ಪ್ರಧಾನ ಮಂತ್ರಿಯಾಗಿ ಸಮರ್ಥವಾಗಿ ಕೆಲಸ
ನೆಹರೂ ನಂತರ ಯಾರು? ಎಂಬ ಪ್ರಶ್ನೆ ದೇಶದ ಮುಂದಿದ್ದಾಗ 1964ರ ಜೂನ್ 9ರಂದು ದೇಶದ ಪ್ರಧಾನ ಮಂತ್ರಿ ಪದವಿ ಸ್ವೀಕರಿಸಿದ ಶಾಸ್ತ್ರಿಯವರು ತಮ್ಮ ಸಮರ್ಥ ಕಾರ್ಯದ ಮೂಲಕ ಆ ಪ್ರಶ್ನೆಗೆ ಉತ್ತರ ನೀಡಿದರು. 1965ರ ಪಾಕಿಸ್ತಾನದ ವಿರುದ್ಧದ 33 ದಿನಗಳ ಯುದ್ಧದಲ್ಲಿ ಇವರು ಸಮರ್ಥ ರೀತಿಯಲ್ಲಿ ದೇಶದ ಸೇನಾಪಡೆಗಳನ್ನು ಮುನ್ನಡೆಸಿದರು.
ರಷ್ಯಾದ ತಾಷ್ಕೆಂಟ್‍ನಲ್ಲಿ 1966ರ ಜನವರಿ 3 ರಿಂದ 10ವರೆಗೆ ಭಾರತ-ಪಾಕ್ ನಡುವೆ ನಡೆದ ಮಾತುಕತೆಯ ನಂತರ ಶಾಂತಿ ಒಪ್ಪಂದ ಜಾರಿಗೆ ಬಂತು. ಈ ಒಪ್ಪಂದದ ವೇಳೆಯು ಶಾಸ್ತ್ರಿಜಿ ಅವರು ತೋರಿದ ಜಾಣ್ಮೆ ಅನನ್ಯವಾಗಿತ್ತು. ಶಾಂತಿ ಒಪ್ಪಂದಕ್ಕೆ ಸಹಿಯಾದ ದಿನವೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್‍ನಲ್ಲಿ ನಿಧನರಾದುದು ಭಾರತೀಯರ ತೀವ್ರ ನೋವಿಗೆ ಕಾರಣವಾಯಿತು. ಭಾರತ ಸರ್ಕಾರವು ಅವರ ನಿಧನಾನಂತರ 1966ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿತು.
ದೇಶದ ರೈತರು ಮತ್ತು ಸೇನೆಯ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದ ಶಾಸ್ತ್ರಿ ಅವರು 'ಜೈ ಜವಾನ್ ಜೈ ಕಿಸಾನ್' ಘೋಷಣೆ ಮಾಡಿದರು. ರೈತರಿಗಾಗಿ ಹಲವು ಯೋಜನೆಗಳನ್ನು ಆರಂಭಿಸಿದರು. ಪ್ರಧಾನ ಮಂತ್ರಿ ಆದರೂ ಸರಳತೆಯಿಂದಲೇ ಬದುಕಿ ಭಾರತೀಯರಿಗೆ ದಾರಿ ದೀಪವಾಗಿದ್ದರು.

ತಮ್ಮ ಆಡಳಿತ ವೈಖರಿ ಮತ್ತು ಸರಳ ನಡೆ-ನುಡಿಯಿಂದ ವಿರೋಧ ಪಕ್ಷದ ಪ್ರೀತಿಯನ್ನೂ ಗಳಿಸಿದರು. ದೇಶದಲ್ಲಿ ಆಹಾರದ ಕೊರತೆ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ದೇಶದ ಜನತೆ ವಾರಕ್ಕ ಒಮ್ಮೆ ಒಂದು ಹೊತ್ತಿನ ಊಟ ತ್ಯಜಿಸುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಕರೆಕೊಟ್ಟು, ಅವರು ತಾವೂ ಅದನ್ನು ಅನುಸರಿಸಿದರು.
ಮಹಾತ್ಮಾ ಗಾಂಧೀಜಿ ಅವರ ರಾಜಕೀಯ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಲಾಲ್ ಬಹದ್ದೂರ ಶಾಸ್ತ್ರಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ತೋರಿದ ಸರಳ ನಡೆನುಡಿಗಳು ಧೈರ್ಯ-ಆತ್ಮ ಸ್ಥೈರ್ಯಗಳು ನಮಗೆ ಮಾರ್ಗದರ್ಶಕವಾಗಿದೆ.
ಬರಹ : ಟಿ.ಸಿ. ಮಂಜುನಾಥ ಬಾಬು,
ಸಹಾಯಕ ನಿರ್ದೇಶಕರು
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications