ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

Subscribe to Oneindia Kannada

ನವದೆಹಲಿ, ಆಗಸ್ಟ್ 22: ತ್ರಿವಳಿ ತಲಾಖ್ ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ಇಂದು ಸುಪ್ರಿಂ ಕೋರ್ಟ್ ನ ಪಂಚ ಸದಸ್ಯರ ನ್ಯಾಯಪೀಠ ಈ ತೀರ್ಪು ನೀಡಿದೆ. ಮೂವರು ನ್ಯಾಯಮೂರ್ತಿಗಳು ತ್ರಿವಳಿ ತಲಾಖ್ ಅಸಂವಿಧಾನಿಕ ಎಂದಿದ್ದರೆ, ಇಬ್ಬರು ನ್ಯಾಯಮೂರ್ತಿಗಳು ಮಾತ್ರ ತ್ರಿವಳಿ ತಲಾಖ್ ಎತ್ತಿ ಹಿಡಿದ್ದಾರೆ. ಇದರಿಂದ 3:2 ಅನುಪಾತದಲ್ಲಿ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಪಂಚ ಸದಸ್ಯರ ನ್ಯಾಯಪೀಠ ತೀರ್ಪು ನೀಡಿದೆ.

Triple talaq is unconstitutional - Historic judgment by supreme court

ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲವಾದ್ದರಿಂದ ತ್ರಿವಳಿ ತಲಾಖ್‌ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

ತ್ರಿವಳಿ ತಲಾಖ್ ಗೆ ತಿಲಾಂಜಲಿ ನೀಡಿರುವ ಸುಪ್ರಿಂ ಕೋರ್ಟ್, ಇದನ್ನು 'ಅನಿಯಂತ್ರಿತ ಜಾರಿಯಲ್ಲಿರುವ' ಅಭ್ಯಾಸ ಎಂದು ಹೇಳಿದೆ. ತ್ರಿವಳಿ ತಲಾಖ್ ಗೆ ಅನುಚ್ಛೇದ 25 (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು) ರ ಅಡಿಯಲ್ಲಿ ಇದಕ್ಕೆ ಮಾನ್ಯತೆ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಗೊಂದಲ ಮೂಡಿಸಿದ ತೀರ್ಪು

ಆರಂಭದಲ್ಲಿ ಆರಂಭದಲ್ಲಿ ತಮ್ಮ ಅಭಿಪ್ರಾಯ ಹೇಳಿದ ಮುಖ್ಯನ್ಯಾಯಮೂರ್ತಿ ಜೆಎಸ್ ಖೇಹರ್, ತ್ರಿವಳಿ ತಲಾಖ್ ಅನುಚ್ಛೇದ 25ರ ಭಾಗ. ಕಳೆದ 1400 ವರ್ಷಗಳಿಂದ ಇದು ಬಳಕೆಯಲ್ಲಿದೆ ಎಂದು ಹೇಳಿದರು. ಇದನ್ನೇ ದೇಶಾದ್ಯಂತ ತ್ರಿವಳಿ ತಲಾಖ್ ಸಿಂಧುತ್ವವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ವರದಿ ಮಾಡಲಾಯಿತು.

ಯಾವ ಯಾವ ದೇಶಗಳಲ್ಲಿ ತ್ರಿವಳಿ ತಲಾಖ್ ನಿಷೇಧ

ನಂತರ ನ್ಯಾ. ಅಬ್ದುಲ್ ನಜೀರ್ ಕೂಡ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದರು.

ಆದರೆ ಇದಕ್ಕೆ ವಿರುದ್ಧ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ನ್ಯಾ. ಕುರಿಯನ್ ಜೋಸೆಫ್ ಮತ್ತು ರೋಹಿಂಗ್ಟನ್ ನಾರಿಮನ್ ತ್ರಿವಳಿ ತಲಾಖ್ ವಿರುದ್ಧ ತೀರ್ಪು ನೀಡಿದರು. ನ್ಯಾ. ಉದಯ್ ಲಲಿತ್ ತಮ್ಮ ಅಭಿಪ್ರಾಯ ಮಂಡಿಸದೆ ನೇರವಾಗಿ ನ್ಯಾ. ರೋಹಿಂಗ್ಟನ್ ನಾರಿಮನ್ ತೀರ್ಪು ಬೆಂಬಲಿಸಿದರು.

ಈ ಮೂಲಕ 3:2ರ ಬಹುಮತದಲ್ಲಿ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major victory for women's rights, the Supreme Court of India struck down triple talaq while declaring it unconstitutional. In a 3:2 majority verdict the court held that the practise was unconstitutional and it violates fundamental rights of a woman as it irrevocably ends marriage without any scope of reconciliation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ