Trains: ಮೇ ತಿಂಗಳಲ್ಲಿ ಸಂಚರಿಸುವ ರೈಲು ಪ್ರಯಾಣಿಕರೇ ಗಮನಿಸಿ! ರೈಲುಗಳ ಸಂಚಾರ ಬಿಗ್ ಅಪ್ಡೇಟ್
ಬೆಂಗಳೂರು, ಮೇ 02: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂನಲ್ಲಿ ಎಂಕ್ಷನ್ ಹಂತ-II ಯಾರ್ಡ್ ಮಾರ್ಪಾಡು, ಆಧನೀಕರಣ ಸಂಬಂಧಿಸಿದ ಕಾಮಗಾರಿಗಳಿಗೆ ನಡೆಯುತ್ತಿವೆ. ಈ ಕಾರಣದಿಂದಾಗಿ ದಕ್ಷಿಣ ಮಧ್ಯ ರೈಲ್ವೆಯು ಮೇ ತಿಂಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲು ಸೇವೆ ರದ್ದಗೊಳಿಸಲಾಗಿದೆ. ಅಲ್ಲದೇ ಹಲವು ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯು ಮಾಹಿತಿ ನೀಡಿದೆ. ಮೇ ತಿಂಗಳಲ್ಲಿ ಓಡಾಡುವ ಪ್ರಯಾಣಿಕರು ಗಮನಿಸಬೇಕಿದೆ.
ಮೇ ತಿಂಗಳಲ್ಲಿ ರದ್ದಗೊಂಡು 09 ರೈಲುಗಳ ಪಟ್ಟಿ
* ಕೆಎಸ್ಆರ್ ಬೆಂಗಳೂರು-ಧರ್ಮಾವರಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು (06595/06596) ಮೇ 5 ರಿಂದ 17ರರೆಗೆ ರದ್ದುಗೊಳಿಸಲಾಗಿದೆ.
* ಗುಂತಕಲ್-ಹಿಂದೂಪುರ ಡೆಮು ರೈಲು (ಸಂಖ್ಯೆ 77213) ಮೇ 4 ರಿಂದ 17ರವರೆಗೆ ರದ್ದು ಮಾಡಲಾಗಿದೆ.
* ಹಿಂದೂಪುರ-ಗುಂತಕಲ್ ಡೆಮು ರೈಲು (77214) ಮೇ 5 ರಿಂದ 18ರವರೆಗೆ ಸೇವೆ ಸ್ಥಗಿತಗೊಳಿಸಿದೆ.
* ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್ ರೈಲು (16571) ಇದೇ ಮೇ 11, 12, 13 ಮತ್ತು 15 ರಂದು ಕಾರ್ಯಾಚರಣೆ ಮಾಡುವುದಿಲ್ಲ.
* ಇದೇ ಮೇ 12, 13, 14 ಮತ್ತು 16, 2025 ರಂದು ಪ್ರಯಾಣ ಆರಂಭಿಸುವ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16572) ರದ್ದಗೊಳಿಸಲಾಗಿದೆ.
* ಯಶವಂತಪುರ-ಲಾತೂರ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16583) ಮೇ 10, 14, 16 ಮತ್ತು 17, 2025 ರಂದು ಕಾರ್ಯಾಚರಣೆ ನಡೆಸದೇ ಸ್ಥಗಿತಗೊಳ್ಳಲಿದೆ.
* ಮೇ 11, 15, 17 ಮತ್ತು 18, 2025 ರಂದು ಪ್ರಯಾಣ ಆರಂಭಿಸಬೇಕಿದ್ದ ಲಾತೂರ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16584) ಸಂಚಾರ ನಿಲ್ಲಿಸಲಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.
* ಸೋಲ್ಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11311) ಮೇ 11 ರಿಂದ 16 ರವರೆಗೆ ಸಂಚಾರ ಸೇವೆ ಲಭ್ಯ ಇರುವುದಿಲ್ಲ.
* ಹಾಸನ-ಸೋಲಾಪುರ ಎಕ್ಸ್‌ಪ್ರೆಸ್ ರೈಲು (11312) ಮೇ 12 ರಿಂದ 17 ವರೆಗೆ ಪ್ರಯಾಣ ರದ್ದುಗೊಳಿಸಲಾಗಿದೆ.

04 ರೈಲುಗಳ ನಿಯಂತ್ರಣ
* ಮೇ 4 ರಿಂದ 16, 2025 ರವರೆಗೆ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಸಂಚರಿಸುವ 'ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲು' (11013), ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿದೆ.
* ಟುಟಿಕೋರಿನ್-ಓಖಾ ವಿವೇಕ್ ಎಕ್ಸ್‌ಪ್ರೆಸ್ ರೈಲು (19567) ಮೇ 4 ಮತ್ತು 11 ರಂದು ಟುಟಿಕೋರಿನ್‌ನಿಂದ ಹೊರಡಲಿದ್ದು, ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 150 ನಿಮಿಷಗಳ ಕಾಲ ನಿಲ್ಲಲಿದೆ.
* ಮೈಸೂರು-ಜೈಪುರ ದ್ವೈ-ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12975) ಮೇ 8, 10, 15 ಮತ್ತು 17 ರಂದು ಮೈಸೂರಿನಿಂದ ಹೊರಡಲಿದ್ದು, ಮಾರ್ಗ ಮಧ್ಯೆ 90 ನಿಮಿಷಗಳ ಕಾಲ ನಿಲ್ಲಲಿದೆ.
* ಪುರಿಯಿಂದ ಹೊರಡಲಿರುವ 'ಪುರಿ-ಯಶವಂತಪುರ ಗರೀಬ್ ರಥ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22883) ಮೇ 9 ಮತ್ತು 16ರಂದು ಮಾರ್ಗದ ನಿಲ್ದಾಣಗಳಲ್ಲಿ 90 ನಿಮಿಷಗಳ ಕಾಲ ನಿಲ್ಲಿಸಲಾಗುತ್ತಿದೆ ಎಂದು ದಕ್ಷಿಣ ರೈಲು ತಿಳಿಸಿದೆ.

13 ರೈಲುಗಳ ಮಾರ್ಗ ಬದಲಾವಣೆ
* ಮೇ 11 ರಿಂದ 17 ರವರೆಗೆ ಪ್ರಯಾಣ ಆರಂಭಿಸುವ ರೈಲು (ಸಂಖ್ಯೆ 16591) ಎಸ್‌ಎಸ್‌ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್ ಅನ್ನು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮೂಲಕ ಸಂಚರಿಸಲಿದೆ. ಗುಂತಕಲ್ ಮತ್ತು ಯಲಹಂಕ ನಡುವಿನ ನಿಯಮಿತ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡಲ್ಲ.
* ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ ರೈಲು (16592) ಮೇ 11 ರಿಂದ 17 ರವರೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮೂಲಕ ಸಾಗಲಿದೆ. ಯಲಹಂಕ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
* ಬೆಂಗಳೂರು ಕೆಎಸ್‌ಆರ್-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16532) ಮೇ 16 ರಂದು ಸಂಚಾರ ಆರಂಭಿಸಲಿದೆ. ಇದನ್ನು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಲ್ಲಾರಿ ಮತ್ತು ಹುಬ್ಬಳ್ಳಿ ಮೂಲಕ ಓಡಿಸಲಲಾಗುತ್ತಿದೆ. ಹಿಂದೂಪುರ ಮತ್ತು ಗುಂತಕಲ್ ಮಧ್ಯದ ನಿಲುಗಡೆಗಳನ್ನು ಬಿಟ್ಟು ಬಿಡಲಾಗುತ್ತದೆ.

* ಅಜ್ಮೀರ್-ಕೆಎಸ್ಆರ್ ಬೆಂಗಳೂರು ಗರೀಬ್ ನವಾಜ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು (16531) ಮೇ 12 ರಂದು ತನ್ನ ಪ್ರಯಾಣ ಪ್ರಾರಂಭಿಸಿದೆ. ಈ ರೈಲು ಹುಬ್ಬಳ್ಳಿ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮೂಲಕ ಸಾಗಲಿದೆ. ಗುಂತಕಲ್ ಮತ್ತು ಹಿಂದೂಪುರ ಮಧ್ಯದ ರೈಲು ನಿಲ್ದಾಣಗಳಲ್ಲಿ ಸೇವೆ ನೀಡುವುದಿಲ್ಲ.
* ಭಗತ್ ಕಿ ಕೋಠಿ-ಕೆಎಸ್‌ಆರ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16533) ಮೇ 14ಕ್ಕೆ ಸಂಚರಿಸಲಿದೆ. ಈ ರೈಲು ಗುಂತಕಲ್ ಮತ್ತು ಹಿಂದೂಪುರ ನಡುವೆ ನಿಯಮಿತ ನಿಲುಗಡೆಗಳನ್ನು ಬಿಟ್ಟು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ತಿರುಗಿಸಲಾಗಿದೆ. ಪ್ರಯಾಣಿಕರು ಗಮನಿಸಬೇಕೆಂದು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.
* ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (12592) ಮೇ 12 ರಂದು ಸಂಚಾರ ನಡೆಸಲಿದೆ. ಈ ರೈಲು ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಬೈಪಾಸ್ ಮೂಲಕ ಮಾರ್ಗವಾಗಿ ಸಾಗಲಿದೆ. ರಾಯಚೂರು, ಹಿಂದೂಪುರ ಮತ್ತು ಗುಂತಕಲ್ ನಡುವೆ ಯಾವೊಂದು ನಿಲ್ದಾಣಗಳಲ್ಲಿ ರೈಲು ನಿಲ್ಲಿಸದಿರಲು ನಿರ್ಧರಿಸಲಾಗಿದೆ.
* ಮೇ 14 ರಂದು ಪ್ರಯಾಣ ಆರಂಭಿಸಲಿರುವ ಹೌರಾ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (22831) ಸಚರಿಸಲಿದೆ. ಅನಂತಪುರದಿಂದ ಯಲಹಂಕವರೆಗಿನ ನಿಲ್ದಾಣಗಳನ್ನು ಬಿಟ್ಟು ಉಳಿದೆಲ್ಲ ಕಡೆಗೆ ನಿಲ್ಲಲಿದೆ. ಧೋನೆ, ಗುಂತಕಲ್, ಬಳ್ಳಾರಿ, ರಾಯದುರ್ಗ ಮತ್ತು ಚಿಕ್ಕಜಾಜೂರ್ ಮೂಲಕ ಸೇವೆ ನೀಡಲಿದೆ.
* ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಮೇ 16 ರಂದು ಅನಂತಪುರದಿಂದ ಕಟ್ಪಾಡಿಗೆ ವರೆಗೆ ಸಾಗದೇ ರೇಣುಗುಂಟಾ ಮೂಲಕ ಸೇವೆ ನೀಡಲಿದೆ.
* ತಿರುವನಂತಪುರಂ ಸೆಂಟ್ರಲ್-CSMT ಮುಂಬೈ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16332) ಮೇ 10 ಬೆಂಗಳೂರು SMVT, ಬಾಣಸವಾಡಿ, ತುಮಕೂರು, ಅರಸೀಕೆರೆ, ರಾಯದುರ್ಗ, ಬಳ್ಳಾರಿ ಮತ್ತು ಗುಂತಕಲ್, ಹಿಂದೂಪುರ ಮತ್ತು ಧರ್ಮಾವರಂನಲ್ಲಿ ನಿಲುಗಡೆ ನೀಡದೇ ಸಂಚರಿಸಲಿದೆ.
* CSMT ಮುಂಬೈ-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (16331) ಮೇ 4 ಮತ್ತು 11 ರಂದು ತನ್ನ ಪ್ರಯಾಣ ಪ್ರಾರಂಭಿಸಲಿದ್ದು, ಗುಂತಕಲ್, ಗೂಟಿ, ಕಡಪಾ, ರೇಣುಗುಂಟಾ, ಮೇಲ್ಪಕ್ಕಂ, ಕಟ್ಪಾಡಿ ಮತ್ತು ಜೋಲಾರ್‌ಪೇಟ್ಟೈ ಮಾರ್ಗವಾಗಿ ತಿರುಗಿಸಲಾಗಿದೆ.
* SMVT ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 00635) ಮೇ 8 ಮತ್ತು 15 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. SMVT ಬೆಂಗಳೂರು, ಜೋಲರ್‌ಪೇಟ್ಟೈ, ರೇಣುಗುಂಟಾ, ಗುಡೂರು ಮತ್ತು ವಿಜಯವಾಡ ಮಾರ್ಗವಾಗಿ ಸಾಗಲಿದೆ. ಧರ್ಮಾವರಂನಲ್ಲಿ ನಿಲುಗಡೆ ನೀಡುವುದಿಲ್ಲ.
* ಮೇ 5 ಮತ್ತು 12, 2025 ರಂದು ಸಂಚರಿಸಲಿರುವ (00636) ಗುವಾಹಟಿ -SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವಿಜಯವಾಡ, ಗುಡೂರು, ರೇಣಿಗುಂಟ, ಜೋಲಾರ್‌ಪೆಟ್ಟೈ ಮತ್ತು SMVT ಬೆಂಗಳೂರು ಮಾರ್ಗವಾಗಿ ಸಾಗಲಿದೆ. ತಿರುಗಿಸಲಾಗುತ್ತದೆ, ಗುಂಟೂರಿನಿಂದ ಧರ್ಮಾವರಂಗೆ ನಿಲುಗಡೆ ನೀಡದಂತೆ ಮಾರ್ಗ ಬದಲಿಸಲಾಗಿದೆ.
* ತುಗಲಕಾಬಾದ್-ಯಶವಂತಪುರ ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲು (00640) ಮೇ 13 ರಂದು ಪ್ರಯಾಣ ಆರಂಭಿಸಲಿದೆ. ಈ ರೈಲು ಗುಂಟಕಲ್ ಬೈಪಾಸ್, ಬಳ್ಳಾರಿ ಮೂಲಕ ತಿರುಗಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.












Click it and Unblock the Notifications