Train Accident: Mysuru-Darbhanga Express: ರೈಲು ಅಪಘಾತ; ಧಗಧಗ ಹೊತ್ತಿ ಉರಿದ ಬೋಗಿಗಳು !
ತಮಿಳುನಾಡಿನಲ್ಲಿ ವಿಮಾನದಲ್ಲಿ ಉಂಟಾದ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈನಲ್ಲಿ ಭಾರೀ ರೈಲು ಅಪಘಾತ ಸಂಭವಿಸಿದೆ. ರೈಲಿನಲ್ಲಿ ಬೆಂಕಿ ಹೊತ್ತಿಕೊಂಡು ಭಾರೀ ಅವಘಡವೇ ಸಂಭವಿಸಿದೆ. ಚೆನ್ನೈನಲ್ಲಿ ಸಾಗುತ್ತಿದ್ದ ರೈಲಿನಲ್ಲಿ ಭಾರೀ ಅವಘಡ ಆಗಿದೆ. ಮೈಸೂರು-ದರ್ಭಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡಿದಿದ್ದು ಬೋಗಿಗಳು ಹೊತ್ತಿ ಉರಿದಿವೆ.
ಈ ರೈಲು ಮೈಸೂರಿನಿಂದ ಬಿಹಾರದ ದರ್ಭಂಗಾಕ್ಕೆ ಹೋಗುತ್ತಿತ್ತು. ಕರ್ನಾಟಕದ ಮೈಸೂರಿನಿಂದ ತಮಿಳುನಾಡು ಮಾರ್ಗವಾಗಿ ಬಿಹಾರದ ದರ್ಭಂಗಾಕ್ಕೆ ಬಾಗ್ಮತಿ ಎಕ್ಸ್‌ಪ್ರೆಸ್ ಟ್ರೈನ್ ಹೋಗುತ್ತಿತ್ತು. ಆದರೆ, ತಮಿಳುನಾಡಿನ ಚೆನ್ನೈಗೆ ಸಾಗುತ್ತಿದ್ದಂತೆಯೇ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ. ಇದರಿಂದ ಏಕಾಏಕಿ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಚೆನ್ನೈನ ಕವರಾಯಿಪೆಟ್ಟೈ ಎನ್ನುವ ರೈಲು ನಿಲ್ದಾಣದಲ್ಲಿ ಭಾರೀ ಅನಾಹುತವೇ ಸಂಭಿವಿಸಿದೆ.ಈ ರೈಲು ಚೆನ್ನೈನಿಂದ ಆಂಧ್ರಪ್ರದೇಶ ಮಾರ್ಗವಾಗಿ ಹೋಗುವಾಗ ಈ ಅವಘಡ ಸಂಭವಿಸಿದೆ.

ಈ ರೈಲು ಚೆನ್ನೈನಿಂದ ಆಂಧ್ರಪ್ರದೇಶ ಮಾರ್ಗವಾಗಿ ಹೋಗುವಾಗ ಈ ಅವಘಡ ಸಂಭವಿಸಿದೆ. ತಮಿಳುನಾಡಿನ ತಿರುವಳ್ಳೂರು ಪ್ರದೇಶದ ಕವರಪ್ಪೆಟ್ಟೈ ಬಳಿ ಬಂದಾಗ ಈ ರೈಲು ಅವಘಡ ಸಂಭವಿಸಿದೆ. ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದಲೂ ರೈಲು ಹಳಿಯಲ್ಲಿ (ಲೂಪ್ ಲೈನ್)ನಲ್ಲಿ ನಿಲ್ಲಿಸಲಾಗಿದ್ದ, ಗೂಡ್ಸ್ ಟ್ರೈನ್‌ಗೆ ಈ ಟ್ರೈನ್ ಡಿಕ್ಕಿ ಹೊಡಿದಿದೆ.
ಈ ರೀತಿ ಡಿಕ್ಕಿ ಹೊಡೆದ ಸಂದರ್ಭದಲ್ಲಿ ದುರಂತ ಸಂಭವಿದಿದೆ. ಗೂಡ್ಸ್ ಟ್ರೈನ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ನಡುವೆ ಡಿಕ್ಕಿಯಾದ ಬೆನ್ನಲ್ಲೇ ರೈಲಿನ ಬೋಗಿಗಳ ಜಖಂ ಆಗಿವೆ. ಈ ರೈಲು ದುರಂತದಲ್ಲಿ ಐದು ಬೋಗಿಗಳು ಹಳಿತಪ್ಪಿವೆ. ಈ ರೀತಿ ಹಳಿ ತಪ್ಪಿದ ಬೋಗಿಗಳಲ್ಲಿ ಎಸಿ ಬೋಗಿಗಳೂ ಸಹ ಸೇರಿದ್ದವು ಎಂದು ಹೇಳಲಾಗಿದೆ.
ಇನ್ನು ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ ಎರಡು ದುರಂತಗಳು ಒಂದೇ ದಿನ ಸಂಭವಿಸಿದಂತಾಗಿದೆ. ತಿರುಚ್ಚಿ ವಿಮಾನ ನಿಲ್ದಾಣದಲ್ಲೂ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಭಾರೀ ಸಂಚನವೇ ಸೃಷ್ಟಿಯಾಗಿತ್ತು. ಇನ್ನು ರೈಲು ಅಪಘಾತದಲ್ಲಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಭರದಿದಂದ ಸಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಬ್ಯುಲೆನ್ಸ್‌ಗಳು ತುರ್ತು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. 12578 ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ಕವರಾಯಪೆಟ್ಟೈಯಲ್ಲಿ ಶುಕ್ರವಾರ ರಾತ್ರಿ 8.50 ಸುಮಾರಿಗೆ ನಿಂತಿದ್ದ ಸಂದರ್ಭದಲ್ಲಿ ಈ ಅಪಘಾತ ಆಗಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಹಾಗೂ ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿರುವುದಾಗಿ ತಮಿಳುನಾಡು ಪೊಲೀಸರು ಹೇಳಿದ್ದಾರೆ.
ರೈಲು ಅಪಘಾತದಲ್ಲಿ ಹಲವರಿಗೆ ಗಾಯ: ರೈಲು ಅಪಘಾತದಲ್ಲಿ ಬೆಂಕಿ ಅವಘಡವೂ ಸಂಭವಿಸಿದೆ. ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಹಲವರಿಗೆ ಗಾಯಗಳಾಗಿವೆ. ಬೋಗಿಗಳಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಜಮಾಯಿಸಿದ್ದಾರೆ.
ರೈಲು ಡಿಕ್ಕಿಯಾದ ಸಂದರ್ಭದಲ್ಲಿ ರೈಲಿನ ವೇಗವು ಗಂಟೆಗೆ 109 ಕಿ.ಮೀ ನಲ್ಲಿತ್ತು. ಹೀಗಾಗಿ, ರೈಲಿನ ರಭಸಕ್ಕೆ ಹಲವರಿಗೆ ರೈಲಿನಲ್ಲಿ ಸಣ್ಣ ಪುಟ್ಟ ಗಾಯಗಳು ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ. ಅದೃಷ್ಟವಶಾತ್ ರೈಲು ದುರಂತದಲ್ಲಿ ಇಲ್ಲಿಯವರೆಗೆ ಯಾರೂ ಸಾವನ್ನಪ್ಪಿರುವುದು ವರದಿಯಾಗಿಲ್ಲ.












Click it and Unblock the Notifications