ಉತ್ತರ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ

ಉತ್ತರಪ್ರದೇಶದ ಸೀತಾಪುರ್ ನಲ್ಲಿ ಉದ್ಯಮಿ ಹಾಗೂ ಆತನ ಪತ್ನಿ, ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುನೀಲ್ ಜೈಸ್ವಾಲ್ ಎಂಬ 60 ವರ್ಷದ ಉದ್ಯಮಿ ಕುಟುಂಬದ ಈ ದುರಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಲಕ್ನೋ, ಜೂನ್ 07 : ಉತ್ತರಪ್ರದೇಶದ ಸೀತಾಪುರ್ ನಲ್ಲಿ ಉದ್ಯಮಿ ಹಾಗೂ ಆತನ ಪತ್ನಿ, ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುನೀಲ್ ಜೈಸ್ವಾಲ್ ಎಂಬ 60 ವರ್ಷದ ಉದ್ಯಮಿ ಕುಟುಂಬದ ಈ ದುರಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೇಲ್ನೊಟಕ್ಕೆ ಇದೊಂದು ದರೋಡೆ ಯತ್ನದ ಕೃತ್ಯವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಉದ್ಯಮಿಯ ಮನೆ ಮುಂದೆ ಈ ಘಟನೆ ನಡೆದಿದ್ದು, ಗುಂಡಿನ ಶಬ್ದ ಕೇಳಿ ನೆರ ಮನೆಯವರು ನೆರವಿಗೆ ಧಾವಿಸಿ ಬಂದಿದ್ದಾರೆ. ಅವರ ಮೇಲೂ ಗುಂಡಿನ ದಾಳಿ ನಡೆದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Triple Murder at Sitapur : Businessman, Family Shot Dead captured On CCTV

ಕಳೆದ ರಾತ್ರಿ 9.30ರ ಸುಮಾರಿಗೆ ಸುನೀಲ್ ಜೈಸ್ವಾಲ್ ಎಂಬ 60 ವರ್ಷದ ಉದ್ಯಮಿಯೊಬ್ಬರು ತಮ್ಮ ಪುತ್ರ 25 ವರ್ಷದ ರಿತಿಕ್ ಜೊತೆಗೆ ಇರುವಾಗ ಗುಂಡು ಹಾರಿಸಲಾಗಿದೆ. ಬೈಕ್ ನಿಲ್ಲಿಸಿ ಮನೆ ಪ್ರವೇಶಿಸಬೇಕೆಂಬ ಗೇಟು ತೆಗೆಯುವಾಗ ಇಬ್ಬರು ಅಪರಿಚಿತ ಗುಂಡು ಹಾರಿಸಿದ್ದಾರೆ.


ಗುಂಡಿನ ಸದ್ದು ಕೇಳಿ ಉದ್ಯಮಿ ಪತ್ನಿ ಮನೆಯಿಂದ ಹೊರಗೆ ಬಂದಿದ್ದಾರೆ. ಅವರ ಮೇಲೂ ಗುಂಡು ಹಾರಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡಿದ್ದಾರೆ. ನೆರೆಮನೆಯವರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+