Uttar Pradesh: ತಪ್ಪಾದ ಇಂಜೆಕ್ಷನ್‌ನಿಂದ ಬಾಲಕಿ ಸಾವು: ಮೃತದೇಹ ಬೈಕ್‌ಮೇಲೆ ಬಿಟ್ಟುಹೋದ ಆಸ್ಪತ್ರೆ ಸಿಬ್ಬಂದಿ
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಿರ್ಲಕ್ಷ್ಯ ಮತ್ತು ಆಘಾತಕಾರಿ ಘಟನೆಯೊಂದರಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ನಂತರ ಆಸ್ಪತ್ರೆಯ ಸಿಬ್ಬಂದಿ ಆಕೆಯ ಶವವನ್ನು ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಮೇಲೆ ಎಸೆದು, ಆಕೆ ಮೃತಪಟ್ಟಿರುವ ಬಗ್ಗೆಯೂ ತಿಳಿಸದೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.
ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪಲಾಯನ ಮಾಡಿದ್ದು, ಬಾಲಕಿಯ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮೋಟಾರು ಸೈಕಲ್‌ನಲ್ಲಿ ಬಾಲಕಿ ನಿರ್ಜೀವವಾಗಿ ಮಲಗಿರುವ ಆಸ್ಪತ್ರೆಯ ಹೊರಗಿನ ವಿಡಿಯೋವೊಂದು ವೈರಲ್ ಆಗಿದೆ.

ಮೃತಪಟ್ಟ ಬಾಲಕಿ ಭಾರತಿ ಅವರಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದ್ದರಿಂದ ಘಿರೋರ್ ಪ್ರದೇಶದ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಕೆಯ ಚಿಕ್ಕಮ್ಮ ಮನಿಶಾ ಹೇಳಿದರು, ಬುಧವಾರ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು.
ನಂತರ ವೈದ್ಯರು ಚುಚ್ಚುಮದ್ದನ್ನು ನೀಡಿದರು, ಅದಾದ ಬಳಿಕ ಬಾಲಕಿಯ ಸ್ಥಿತಿ ಹದಗೆಟ್ಟಿತು ಎಂದು ಚಿಕ್ಕಮ್ಮ ಆರೋಪಿಸಿದ್ದಾರೆ, ಭಾರತಿ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದರು ಮತ್ತು ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಅಷ್ಟರಲ್ಲಾಗಲೆ ಭಾರತಿ ಸತ್ತಿದ್ದಾಳೆ ಎಂದು ಹೇಳಿದಳು.
ಇನ್ನೂ ದೂರು ದಾಖಲಾಗಿಲ್ಲ
ಸಂತ್ರಸ್ತೆಯ ಕುಟುಂಬದವರು ಇನ್ನೂ ಪೊಲೀಸ್ ದೂರು ದಾಖಲಿಸಿಲ್ಲ. ತಕ್ಷಣದ ಕ್ರಮ ಕೈಗೊಂಡ, ಮುಖ್ಯ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ನೋಡಲ್ ಅಧಿಕಾರಿಯನ್ನು ಕಳುಹಿಸಿದ್ದಾರೆ. ವೈದ್ಯರು ಮತ್ತು ಆಡಳಿತ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಆಸ್ಪತ್ರೆನ್ನು ಸೀಲ್ ಮಾಡಲಾಗಿದೆ.
"ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಇದ್ದರು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಮತ್ತು ಆಸ್ಪತ್ರೆಗೆ ಸೀಲ್ ಮಾಡಲಾಗಿದೆ" ಎಂದು ಮುಖ್ಯ ವೈದ್ಯಾಧಿಕಾರಿ ಆರ್‌ಸಿ ಗುಪ್ತಾ ಹೇಳಿದರು ಮತ್ತು ಆಸ್ಪತ್ರೆಯನ್ನು ನೋಂದಾಯಿಸಲಾಗಿದೆ ಆದರೆ ಆಸ್ಪತ್ರೆ ನಿರ್ವಾಹಕರು ಇರಲಿಲ್ಲ, ವೈದ್ಯರ ಮತ್ತು ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.












Click it and Unblock the Notifications