OYO Room Booking: ಒಯೋ ರೂಮ್ ಬುಕ್ಕಿಂಗ್ ಹೆಚ್ಚಳಕ್ಕೆ 4 ಪ್ರಮುಖ ಕಾರಣಗಳು ಇಲ್ಲಿವೆ!
ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒಯೋ ರೂಮ್ ಬುಕ್ಕಿಂಗ್ ಸಿಕ್ಕಾಪಟ್ಟೆ ಜಾಸ್ತಿ ಆಗ್ತಿದೆ. ಅದರಲ್ಲೂ ಮುಖ್ಯವಾಗಿ ಹೊಸ ವರ್ಷ ಹಾಗೂ ವ್ಯಾಲಂಟೈನ್ಸ್ ಡೇ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಒಯೋ ರೂಮ್ಸ್ ಬುಕ್ಕಿಂಗ್ ಹೊಸ ದಾಖಲೆಗಳನ್ನು ಕಾಣುತ್ತಿದೆ. ಒಯೋ ರೂಮ್‌ನ ಬಗ್ಗೆ ಹಲವರಲ್ಲಿ ಕೇವಲ ಪ್ರೇಮಿಗಳು ಹಾಗೂ ಒಪ್ಪಿತ ಸಂಬಂಧದಲ್ಲಿ ಇರುವವರು ಮಾತ್ರ ಒಯೋಗೆ ಹೋಗುತ್ತಾರೆ ಎನ್ನುವ ಮಾತಿದೆ. ಆದರೆ ಅದು ಸುಳ್ಳಾಗುತ್ತಿದೆ. ಅದೇ ಸಮಯದಲ್ಲಿ ಒಪ್ಪಿತ ಸಂಬಂಧದಲ್ಲಿ ಇರುವವರು ಒಯೋ ರೂಮ್‌ಗೆ ಹೋಗುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದಲ್ಲಿ ಒಯೋ ರೂಮ್ಸ್ ಬುಕ್ಕಿಂಗ್ ಹೆಚ್ಚಳಕ್ಕೆ 5 ಪ್ರಮುಖ ಕಾರಣಗಳು ಇಲ್ಲಿವೆ.
ಒಯೋ ರೂಮ್ ಅಂದಕೂಡಲೇ ಜನರ ಮನಸ್ಸಿನಲ್ಲಿ ಬರುವುದು ಸೆಕ್ಸ್. ಒಯೋ ರೂಮ್ಸ್ ಇದೇ ಕಾರಣಕ್ಕಾಗಿಯೇ ಪ್ರಾರಂಭದಲ್ಲಿ ಫೇಮಸ್ ಆಗಿತ್ತು. ಈಗಲೂ ಈ ಹೋಟೆಲ್‌ಗಳಲ್ಲಿ ಕೆಲವು ಬಹುತೇಕ ಇದೇ ಕಾರಣಕ್ಕೆ ಫೇಮಸ್ ಆಗಿದೆ ಎನ್ನುವ ಮಾತಿದೆ. ಆದರೆ ಸಾಮಾನ್ಯವಾಗಿ ಪ್ರವಾಸ ಮಾಡುವವರು ಹಾಗೂ ಯಾತ್ರೆ ಮಾಡುವವರು ಸಹ ಈಗ ಒಯೋ ರೂಮ್ ಬುಕ್ ಮಾಡುತ್ತಿದ್ದಾರೆ. ಆದರೆ ಇದು ಮಾತ್ರ ಒಯೋ ರೂಮ್ಸ್ ಬುಕ್ಕಿಂಗ್ ಪ್ರಮಾಣ ಹೆಚ್ಚಳವಾಗುವುದಕ್ಕೆ ಕಾರಣವಾಗಲಿಲ್ಲ. ಹಾಗಾದರೆ ಯಾವ ಕಾರಣಕ್ಕಾಗಿ ದೇಶದಲ್ಲಿ ಒಯೋ ರೂಮ್ಸ್ ಬುಕ್ಕಿಂಗ್ ಹೆಚ್ಚಳವಾಗುತ್ತಿದೆ ನೋಡೋಣ ಬನ್ನಿ.

ಗ್ರಾಹಕರ ರೇಟಿಂಗ್ ಹೆಚ್ಚಳ: ಒಯೋ ರೂಮ್ಸ್‌ನ ರೇಟಿಂಗ್ ಹೆಚ್ಚಳವಾಗಿರುವುದು ಒಯೋ ರೂಮ್ಸ್ ಬುಕ್ಕಿಂಗ್ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಈ ಹೋಟೆಲ್‌ಗಳಿಗೆ ಭೇಟಿ ನೀಡುವ ಗ್ರಾಹಕರು ಹೋಟೆಲ್‌ಗಳಲ್ಲಿ ಕೊಡುವ ಸೇವೆಗೆ ರೇಟಿಂಗ್ ಕೊಡ್ತಾರೆ. ಅದರಲ್ಲಿ ಇಲ್ಲಿ ಒಳ್ಳೆ ರೇಟಿಂಗ್ ಬರುತ್ತಿವೆ. OYO ಕಸ್ಟಮರ್ಸ್‌ಗಳ ರೇಟಿಂಗ್ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಟ್ರಾವೆಲ್ಸ್ ಎಜೆಂಟ್‌ಗಳ ಸಂಖ್ಯೆ ಹೆಚ್ಚಳ: ಇನ್ನು ಒಯೋಗೆ ಜನ ಹೆಚ್ಚಾಗಿ ಬರುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ. ಒಯೋ ಸಂಸ್ಥೆಯು ಟ್ರಾವೆಲ್ ಏಜೆಂಟ್‌ಗಳು ಮತ್ತು ಕಾರ್ಪೋರೇಟ್ ಕಂಪನಿಗಳ ಕ್ಲೈಂಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದು. OYO ಇದೀಗ ಟ್ರಾವೆಲ್ ಏಜೆಂಟ್‌ಗಳು ಮತ್ತು ಕಾರ್ಪೊರೇಟ್ ಕ್ಲೈಂಟ್‌ಗಳ ನೆಟ್‌ವರ್ಕ್ ಮಾಡಿಕೊಂಡಿದೆ. 2023ರ ಮಾರ್ಚ್ ತಿಂಗಳಿನಲ್ಲಿ OYO 5,300 ಟ್ರಾವೆಲ್ ಏಜೆಂಟ್‌ಗಳನ್ನು ಹೊಂದಿತ್ತು. 2024ರ ಆಗಸ್ಟ್ ವೇಳೆಗೆ 10,000ಕ್ಕಿಂತ ಹೆಚ್ಚಾಗಿತ್ತು. ಈ ಸಂಖ್ಯೆ ಇದೀಗ ಇನ್ನಷ್ಟು ಹೆಚ್ಚಳವಾಗಿದೆ.
ಸಣ್ಣ ಪಟ್ಟಣಗಳಲ್ಲೂ ಹೋಟೆಲ್ ಬುಕ್ಕಿಂಗ್: ಸಣ್ಣ ಸಣ್ಣ ನಗರ ಹಾಗೂ ಪಟ್ಟಣಗಳಲ್ಲೂ ಒಯೋ ರೂಮ್ ಬುಕ್ಕಿಂಗ್ಸ್ ಶುರುವಾಗಿದೆ. ಇದರಿಂದ ಒಯೋಗೆ ಆದಾಯದ ಸುರಿಮಳೆಯೇ ಆಗುತ್ತಿದೆ. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಒಯೋ ಇದೀಗ ಗ್ರಾಮೀಣ ಹಾಗೂ ಹಳ್ಳಿ ಪ್ರದೇಶಗಳಿಗೂ ವಿಸ್ತರಣೆಯಾಗಿದೆ. ಇನ್ನು ಸಾಮಾನ್ಯವಾಗಿ ವ್ಯಾಲೆಂಟೈನ್ಸ್ ಡೇ ಬುಕ್ಕಿಂಗ್ ಹೆಚ್ಚಾಗುತ್ತಲ್ಲೇ ಇದೆ. OYO ಪ್ರೇಮಿಗಳ ದಿನದ ಬುಕಿಂಗ್‌ಗಳಲ್ಲಿ ಶೇಕಡ 90ರಷ್ಟು ಹೆಚ್ಚಾಗಿದ್ದು ಸಹ ಇದೆ. ಪ್ರೇಮಿಗಳ ದಿನದಂದು ದಂಪತಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಒಯೋ ರೂಮ್ಸ್ ಬುಕ್ಕಿಂಗ್ ಮಾಡುತ್ತಾರೆ. ಕೆಲವರು ಸಲಿಂಗ ಕಾಮಿಗಳು ಸಹ ಒಯೋ ರೂಮ್ಸ್ ಬುಕ್ ಮಾಡುತ್ತಾರೆ ಎಂದು ಹೇಳಲಾಗಿದೆ.
ಸಣ್ಣ ಹೋಟೆಲ್‌ಗಳೊಂದಿಗೆ ಒಪ್ಪಂದ: ಸಣ್ಣ ಹೋಟೆಲ್‌ಗಳೊಂದಿಗೆ ಒಯೋ ಸಂಸ್ಥೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಅಲ್ಲದೆ ಸ್ಥಳೀಯ ಸ್ಟಾರ್ಟ್‌ಅಪ್‌ಗಳೊಂದಿಗೂ ಕೈ ಜೋಡಿಸಿರುವುದರಿಂದ ಒಯೋ ಹೋಟೆಲ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ನಗರದ ಮುಖ್ಯ ಪ್ರದೇಶಗಳಲ್ಲಿ ಒಯೋ ರೂಮ್‌ಗಳು ಸ್ಥಾಪನೆಯಾಗಿವೆ. ಅಲ್ಲದೆ ಈ ಹೋಟೆಲ್‌ಗಳಲ್ಲಿ ಯಾರು ಯಾರನ್ನೂ ಜಡ್ಜ್ ಮಾಡಲ್ಲ ಎನ್ನುವ ಮಾತು ಸಹ ಇದೆ. ಈ ಎಲ್ಲಾ ಕಾರಣಗಳಿಂದ ಒಯೋ ರೂಮ್ಸ್‌ಗಳ ಬೇಡಿಕೆ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೆ ವಿದೇಶಿ ಸಂಸ್ಕೃತಿಗೆ ಭಾರತದ ಕೆಲವು ಯುವ ಸಮೂಹ ಹೊಂದಿಕೊಳ್ಳುತ್ತಿರುವುದು. ಫಾಲೋ ಮಾಡುತ್ತಿರುವುದು ಸಹ ಇದಕ್ಕೆ ಕಾರಣ ಅಂತ ಹೇಳಲಾಗಿದೆ.












Click it and Unblock the Notifications