For Daily Alerts
ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆ
ನವದೆಹಲಿ, ಡಿಸೆಂಬರ್ 28: ಭಾನುವಾರಕ್ಕೆ ಹೋಲಿಸಿದರೆ ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗಿದೆ.
ಇಂದು 20,021 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 1,02,07,871 ಕೊರೊನಾ ಸೋಂಕಿತರಿದ್ದಾರೆ. 2,77,301 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 279 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 1,47,901 ಮಂದಿ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಕೊವಿಡ್ 19 ಮೃತರ ಸಂಖ್ಯೆ ಮತ್ತೊಮ್ಮೆ 300ಕ್ಕಿಂತ ಕಡಿಮೆ
ಕಳೆದ 24 ಗಂಟೆಯಲ್ಲಿ 21,131 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 97,82,669 ಮಂದಿ ಗುಣಮುಖರಾಗಿದ್ದಾರೆ.ಒಟ್ಟು 16,88,18,054 ಮಾದರಿಯನ್ನು ಪರೀಕ್ಷಿಸಲಾಗಿದೆ. ಡಿಸೆಂಬರ್ 27 ರಂದು 7,15,397 ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.