ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕೇ ಬಿಡ್ತು 4000 ಕೋಟಿ ರೂ ಚಿನ್ನದ ನಿಕ್ಷೇಪ

By Srinath
|
Google Oneindia Kannada News

ನವದೆಹಲಿ, ಅ. 28- ಸಾಧು ಶೋಭನ ಸರಕಾರ್ ಕನಸುಕಂಡಂತೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ದುಂಡಿಯಾ ಖೇಡಾ ಗ್ರಾಮದಲ್ಲಿ 1,000 ಟನ್ ಚಿನ್ನದ ನಿಧಿ ಸಿಕ್ಕಿತೋ ಇಲ್ವೋ ಕೇಂದ್ರ ಸರಕಾರವೇ ಹೇಳಬೇಕು.

ಈ ಮಧ್ಯೆ, ಆ ಜಾಗದಿಂದ ತುಸು ದೂರದಲ್ಲಿ 4,000 ಕೋಟಿ ರೂ. ಚಿನ್ನದ ಅದಿರು ನಿಕ್ಷೇಪ ಇದೆ ಎಂದು ಉತ್ತರ ಪ್ರದೇಶದ ಸರಕಾರಿ ಇಲಾಖೆಯೇ ಹೇಳಿದೆ. ಅದೂ ಎಲ್ಲಿ ಅಂತೀರಾ? ಅದೇ ಬುಂದೇಲಖಂಡ ಪ್ರಾಂತ್ಯದಲ್ಲಿ. ಅದೇ ರಾಹುಲ್ ಗಾಂಧಿ ಅವರು ಮೊನ್ನೆ ಬರೋಬ್ಬರಿ 25,000 ಸೊಳ್ಳೆಗಳ ಕೈಯಲಿ ಕಚ್ಚಿಸಿಕೊಂಡಿದ್ದೆ. ಹೊಟ್ಟೆಗೆ ಲಾಡಿ ಹುಳ ಬಿದ್ದಿತ್ತು ಎಂದಿದ್ದರಲ್ಲಾ... ಅದೇ ಪ್ರದೇಶದಲ್ಲಿ.

ಹೌದು ಉತ್ತರಪ್ರದೇಶದ Department of Mineral and Mines ಶೋಧಿಸಿರುವ ಪ್ರಕಾರ ಬುಂದೇಲಖಂಡ ಪ್ರಾಂತ್ಯದ ಭೂಗರ್ಭದಲ್ಲಿ ನಿಜಕ್ಕೂ ಭಾರಿ ನಿಕ್ಷೇಪ ಇದೆ. ಝಾನ್ಸಿ, ಜಲೂನ, ಮಹೋಬಾ, ಹಮೀರಪುರ, ಬಂದಾ, ಚಿತ್ರಕೂಟ, ಖುತಗವಾನ್ ಮತ್ತು ಲಲಿತಪುರವನ್ನೊಳಗೊಂಡ ಬುಂದೇಲಖಂಡ ಭೂಭಾಗದಲ್ಲಿ ನಿಜಕ್ಕೂ ಭಾರಿ ಚಿನ್ನದ ಅದಿರು ನಿಕ್ಷೇಪ ಇದೆ ಎಂಬುದಾಗಿ ಕೂಲಂಕಷ ಅಧ್ಯಯನದ ನಂತರ ತಿಳಿದುಬಂದಿದೆ ಎಂದು ಇಲಾಖೆ ತಿಳಿಸಿದೆ.
ಇದು ಇಲಾಖೆ ಕಂಡ ಕನಸು ಅಲ್ಲ. ಭೂಗರ್ಭದಲ್ಲಿ ಅಧ್ಯಯನ ನಡೆಸಿ ಕಂಡುಕೊಂಡಿರುವ ಸತ್ಯ. ಹಾಗಾಗಿ ಇದನ್ನು ನಂಬಬಹುದು. ಮುಂದೇನು!? ಓದಿ

ಬರೀ ಚಿನ್ನವಷ್ಟೇ ಅಲ್ಲ ಪ್ಲಾಟಿನಂ ನಿಕ್ಷೇಪವೂ ಇದೆ

ಬರೀ ಚಿನ್ನವಷ್ಟೇ ಅಲ್ಲ ಪ್ಲಾಟಿನಂ ನಿಕ್ಷೇಪವೂ ಇದೆ

Geology and Mines Directorate ಮುಖ್ಯಸ್ಥ ಭಾಸ್ಕರ್ ಉಪಾಧ್ಯಾಯ ಅವರ ಪ್ರಕಾರ ಬುಂದೇಲಖಂಡ ಮತ್ತು ಸೋನಾಭದ್ರ ಪ್ರದೇಶಗಳಲ್ಲಿ ಈ ಚಿನ್ನದ ಅದಿರು ನಿಕ್ಷೇಪ ಇದೆಯಂತೆ. ಇಲ್ಲಿ ಬರೀ ಚಿನ್ನ ಏಕೆ ಪ್ಲಾಟಿನಂ ನಿಕ್ಷೇಪವೂ ಇದೆ. ಜತೆಗೆ ಔದ್ಯಮಿಕ ರಂಗದ ಪೊಟಾಷ್, ಆಸ್ಬೆಸ್ಟಾಸ್, ಸಿಲಿಕಾ ಖನಿಜ/ ಲೋಹ ಸಹ ಇದೆ.

ಉತ್ತರಪ್ರದೇಶ ಅದಿರು ನಿಕ್ಷೇಪಕ್ಕೆ ರಾಜಧಾನಿ

ಉತ್ತರಪ್ರದೇಶ ಅದಿರು ನಿಕ್ಷೇಪಕ್ಕೆ ರಾಜಧಾನಿ

ಹಾಗೆ ನೋಡಿದರೆ ಉತ್ತರಪ್ರದೇಶ ನಿಜಕ್ಕೂ ಇಡೀ ರಾಷ್ಟ್ರಕ್ಕೆ ಅದಿರು ನಿಕ್ಷೇಪಕ್ಕೆ ರಾಜಧಾನಿಯಾಗಿದೆ. ಆದರೆ ಇದುವರೆಗೂ diaspore, dolomite, limestone, magnesite ಮತ್ತು phosphorite ಅಂತಹ ಸಣ್ಣಪುಟ್ಟ ಲೋಹ ನಿಕ್ಷೇಪಗಳು ಸಿಕ್ಕಿವೆ. ಆದರೆ ಮೊದಲ ಬಾರಿಗೆ ಭಾರಿ ಪ್ರಮಾಣದ ಅಮೂಲ್ಯ ಖನಿಜ ನಿಕ್ಷೇಪಗಳು ಪತ್ತೆಯಾಗಿವೆ ಎನ್ನುತ್ತಿದೆ ರಾಜ್ಯ ಸರಕಾರ.

70 ಕೋಟಿ ರೂ ಚಿನ್ನ ಪತ್ತೆಯಾಗಿದೆ:

70 ಕೋಟಿ ರೂ ಚಿನ್ನ ಪತ್ತೆಯಾಗಿದೆ:

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಲಲಿತಪುರದ Girar-Tori ಭಾಗದಲ್ಲಿ ಮತ್ತು ಬುಂದೇಲಖಂಡದ ಖುತಗವಾನ್ ನಲ್ಲಿಯೂ ಚಿನ್ನದ ನಿಕ್ಷೇಪಗಳಿವೆ. ಈ ಭಾಗಗಳಲ್ಲಿ 1995-96ರಲ್ಲಿಯೇ ಚಿನ್ನದ ಅದಿರು ಗಣಿಗಾರಿಕೆ ಆರಂಭವಾಗಿದೆ. ಇತ್ತೀಚೆಗೆ 3.5 ಕಿಮೀ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪಗಳು ಕಂಡುಬಂದಿದೆ. ಇದರಿಂದ ಇಲ್ಲಿ ಅಂದಾಜು 43 ಕೋಟಿ ರೂ. ಚಿನ್ನವನ್ನು ಹೊರತೆಗೆಯಬಹುದು. (10 ಗ್ರಾಂ. ಗೆ 3,000 ರೂ ದರದಲ್ಲಿ. ಆದರೆ ಇಂದು ಸೋಮವಾರ ಚಿನ್ನದ ದರ 32 ಸಾವಿರ ರೂ ದಾಟಿದೆ).
ಅದೇ ರೀತಿ ಲಲಿತಪುರದ ಬೆರವಾರಾದಲ್ಲಿ 88 ಕೆಜಿ ಚಿನ್ನ (27 ಕೋಟಿ ರೂ.) ಇರುವುದು ದೃಢಪಟ್ಟಿದೆ.

70 ಕೋಟಿ ರೂ ಚಿನ್ನ ಪತ್ತೆಯಾಗಿದೆ:

70 ಕೋಟಿ ರೂ ಚಿನ್ನ ಪತ್ತೆಯಾಗಿದೆ:

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಲಲಿತಪುರದ Girar-Tori ಭಾಗದಲ್ಲಿ ಮತ್ತು ಬುಂದೇಲಖಂಡದ ಖುತಗವಾನ್ ನಲ್ಲಿಯೂ ಚಿನ್ನದ ನಿಕ್ಷೇಪಗಳಿವೆ. ಈ ಭಾಗಗಳಲ್ಲಿ 1995-96ರಲ್ಲಿಯೇ ಚಿನ್ನದ ಅದಿರು ಗಣಿಗಾರಿಕೆ ಆರಂಭವಾಗಿದೆ. ಇತ್ತೀಚೆಗೆ 3.5 ಕಿಮೀ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪಗಳು ಕಂಡುಬಂದಿದೆ. ಇದರಿಂದ ಇಲ್ಲಿ ಅಂದಾಜು 43 ಕೋಟಿ ರೂ. ಚಿನ್ನವನ್ನು ಹೊರತೆಗೆಯಬಹುದು. (10 ಗ್ರಾಂ. ಗೆ 3,000 ರೂ ದರದಲ್ಲಿ. ಆದರೆ ಇಂದು ಸೋಮವಾರ ಚಿನ್ನದ ದರ 32 ಸಾವಿರ ರೂ ದಾಟಿದೆ).
ಅದೇ ರೀತಿ ಲಲಿತಪುರದ ಬೆರವಾರಾದಲ್ಲಿ 88 ಕೆಜಿ ಚಿನ್ನ (27 ಕೋಟಿ ರೂ.) ಇರುವುದು ದೃಢಪಟ್ಟಿದೆ.

ಸೋನಾಭದ್ರದಲ್ಲಿ ಸೋನಾ ಭದ್ರವಾಗಿದೆ!

ಸೋನಾಭದ್ರದಲ್ಲಿ ಸೋನಾ ಭದ್ರವಾಗಿದೆ!

ಇನ್ನು, ಸೋನಾಭದ್ರ ಪ್ರದೇಶದಲ್ಲಿನ ಹರ್ದಿ ಮತ್ತು ಬಗಿಸೋಟಿ ಭಾಗದಲ್ಲಿ 25 ಕೆಜಿ ಚಿನ್ನ ಸಿಗುವ ಅಂದಾಜಿದೆ.

ಝಾನ್ಸಿಯಲ್ಲಿ ಅಪಾರ silica

ಝಾನ್ಸಿಯಲ್ಲಿ ಅಪಾರ silica

ಇದಿಷ್ಟೂ ಪ್ರದೇಶಗಳ ಪೈಕಿ ಝಾನ್ಸಿಯಲ್ಲಿ ಅಪಾರ ಪ್ರಮಾಣದಲ್ಲಿ ಲೋಹದ ನಿಕ್ಷೇಪ ಇದೆ ಎನ್ನುತ್ತಿದೆ ಇಲಾಖೆಯ ಅಧಿಕೃತ ವರದಿ. 450 ಲಕ್ಷ ಟನ್ ಪ್ರಮಾಣದ 900 ಕೋಟಿ ರೂ. ಮಾರುಕಟ್ಟೆ ಮೌಲ್ಯದ silica ಇಲ್ಲಿ ಅಡಗಿದೆಯಂತೆ. Iron and steel, ceramics ಮತ್ತು vitreous tiles ಉದ್ಯಮದಲ್ಲಿ ಇದು ಹೆಚ್ಚಾಗಿ ಬಳಕೆಯಾಗುತ್ತದೆ. (ಚಿತ್ರ-http://post.jagran.com)

ಝಾನ್ಸಿಯಲ್ಲಿ long-fibre asbestos

ಝಾನ್ಸಿಯಲ್ಲಿ long-fibre asbestos

ಝಾನ್ಸಿಯಲ್ಲಿ ಬಡಗಾಂವ್ ಮತ್ತು ಮೌರಾನಿಪುರ ಪ್ರದೇಶದಲ್ಲಿ 3 ಲಕ್ಷ ಟನ್ ಪ್ರಮಾಣದ 1,200 ಕೋಟಿ ರೂ. ಮಾರುಕಟ್ಟೆ ಮೌಲ್ಯದ long-fibre asbestos ಸಿಗುವ ಅಂದಾಜಿದೆ.

Geology and Mines Directorate ಮುಂದೇನು!?

Geology and Mines Directorate ಮುಂದೇನು!?

ಅಮೂಲ್ಯ ಲೋಹಗಳ ಗಣಿಗಾರಿಕೆ ಬಗ್ಗೆ ಸರಕಾರ ಶೀಘ್ರದಲ್ಲೇ ಸಮರ್ಪಕ ಮಾರ್ಗಸೂಚಿ ರಚಿಸುತ್ತದೆ. ಅದರನ್ವಯ ಗಣಿಗಾರಿಕೆಗಾಗಿ Geology and Mines Directorate ಟೆಂಡರುಗಳನ್ನು ಕರೆಯುತ್ತದೆ. ಆ ನಂತರ ಸಾವಕಾಶವಾಗಿ ಅಮೂಲ್ಯ ಲೋಹ ಹೊರಬರುತ್ತದೆ.

ಚಿತ್ರಕೂಟದಲ್ಲಿ ಪೊಟಾಶ್, ಸಿಲಿಕಾ ಲಭ್ಯ

ಚಿತ್ರಕೂಟದಲ್ಲಿ ಪೊಟಾಶ್, ಸಿಲಿಕಾ ಲಭ್ಯ

ಚಿತ್ರಕೂಟದ ಸೆಮ್ರಿ ಮತ್ತು ರೇವಾ ಕಲ್ಲುಪ್ರದೇಶದಲ್ಲಿ ಪೊಟಾಶ್ ಖನಿಜ ಅಂಶ ಅಡಗಿರುವುದು ದೃಢಪಟ್ಟಿದೆ. ಪೊಟಾಶ್ ಉದ್ಯಮರಂಗದಲ್ಲಿ ಹೆಚ್ಚಾಗಿ ಬಳಕೆಯಾಗುವ ಖನಿಜ. ಪೊಟಾಶಿಯಂ ಹೊಂದಿರುವ glauconite sandstone ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು ಇದರಲ್ಲಿ ಶೇ. 7ರಷ್ಟು ಪೊಟಾಶ್ ಲಭ್ಯವಾಗುವುದು ಖಚಿತವಾಗಿದೆ.
ಅಂದರೆ ಚಿತ್ರಕೂಟದಲ್ಲಿ 1,500 ಕೋಟಿ ರೂ. ಮೌಲ್ಯದ ಒಟ್ಟು 500 ಲಕ್ಷ glauconite sandstone ಮತ್ತು ಮಹೋಬಾದಲ್ಲಿ 200 ಕೋಟಿ ರೂ. ಮೌಲ್ಯದ 100 ಲಕ್ಷ ಟನ್ ತೂಕದ ಸಿಲಿಕಾ ಲಭಿಸಲಿದೆ.

English summary
Treasure trove worth Rs 4000 crore found at Bundelkhand 7 districts in Uttar Pradesh- Geology and Mines Directorate. If a report of the department is to be believed, the rocky terrain of Bundelkhand's seven districts - Jhansi, Jalaun, Mahoba, Hamirpur, Banda, Chitrakoot and Lalitpur - could become a potential 'revenue mine' for the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X