ರೈಲು ಅಪಘಾತ: ಭಾರತೀಯ ರೈಲ್ವೆ ಸುರಕ್ಷತೆ ಬಗ್ಗೆ ಕಳವಳ

ನವದೆಹಲಿ, ಜೂನ್‌ 5: ಭಾರತೀಯ ರೈಲ್ವೆ ಇತಿಹಾಸದಲ್ಲಿ 275 ಜನರ ಸಾವಿಗೆ ಕಾರಣವಾದ ಭೀಕರ ರೈಲು ಅಪಘಾತವಾದ ಮೂರು ದಿನಗಳ ನಂತರ ಭಾರತೀಯ ರೈಲ್ವೆ ವ್ಯವಸ್ಥೆಯ ಸುರಕ್ಷತೆಯ ಅಗತ್ಯವನ್ನು ಒತ್ತಿಹೇಳುವ ವರದಿಗಳು ವಿವಿಧ ಉನ್ನತ ಸಂಸ್ಥೆಗಳ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ರೈಲ್ವೇ ಮಂಡಳಿಯ ಅಧ್ಯಕ್ಷರು ಏಪ್ರಿಲ್‌ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ರೈಲ್ವೆ ಅಪಘಾತಗಳಲ್ಲಿ 37% ನಷ್ಟು ಗಂಭೀರ ಹೆಚ್ಚಳವಾಗಿದ್ದು, ಇದು ಕಳವಳಕಾರಿ ವಿಷಯ ಎಂದಿದ್ದಾರೆ. ಈ ಅಪಘಾತಗಳಲ್ಲಿ ಹೆಚ್ಚಿನವು ಗೂಡ್ಸ್ ರೈಲುಗಳು ನಡುವೆ ಸಂಭವಿಸಿಸಿದೆ. ಹೀಗಾಗಿ ಅಪಘಾತ ಹೆಚ್ಚು ಬಾಧಿತವಾಗಿಲ್ಲ ಎಂದು ಸಾಮಾನ್ಯವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.

Train accident

ಎಪ್ರಿಲ್‌ನಲ್ಲಿ ರೈಲ್ವೇ ಸಚಿವಾಲಯದ ಸುರಕ್ಷತಾ ಪರಿಶೀಲನಾ ಸಭೆಯಲ್ಲಿ ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷ ಅನಿಲ್ ಲಹೋಟಿ ಅವರು ರೈಲ್ವೆ ಅಪಘಾತಗಳು ಹೆಚ್ಚಳವಾಗಿದ್ದು, ಇದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿ ಆತಂಕ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಮಂಡಳಿಯು ಟ್ರ್ಯಾಕ್ ಸಮಸ್ಯೆಗಳು ಮತ್ತು ಸಿಗ್ನಲಿಂಗ್ ಮತ್ತು ಕಾರ್ಯಾಚರಣೆಗಳಲ್ಲಿನ ಸಮಸ್ಯೆಗಳು ಮತ್ತು ಇತರ ವ್ಯವಸ್ಥಿತ ಕೊರತೆಗಳಿರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಇದರಲ್ಲಿ ಮುಖ್ಯವಾಗಿ ಸಿಗ್ನಲಿಂಗ್‌ನ ತೊಂದರೆಯು ಜೂನ್ 2 ರಂದು ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ಘರ್ಷಣೆಗೆ ಕಾರಣವಾಯಿತು ಎಂದು ನಂಬಲಾಗಿದೆ.

ರೈಲ್ವೆ ಮಂಡಳಿಯು ಎಸ್‌ಇಸಿಆರ್‌ ಮತ್ತು ಈಸ್ಟ್ ಕೋಸ್ಟ್ ರೈಲ್ವೆ ಸಿಬ್ಬಂದಿ 12 ಗಂಟೆಗಳ ಅವಧಿಯ ಪಾಳಿಗಳನ್ನು ಮೀರಿ ಕೆಲಸ ಮಾಡುತ್ತಾರೆ. ಜೂನ್ 4 ರಂದು ಕಾಂಗ್ರೆಸ್ ಪಕ್ಷವು ರೈಲ್ವೇ ಇಲಾಖೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ ಎಂದು ಆರೋಪಿಸಿದೆ. ಸುಮಾರು 15 ಲಕ್ಷ ಗ್ರೂಪ್ ಸಿ ಹುದ್ದೆಗಳಲ್ಲಿ 3.11 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಮತ್ತು 3,018 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಭಾರತೀಯ ರೈಲ್ವೇಯಲ್ಲಿ 18,881 ಗೆಜೆಟೆಡ್ ಕೇಡರ್ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯು ಬಹಿರಂಗಪಡಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Train accident

ಬಿಸಿನೆಸ್ ಸ್ಟ್ಯಾಂಡರ್ಡ್‌ನ ಪ್ರತ್ಯೇಕ ವರದಿಯು 2017-18 ರಿಂದ ಐದು ವರ್ಷಗಳಲ್ಲಿ 11 ರೈಲು ಡಿಕ್ಕಿಗಳಿಗೆ ರೈಲ್ವೆ ಹೇಗೆ ಸಾಕ್ಷಿಯಾಗಿದೆ ಎಂಬುದನ್ನು ತಿಳಿಸಿದೆ. ಘರ್ಷಣೆಗಳು ರೈಲು ಅಪಘಾತಗಳ ಬಹುಪಾಲು ಅಲ್ಲದಿದ್ದರೂ, ಹಳಿತಪ್ಪುವಿಕೆಗಳು, ಲೆವೆಲ್-ಕ್ರಾಸಿಂಗ್ ಘಟನೆಗಳು, ಬೆಂಕಿ ಮತ್ತು ಇತರ ಘಟನೆಗಳು ರೈಲು ಡಿಕ್ಕಿಗಳ ಸಂಖ್ಯೆಗಿಂತ 20 ಪಟ್ಟು ಹೆಚ್ಚು ಎನ್ನಲಾಗಿದೆ. ರೈಲು ಘರ್ಷಣೆಯನ್ನು ತಪ್ಪಿಸುವ 'ಕವಾಚ್' ವ್ಯವಸ್ಥೆಯನ್ನು ಸೀಮಿತ ರೀತಿಯಲ್ಲಿ ಮಾತ್ರ ಜಾರಿಗೆ ತರಲಾಗಿದೆ ಎಂದು ವರದಿ ತಿಳಿಸಿದೆ.

ನಿನ್ನೆ ದಿ ವೈರ್ ವರದಿ ಮಾಡಿದ ಸಿಎಜಿ ವರದಿಯಲ್ಲೂ ಇದೇ ಮಾದರಿ ಸತ್ಯಾಂಶಗಳು ಬಹಿರಂಗವಾಗಿವೆ. ಅದರಲ್ಲಿ, 2017-18 ಮತ್ತು 2020-21ರ ನಡುವಿನ 10 ರೈಲು ಅಪಘಾತಗಳ ಪೈಕಿ ಸುಮಾರು ಏಳು ರೈಲು ಹಳಿ ತಪ್ಪುವಿಕೆಗಳು, ಎಂಜಿನಿಯರಿಂಗ್ ಮತ್ತು ನಿರ್ವಹಣೆ ಸಮಸ್ಯೆಗಳು ಮತ್ತು ಕಾರ್ಯಾಚರಣೆಯ ದೋಷಗಳಿಂದ ಪ್ರಚೋದಿಸಲ್ಪಟ್ಟಿವೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+