ಪ.ಬಂಗಾಳದಲ್ಲಿ ಭೀಕರ ಅಪಘಾತ: 37 ಮಂದಿ ದುರ್ಮರಣ
ಮುರ್ಷಿದಾಬಾದ್, ಜನವರಿ 30: ಪಶ್ಚಿಮಬಂಗಾಳದ ಮುರ್ಷಿದಾಬಾದ್ ನಲ್ಲಿ ನಿನ್ನೆ(ಜ.29) ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 37 ಜನ ಮೃತರಾಗಿದ್ದಾರೆ.
50 ಜನ ಪ್ರಯಾಣಿಕರನ್ನು ಹೊತ್ತ ಬಸ್ಸೊಂದು ಇಲ್ಲಿನ ಮಾಲ್ಡಾ ಜಿಲ್ಲೆಗೆ ಹೊರಟಿದ್ದಾಗ ಸೇತುವೆಯೊಂದು ಮುರಿದ ಪರಿಣಾಮ ಕಣಿವೆಯೊಂದಕ್ಕೆ ಉರುಳಿದೆ. ಇದರಿಂದಾಗಿ 10 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 37 ಜನ ಮೃತರಾಗಿದ್ದಾರೆ.
ಕ್ರೇನ್ ಗಳ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯ ನಡೆಸುತ್ತಿದೆ. ಕೆಲವರನ್ನು ರಕ್ಷಿಸಲಾಗಿದೆ.

ಜ.16 ರಂದು ಮಹಾರಾಷ್ಟ್ರದ ಕೊಲ್ಹಾಪುರದ ಪಂಚಗಂಗಾ ನದಿಗೆ ಬಸ್ಸು ಉರುಳಿದ ಪರಿಣಾಮ 13 ಜನ ಮೃತರಾಗಿದ್ದರು.












Click it and Unblock the Notifications