ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ
ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಗೆ ಬೇಸಿಗೆ ರಜೆ ಇರುವುದರಿಂದ ಅದರೊಳಗೆ ಟ್ರಿಪಲ್ ತಲಾಖ್ ಬಗ್ಗೆ ತೀರ್ಪು ನೀಡಬೇಕೆಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅರ್ಜಿ ವಜಾ.
ನವದೆಹಲಿ, ಮಾರ್ಚ್ 30: ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ 'ಟ್ರಿಪಲ್ ತಲಾಖ್' ಆಚರಣೆಯ ಬಗ್ಗೆ ಕೇಂದ್ರ ಸರ್ಕಾರ ಎತ್ತಿದ್ದ ಆಕ್ಷೇಪದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಈ ಪ್ರಕರಣದ ವಿಚಾರಣೆಗಾಗಿಯೇ ಪ್ರತ್ಯೇಕವಾಗಿ ಐವರು ನ್ಯಾಯಮೂರ್ತಿಗಳುಳ್ಳ ನ್ಯಾಯಪೀಠವನ್ನು ರಚಿಸಲಾಗುವುದು ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯ, ಮೇ 11ರಿಂದ ಪೀಠವು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದೆ.

ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಗೆ ಬೇಸಿಗೆ ರಜೆ ಇರುವುದರಿಂದ ಅದರೊಳಗೆ ಟ್ರಿಪಲ್ ತಲಾಖ್ ಬಗ್ಗೆ ತೀರ್ಪು ನೀಡಬೇಕೆಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅರ್ಜಿ ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟನ್ನು ಒತ್ತಾಯಿಸಿದ್ದರು.
ಆದರೆ, ಮುಕುಲ್ ಅವರ ಅರ್ಜಿಯನ್ನು ಸರ್ವೋಚ್ಛ ನ್ಯಾಯಪೀಠ ವಜಾಗೊಳಿಸಿ, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತು.












Click it and Unblock the Notifications