ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದ ಆಚರಣೆ: ಗೋವಾದಲ್ಲಿ ಜನರ ದಂಡು, ದಾಖಲೆಯ ವಿಮಾನಗಳು!

|
Google Oneindia Kannada News

ಪಣಜಿ, ಡಿ. 20: ಹೊಸ ವರ್ಷ ಆಚರಣೆಗೆ ಜನರು ಸಾಂಆನ್ಯವಾಗಿ ಹೊಸ ಸ್ಥಳಗಳಿಗೆ ಹೋಗಲು ಹಾತೊರೆಯುತ್ತಾರೆ. ಅದರಲ್ಲೂ ಗೋವಾ ಎಲ್ಲರ ಅಚ್ಚು ಮೆಚ್ಚಿನ ಸ್ಥಳ. ಈಗ ಗೋವಾ ವಿಮಾನ ನಿಲ್ದಾಣದಲ್ಲಿ ನೂರಾರು ವಿಮಾನಗಳು ಹಾರಾಡುತ್ತಿವೆ.

"ಡಿಸೆಂಬರ್ 18 ರಂದು, ಭಾನುವಾರ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 100 ಆಗಮನ ಮತ್ತು 101 ನಿರ್ಗಮನಗಳನ್ನು ದಾಖಲಿಸಿದೆ, ಒಟ್ಟು 31,965 (16046 ಆಗಮನ ಮತ್ತು 15919 ನಿರ್ಗಮನ) ಪ್ರಯಾಣಿಕರ ಸಂಖ್ಯೆ ದಾಖಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಧಿಕವಾಗಿದೆ" ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಟ್ವಿಟರ್‌ನಲ್ಲಿ ತಿಳಿಸಿದೆ.

ಪ್ರವಾಸಿಗರೇ ಎಚ್ಚರ; ಗೋವಾ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗಳುಪ್ರವಾಸಿಗರೇ ಎಚ್ಚರ; ಗೋವಾ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗಳು

ಕೊರೋನಾದ ರೂಪಾಂತದ ಓಮಿಕ್ರಾನ್‌ನಿಂದಾಗಿ ಗೋವಾದಲ್ಲಿ ಕಳೆದ ವರ್ಷ ಪ್ರವಾಸಿ ಋತುವೇ ಹಾಳಾಗಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೂ ಭಾರೀ ಪೆಟ್ಟು ಬಿದ್ದಿತ್ತು. ಈ ಬಾರಿ ಎಲ್ಲಾ ನಿರ್ಬಂಧಗಳು ಸಡಿಲಗೊಂಡಿದ್ದು, ಕೊರೊನಾ ರ್ಪೂವದ ದಿನಗಳನ್ನು ಮೀರಿ ಜನರು ಬರಬಹುದು ಎಂದು ಅಂದಾಜಿಸಲಾಗಿದೆ.

Tourism season picks up, Goa airport record flights

"ನಾವು ಈ ವರ್ಷ ಇಲ್ಲಿಯವರೆಗೆ ಉತ್ತಮ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕಂಡಿದ್ದೇವೆ. ಪಂಚತಾರಾ ಹೋಟೆಲ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈಗ ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ಕೋಣೆಯನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಅದರಲ್ಲೂ ವಿಶೇಷವಾಗಿ ಮದುವೆಗಳು ಮತ್ತು ಇತರ ರಜಾದಿನಗಳಲ್ಲಿ" ಎಂದು ಟ್ರಾವೆಲ್ ಮತ್ತು ಟೂರಿಸಂ ಅಸೋಸಿಯೇಶನ್ ಆಫ್ ಗೋವಾದ ಸದಸ್ಯರೊಬ್ಬರು ಹೇಳಿದ್ದಾರೆ.

ಗೋವಾದ ಪ್ರವಾಸೋದ್ಯಮ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ನಡುವಿನ ವಾರದಲ್ಲಿ ಉತ್ತುಂಗಕ್ಕೆ ಏರಲಿದೆ. ಈ ದಿನಗಳಲ್ಲಿ ದೇಶಾದ್ಯಂತ ಲಕ್ಷಾಂತರ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುತ್ತಾರೆ. ಈ ಅವಧಿಯಲ್ಲಿ ಯುರೋಪ್‌ನ ಶೀತ ಮತ್ತು ಚಳಿಗಾಲವಿರುವ ಕಾರಣ ವಿಶ್ವದ ಬಿಸಿಲಿನ ಭಾಗಗಳಲ್ಲಿ ತಮ್ಮ ದಿನಗಳನ್ನು ಕಳೆಯಲು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ.

ಇನ್ನು, ಗೋವಾಕ್ಕೆ ಪ್ರಯಾಣಿಸುವ ಪ್ರವಾಸಿಗರ ಬೇಡಿಕೆ ಹೆಚ್ಚಾಗಿದ್ದು, ಡಿಸೆಂಬರ್ ಅಂತ್ಯದಲ್ಲಿ ಆಯೋಜಿಸಲಾಗುತ್ತಿರುವ ಸಮಾರಂಭಗಳಲ್ಲಿ ಭಾಗವಹಿಸುವವರಿಗಾಗಿ ಕೊಠಡಿಗಳನ್ನು ನೀಡಲು ಗೋವಾ ಸರ್ಕಾರವು ಕಷ್ಟಕರವಾಗಿದೆ.

Tourism season picks up, Goa airport record flights

ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ವಿ ಟಿ ಧನಮಜಯ ರಾವ್ ಮಾತನಾಡಿ, ವಿಮಾನ ನಿಲ್ದಾಣವು ಬೇಡಿಕೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದೆ. ಆದರೆ ಅದನ್ನು ನಿಭಾಯಿಸಲು ಸಮರ್ಥವಾಗಿದೆ ಎಂದಿದ್ದಾರೆ.

ವಿಮಾನ ನಿಲ್ದಾಣವು ನೌಕಾಪಡೆಯ ನಿರ್ಬಂಧಗಳು ಅಂತ್ಯಗೊಂಡ ತಕ್ಷಣದ ಗಂಟೆಗಳಲ್ಲಿ 12:30pm ಮತ್ತು 2:30pm ನಡುವೆ ಅತಿ ಹೆಚ್ಚು ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುತ್ತದೆ. ನಿಮಿಷಗಳಲ್ಲಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ವಾರಾಂತ್ಯಗಳಲ್ಲಿ ಗೋವಾಕ್ಕೆ ವಿಮಾನ ದರಗಳು ಮೂರು ಪಟ್ಟು ಹೆಚ್ಚಾಗಿದೆ. ಹೊಸ ವರ್ಷದ ದಿನಾಂಕ ಸಮೀಪಿಸುತ್ತಿದ್ದಂತೆ ಿದು ಇನ್ನು ಹೆಚ್ಚಾಗುವ ನಿರೀಕ್ಷೆಯಿದೆ. ಹೊಸ ವರ್ಷದ ಹಿಂದಿನ ದಿನಗಳಲ್ಲಿ ನಡೆಯುವ ಜನಪ್ರಿಯ ನೃತ್ಯ ಸಂಗೀತ ಉತ್ಸವವಾದ ಸನ್‌ಬರ್ನ್‌ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ವರ್ಷ ಗೋವಾಗೆ 81 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಗೋವಾ ಆಡಳಿತವು 'ಅಬ್ಬರ'ವನ್ನು ನಿಭಾಯಿಸಲು ಸಜ್ಜಾಗಿದೆ ಎಂದು ಹೇಳಿದೆ.

English summary
Goa International Airport recorded 100 arrivals and 101 departures as tourism season picks up pace. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X