ತಾ ಸಾಗಿದ್ದು ಕಂಡು ಬಂದಿದೆ. ಈ ವೇಳೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ವೇಳೆ ಎಲ್ಲರ ಕಣ್ಣು ವಾರಾಹಿ ಘೋಷಣೆ ಪುಸ್ತಕದತ್ತ ನೆಟ್ಟಿತ್ತು.












Click it and Unblock the Notifications