TTD: ತಿರುಪತಿ ತಿರುಮಲ ದರ್ಶನ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
TTD: ಆಂಧ್ರಪ್ರದೇಶದಲ್ಲಿನ ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಲಿರುತ್ತಾರೆ. ಅದರಲ್ಲೂ ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬರಲಿದ್ದು, ಇದಕ್ಕೂ ಮುನ್ನವೇ ಇಂದಿನಿಂದ ಅಂದರೆ ಜನವರಿ 9ರಿಂದ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನಕ್ಕೆ ಪ್ರತಿನಿತ್ಯ ಭಕ್ತರ ದಂಡೇ ಆಗಮಿಸುತ್ತದೆ. ಈ ಪ್ರಸಿದ್ಧ ದೇವಾಲಯದಲ್ಲಿ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್ ಮತ್ತು ನೇರವಾಗಿ ಕೌಂಟರ್‌ಗಳಲ್ಲಿ ನೀಡಲಾಗುತ್ತಿದೆ. ಆದರೆ, ಇಂದಿನಿಂದ ಈ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ತಿರುಮಲ ತಿರುಪತಿಯಲ್ಲಿ ಸ್ವಾಮಿ ದರ್ಶನಕ್ಕಾಗಿ ಶ್ರೀ ವಾಣಿ ದರ್ಶನದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತಿತ್ತು. ಈಗ ಈ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯು 1 ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಯಲ್ಲಿ ಇರುತ್ತದೆ ಎಂದು ದೇವಾಲಯದ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಈ ವ್ಯವಸ್ಥೆಯು ಇಂದಿನಿಂದ ಅಂದರೆ ಜನವರಿ 9ರಿಂದ ಜಾರಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಷ್ಟು ದಿನ ಕೌಂಟರ್‌ಗಳ ಮೂಲಕ ಪ್ರತಿದಿನ 800 ಟಿಕೆಟ್‌ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ, ಇದೀಗ ಶ್ರೀವಾಣಿ ದರ್ಶನಕ್ಕಾಗಿ ಬುಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲಾಗಿದೆ. ಆದರೆ, ತಿರುಪತಿ ವಿಮಾನ ನಿಲ್ದಾಣದ ಕೇಂದ್ರದಲ್ಲಿ ಪ್ರತಿದಿನ ನೀಡಲಾಗುವ 200 ಟಿಕೆಟ್‌ಗಳನ್ನು ನೀಡುವುದನ್ನು ಮುಂದುವರೆಸಲಾಗುವುದು. ತಿರುಮಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೋಕುಲಂ ಇನ್ ಬಳಿಯ ಶ್ರೀವಾಣಿ ಟಿಕೆಟ್ ಕೌಂಟರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ನೀಡಲಾಗುತ್ತಿದ್ದ 800 ಟಿಕೆಟ್‌ಗಳನ್ನು ಇಂದಿನಿಂದ ಅಂದರೆ ಜನವರಿ 9ರಿಂದ ಆನ್‌ಲೈನ್‌ನಲ್ಲಿ ವಿತರಣೆ ಮಾಡಲಾಗುತ್ತಿದೆ.
ಆನ್‌ಲೈನ್‌ನಲ್ಲಿ ದರ್ಶನದ ಟಿಕೆಟ್: ಆದ್ದರಿಂದ ದರ್ಶನ ಪಡೆಯಲು ದೇವಸ್ಥಾನಕ್ಕೆ ಬರುವ ಭಕ್ತರು ನೇರವಾಗಿ ಆನ್‌ಲೈನ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಖರೀದಿ ಮಾಡಬಹುದು. ಈ ಕೌಂಟರ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಪಡೆಯಲು ಭಕ್ತರು ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಲ್ಲಿ ವಿವಿಧ ಕಾರ್ಯವಿಧಾನದ ಸಮಸ್ಯೆಗಳು ಆಗಿದ್ದವು. ಆದ್ದರಿಂದ ಪ್ರಾಯೋಗಿಕ ಇದೀಗ ಶ್ರೀವಾಣಿ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಟಿಕೆಟ್ ಬುಕಿಂಗ್ ಸಮಯದ ವಿವರ: ಈ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯನ್ನು ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸುತ್ತದೆ. ಅದೇ ರೀತಿಯಲ್ಲಿ ತಿರುಮಲ ದೇವಸ್ಥಾನಕ್ಕೆ ನೇರವಾಗಿ ದೇಣಿಗೆ ನೀಡುವ ಅವಕಾಶವನ್ನು ದೇವಸ್ಥಾನವು ಪರಿಚಯಿಸಿದೆ. ದೇಣಿಗೆ ನೀಡುವ ವ್ಯಕ್ತಿಗೆ ಶ್ರೀವಾಣಿ ದರ್ಶನ ವ್ಯವಸ್ಥೆ ಅಡಿಯಲ್ಲಿ ವಿಐಪಿ ದರ್ಶನದ ಟಿಕೆಟ್ ಸಿಗಲಿದೆ ಎಂದು ತಿಳಿಸಲಾಗಿದೆ. ಹೀಗೆ ತಿರುಪತಿಯಲ್ಲಿ ಭಕ್ತರ ಅನುಕೂಲಕ್ಕೆ ತಕ್ಕಂತೆ ಹೊಸ ಯೋಜನೆಗಳನ್ನಯ ಜಾರಿ ಮಾಡುತ್ತಲಿರುತ್ತಾರೆ.
ಇನ್ನೂ ಇದೀಗ ಸಂಕ್ರಾಂತಿ ಸಮೀಪಿಸುತ್ತಿದ್ದು, ಈ ವೇಳೆ ದೇಶದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬರುತ್ತದೆ. ಸಾಮಾನ್ಯ ದಿನಗಳಲ್ಲೇ ಅಪಾರ ಸಂಖ್ಯೆಯಲ್ಲಿ ತಿರುಮಲ ದರ್ಶನಕ್ಕೆ ಭಕ್ತರು ಆಗಮಿಸುತ್ತಲಿರುತ್ತಾರೆ. ಇನ್ನೂ ಹಬ್ಬಗಳ ಸಮಯದಲ್ಲಿ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೃಷ್ಟಿಯಿಂದ ಈ ಸಮಯದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ದೇವಸ್ಥಾನ ಮಂಡಳಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಅದರಲ್ಲೂ, ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಕ್ತರಿಗೆ ಅನುಕೂಲ ಆಗುವಂತೆ ಮಹತ್ವದ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆಯೇ ಇದೀಗ ಭಕ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇದರಿಂದ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಿದಂತಾಗಿದೆ.












Click it and Unblock the Notifications