Tirupati Tirumala: ತಿರುಮಲದಲ್ಲಿ ಮತ್ತೊಂದು ಪ್ರಮುಖ ನಿರ್ಧಾರ: ಆರೋಪಗಳಿಗೆ ಸವಾಲ್ ಹಾಕಿದ ನೂತನ ಇಒ!
ತಿರುಪತಿ ತಿರುಮಲದಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಮಾತು ಬಹಳ ಹಿಂದಿನಿಂದಲೂ ಇದೆ. ಆದರೆ ಈ ಆರೋಪಗಳಿಗೆ ಸವಾಲು ಹಾಕಲು ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಮಹತ್ವದ ನಿರ್ಧಾರವನ್ನು ಟಿಟಿಡಿ ತೆಗೆದುಕೊಂಡಿದೆ.
ನಿತ್ಯ ಸಾವಿರಾರು ಭಕ್ತರಿಗೆ ಆಶೀರ್ವದಿಸುವ ಶ್ರೀಮಂತ ದೇವರಿ ತಿರುಪತಿ ತಿಮ್ಮಪ್ಪ. ಆತನ ಸನ್ನಿಧಾನದಲ್ಲಿ ಅವ್ಯವಹಾರದ ಮಾತು ಇರಬಾರದು ಎನ್ನುವ ಉದ್ದೇಶದಿಂದ ನೂತರ ಇಒ ಶ್ಯಾಮರಾವ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದರಿಂದ ತಿರುಮಲದ ಎಲ್ಲಾ ವ್ಯವಹಾರಗಳು ಇನ್ಮುಂದೆ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ.

ಹೌದು.. ಆಂಧ್ರಪ್ರದೇಶದಲ್ಲಿ ರಚನೆಯಾದ ಹೊಸ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮೇಲೆ ಹೆಚ್ಚು ಗಮನ ಹರಿಸಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಟಿಟಿಡಿಯಲ್ಲಿ ಶುದ್ಧೀಕರಣ ಆರಂಭಿಸಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ನಂತರ ಧರ್ಮ ರೆಡ್ಡಿ ಅವರ ಜಾಗಕ್ಕೆ ಐಎಎಸ್ ಅಧಿಕಾರಿ ಶ್ಯಾಮರಾವ್ ಅವರನ್ನು ಇಒ ಆಗಿ ನೇಮಿಸಲಾಯಿತು.
ಹೊಸ ಇಒ ನೇಮಕದ ನಂತರ ತಿರುಮಲ ಬೆಟ್ಟದಲ್ಲಿ ಬದಲಾವಣೆ ಮಾಡಲಾರಂಭಿಸಿದ್ದಾರೆ. ಶ್ಯಾಮರಾವ್ ಅವರು ಇಒ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡು ತಪಾಸಣೆಗಳನ್ನು ಶುರುಮಾಡಿದ್ದಾರೆ. ಜೊತೆಗೆ ಹಲವಾರು ಬದಲಾವಣೆಯನ್ನು ತರುತ್ತಿದ್ದಾರೆ.

ಇತ್ತೀಚೆಗೆ ಟಿಟಿಡಿಯ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಆಡಳಿತ ಮಂಡಳಿಯ ನಿರ್ಣಯಗಳನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಆಗಸ್ಟ್ 2023 ರಿಂದ ಮಾರ್ಚ್ 2024 ರವರೆಗೆ, ಒಟ್ಟು ಎಂಟು ಆಡಳಿತ ಮಂಡಳಿ ಸಭೆಗಳನ್ನು ನಡೆಸಲಾಯಿತು. ಅಂದು ಕೈಗೊಂಡ ನಿರ್ಣಯಗಳಿಗೆ ಸಂಬಂಧಿಸಿದ ನಿರ್ಣಯಗಳ ವಿವರಗಳನ್ನು ಗೌಪ್ಯವಾಗಿಡುತ್ತಿರುವುದಕ್ಕೆ ಇಒ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಟಿಟಿಡಿ ಅಧಿಕಾರಿಗಳು ಆ ನಿರ್ಣಯಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಟಿಟಿಡಿ ಅರ್ಜಿತ ಸೇವೆ, ವಿಐಪಿ ಬ್ರೇಕ್ ದರ್ಶನ ಟಿಕೆಟ್, ಟೆಂಡರ್ ಮೂಲಕ ಪಡೆದ ಹಣ, ಶ್ರೀವಾಣಿ ಸೇವಾ ಟಿಕೆಟ್, ಕೊಠಡಿ/ಅತಿಥಿ ಗೃಹಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಜಿಲೆನ್ಸ್ ಅಧಿಕಾರಿಗಳು ತನಿಖೆಯನ್ನೂ ಆರಂಭಿಸಿದ್ದಾರೆ. ಈ ಆರೋಪಗಳ ಬೆನ್ನಲ್ಲೆ ಎಲ್ಲಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಜೊತೆಗೆ ಕೆಲ ಆರೋಪಗಳಿಂದಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೀಗಳ ದರ್ಶನ ಪಡೆದ ಚಂದ್ರಬಾಬು ನಾಯ್ಡು, ತಿರುಮಲದಲ್ಲಿ 'ಓಂ ನಮೋ ವೆಂಕಟೇಶ್ವರಾಯ ನಮಃ' ಎಂಬ ಪದ ಬಿಟ್ಟರೆ ಬೇರೆ ಮಾತು ಕೇಳಬಾರದು ಎಂದು ಸ್ಪಷ್ಟಪಡಿಸಿದರು.
ಜುಲೈ ತಿಂಗಳಿನಲ್ಲಿ ತಿರುಮಲಕ್ಕೆ ಹೋಗುವ ಭಕ್ತರಿಗೆ ಈ ಮಾಹಿತಿ...
ಇಂದು ನಾವೆಲ್ಲಾ ಜುಲೈ ತಿಂಗಳಿಗೆ ಕಾಲಿಟ್ಟಿದ್ದೇವೆ. ಈ ತಿಂಗಳಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರಿಗೆ ಪ್ರಮುಖ ಸೂಚನೆಯೊಂದನ್ನು ಟಿಟಿಡಿ ನೀಡಿದೆ. ಈ ತಿಂಗಳು ತಿರುಪತಿಯಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಹಬ್ಬಗಳ ದಿನಾಂಕವನ್ನು ಟಿಟಿಡಿ ಹಂಚಿಕೊಂಡಿದೆ.
ಹಬ್ಬದ ವಿವರಗಳು:-
*ಜುಲೈ 2 ರಂದು ಗುರುಪೂರ್ಣಿಮೆ
*ಜುಲೈ 11 ರಂದು ಮಾತತ್ರಯ ಏಕಾದಶಿ
*ಜುಲೈ 15 ರಂದು ತಿರುನಕ್ಷತ್ರ ಪೂಜೆ
*ಜುಲೈ 16 ರಂದು ಅನಿವಾರ ಆಸ್ಥಾನ ಪೂಜೆ
*ಜುಲೈ 17 ರಂದು ಪುಷ್ಪ ಪಲ್ಲಕಿ ಮೆರವಣಿಗೆ
*ಜುಲೈ 21 ರಂದು ಸಾಯನ ಏಕಾದಶಿ, ಚಾತುರ್ಮಾಸವ್ರತಂ
*ಜುಲೈ 30 ರ ಭಾನುವಾರದಂದು ಷಡ ಪೂರ್ಣಿಮೆ
*ಜುಲೈ 31 ರಂದು ಕೃತ್ತಿಕಾ ಆಚರಿಸಲಾಗುತ್ತಿದೆ.












Click it and Unblock the Notifications