ಜಿಯೋ, ಏರ್‌ಟೆಲ್‌ಗೆ TRAI ಹೊಸ ರೂಲ್ಸ್: ಇನ್ಮುಂದೆ 28 ಅಲ್ಲ, 30 ದಿನಗಳ ರೀಚಾರ್ಜ್ ವ್ಯಾಲಿಡಿಟಿ ಕಡ್ಡಾಯ

ಭಾರತದ ಕೋಟ್ಯಂತರ ಮೊಬೈಲ್ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಇನ್ನು ಮುಂದೆ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಟೆಲಿಕಾಂ ಕಂಪನಿಗಳ '28 ದಿನಗಳ ವ್ಯಾಲಿಡಿಟಿ' ತಂತ್ರಕ್ಕೆ ಬ್ರೇಕ್ ಬೀಳಲಿದೆ.

ಹೌದು, ಬಹುತೇಕ ಮೊಬೈಲ್ ಬಳಕೆದಾರರನ್ನ ಕಾಡುತ್ತಿದ್ದ ಅತಿ ದೊಡ್ಡ ಸಮಸ್ಯೆ ಎಂದರೆ, ಒಂದು ತಿಂಗಳ ರೀಚಾರ್ಜ್ ಎಂದು ಹೇಳಿ ಕೇವಲ 28 ದಿನಗಳಿಗೆ ಸೇವೆ ಕಡಿತಗೊಳಿಸುತ್ತಿದ್ದುದು. ಈ ಬಗ್ಗೆ ಗ್ರಾಹಕರಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಟ್ರಾಯ್ ಹೊಸ ನಿಯಮ ಜಾರಿಗೆ ತರುತ್ತಿದ್ದು, ಮುಂಬರುವ ಆಗಸ್ಟ್ 21ರಿಂದ ಕಡ್ಡಾಯವಾಗಿ 30 ದಿನಗಳ ರೀಚಾರ್ಜ್ ವ್ಯಾಲಿಡಿಟಿ ಗ್ರಾಹಕರಿಗೆ ಲಭ್ಯವಾಗಲಿದೆ.

TRAI New Recharge Rules Telecoms Must Offer 30-Day Validity amp amp Data-Free Plans From August 21

ವರ್ಷಕ್ಕೆ ಒಂದು ರೀಚಾರ್ಜ್ ಉಳಿತಾಯ: 30 ದಿನಗಳ ಹೊಸ ಮೊಬೈಲ್ ಪ್ಲಾನ್

ಪ್ರಸ್ತುತ, ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಅಥವಾ ವೊಡಾಫೋನ್ ಐಡಿಯಾ ಸೇರಿದಂತೆ ಯಾವುದೇ ಟೆಲಿಕಾಂ ಕಂಪನಿಯಿರಲಿ, ಒಂದು ತಿಂಗಳ ವ್ಯಾಲಿಡಿಟಿ ಹೆಸರಿನಲ್ಲಿ 28 ದಿನಗಳ ಪ್ಲಾನ್‌ಗಳನ್ನೇ ಗ್ರಾಹಕರಿಗೆ ನೀಡುತ್ತಿವೆ. ಈ ಲೆಕ್ಕಾಚಾರದಲ್ಲಿ ನೋಡಿದರೆ, 28 ದಿನಗಳ ಚಕ್ರದಿಂದಾಗಿ ಗ್ರಾಹಕರು ವರ್ಷದ 12 ತಿಂಗಳುಗಳ ಬದಲಾಗಿ 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇತ್ತು. ಇದು ಟೆಲಿಕಾಂ ಕಂಪನಿಗಳಿಗೆ ಸಾವಿರಾರು ಕೋಟಿ ಲಾಭ ತಂದುಕೊಡುತ್ತಿತ್ತು.

ಆದರೆ, ಟ್ರಾಯ್‌ನ ಹೊಸ ಆದೇಶದ ಪ್ರಕಾರ, ಟೆಲಿಕಾಂ ಕಂಪನಿಗಳು ಕಡ್ಡಾಯವಾಗಿ 30 ದಿನಗಳ ವ್ಯಾಲಿಡಿಟಿ ನೀಡುವ ಪ್ಲಾನ್‌ಗಳನ್ನ ಪರಿಚಯಿಸಲೇಬೇಕು. ಇದರಿಂದ ಗ್ರಾಹಕರಿಗೆ ವರ್ಷದಲ್ಲಿ ಒಂದು ರೀಚಾರ್ಜ್‌ನ ಹಣ ಉಳಿತಾಯವಾಗಲಿದೆ. ಜೊತೆಗೆ, ಗ್ರಾಹಕರು ಯಾವ ದಿನಾಂಕದಂದು ರೀಚಾರ್ಜ್ ಮಾಡುತ್ತಾರೋ, ಮುಂದಿನ ತಿಂಗಳು ನಿಖರವಾಗಿ ಅದೇ ದಿನಾಂಕದಂದು ರೀಚಾರ್ಜ್ ನವೀಕರಣಗೊಳ್ಳುವ ಆಯ್ಕೆಯನ್ನೂ ಕಡ್ಡಾಯವಾಗಿ ಒದಗಿಸಬೇಕೆಂದು ಸೂಚಿಸಲಾಗಿದೆ.

ಡೇಟಾ ಬೇಡವಾದರೆ ಹಣ ಯಾಕೆ ಕೊಡಬೇಕು? ಡೇಟಾ ರಹಿತ ಪ್ಲಾನ್‌ ಕಡ್ಡಾಯ

ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸದವರಿಗೂ ಈ ಹೊಸ ನಿಯಮವು ದೊಡ್ಡ ರಿಲೀಫ್ ನೀಡಲಿದೆ. ಕೇವಲ ಬೇಸಿಕ್ ಕೀಪ್ಯಾಡ್ ಫೋನ್ ಬಳಸುವ ಹಿರಿಯ ನಾಗರಿಕರು, ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವವರು ಮತ್ತು ಮನೆ ಅಥವಾ ಕಚೇರಿಯಲ್ಲಿ ಸದಾ ವೈ-ಫೈ ಸಂಪರ್ಕದಲ್ಲಿರುವವರು, ತಮಗೆ ಅಗತ್ಯವಿಲ್ಲದಿದ್ದರೂ ಡೇಟಾಕ್ಕಾಗಿ ಹೆಚ್ಚಿನ ಹಣ ಪಾವತಿಸಿ ಕಾಂಬೊ ಪ್ಲಾನ್ ಪಡೆಯಬೇಕಾಗಿತ್ತು.

ಈ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿರುವ ಟ್ರಾಯ್, ಕೇವಲ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಸೌಲಭ್ಯ ಮಾತ್ರ ಇರುವ 'ಡೇಟಾ ರಹಿತ ಪ್ಲಾನ್‌'ಗಳನ್ನ ಕಡ್ಡಾಯವಾಗಿ ಒದಗಿಸುವಂತೆ ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇದರಿಂದಾಗಿ ಗ್ರಾಹಕರು ಅನಗತ್ಯವಾಗಿ ಡೇಟಾಗೆ ಹಣ ಸುರಿಯುವುದು ತಪ್ಪಲಿದ್ದು, ಗ್ರಾಮೀಣ ಭಾಗದ ಜನರಿಗೆ ರೀಚಾರ್ಜ್ ದರ ಕೂಡ ಕಡಿಮೆಯಾಗಲಿದೆ.

ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾಗೆ ಕಟ್ಟುನಿಟ್ಟಿನ ಸೂಚನೆ

ಟ್ರಾಯ್ ರೂಪಿಸಿರುವ ಈ ಗ್ರಾಹಕ ಸ್ನೇಹಿ ನಿಯಮಗಳು ಆಗಸ್ಟ್ 21ರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿವೆ. ಪ್ರತಿಯೊಂದು ಟೆಲಿಕಾಂ ಕಂಪನಿಯು ತನ್ನ ರೀಚಾರ್ಜ್ ಪಟ್ಟಿಯಲ್ಲಿ ಕನಿಷ್ಠ ಒಂದು 30 ದಿನಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ವಾಯ್ಸ್/ಎಸ್‌ಎಂಎಸ್ ಪ್ಲಾನ್ ಅನ್ನ ಹೊಂದಿರಲೇಬೇಕು.

ಜೊತೆಗೆ, ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ಡೇಟಾ ರಹಿತ ಪ್ಲಾನ್ ಒಂದನ್ನಾದರೂ ಗ್ರಾಹಕರಿಗೆ ಪರಿಚಯಿಸಬೇಕು. ಒಟ್ಟಾರೆಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಟೆಲಿಕಾಂ ಕಂಪನಿಗಳ ತಂತ್ರಕ್ಕೆ ಟ್ರಾಯ್ ಬ್ರೇಕ್ ಹಾಕಿದ್ದು, ಗ್ರಾಹಕರ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಈ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+