ಅತ್ಯಾಚಾರ ಎಸಗಿದ ಮೇಲೆ ಸಂತ್ರಸ್ತೆಯೊಂದಿಗೆ ಅಸಾರಾಮ್ ಮಾತನಾಡಿದ್ದೇನು?
ಜೋಧಪುರ, ಏಪ್ರಿಲ್ 26: 'ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೂ ನನ್ನ ಕಾಲಿಗೆ ಬೀಳುತ್ತಾರೆ' ಹಾಗಂತ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ತಾನು ಅತ್ಯಾಚಾರ ಎಸಗಿದ ಮಹಿಳೆಗೆ ಹೇಳಿದ್ದನಂತೆ!
ಅತ್ಯಾಚಾರ ಆರೋಪದ ಮೇಲೆ ಜೈಲುಪಾಲಾಗಿದ್ದ ಅಸಾರಾಮ್ ಬಾಪುವನ್ನು ದೋಷಿ ಎಂದು ಪರಿಗಣಿಸಿದ ರಾಜಸ್ಥಾನದ ಜೋಧಪುರದ ಎಸ್ ಸಿ ಎಸ್ ಟಿ ನ್ಯಾಯಾಲಯ ನಿನ್ನೆ(ಏ.25)ಜೀವಾವಧಿ ಶಿಕ್ಷೆ ವಿಧಿಸಿದೆ.
ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಅತ್ಯಾಚಾರ ಎಸಗಿದ ನಂತರ ಅಸಾರಾಮ್ ಬಾಪು ತನ್ನೊಂದಿಗೆ ಏನೆಲ್ಲ ಚರ್ಚಿಸಿದ್ದ ಎಂಬುದನ್ನು ಬಿಚ್ಚಿದ್ದಾಳೆ. ಆಕೆಯ ಬಳಿ ಅಸಾರಾಮ್ ಬಾಪು ಮಾತನಾಡಿದ್ದೇನು? ಆಕೆಯ ಬಾಯಲ್ಲೇ ಕೇಳಿ...

"ನನಗೆ ಚಾರ್ಟರ್ಡ್ ಅಕೌಂಟಂಟ್ ಆಗಬೇಕು ಎಂಬ ಆಸೆ ಇತ್ತು. ಆದರೆ ನೀನು ಸಿಎ ಮಾಡುವುದು ಬೇಡ. ಬಿಎಡ್ ಮಾಡು. ನನ್ನ ಗುರುಕುಲದಲ್ಲೇ ನಿನ್ನನ್ನು ಪ್ರಿನ್ಸಿಪಲ್ ಮಾಡುತ್ತೇನೆ." ಎಂದು ಅವರು ಹೇಳಿದ್ದರು.
"ಸಿಎ ಆಗಿ ಏನು ಮಾಡುತ್ತೀಯಾ? ಎಂತೆಂಥ ದೊಡ್ಡ ಆಫೀಸರ್ ಗಳೇ ನನ್ನ ಕಾಲಿಗೆ ಬೀಳುತ್ತಾರೆ. ನಾನು ನಿನ್ನನ್ನು ಲೈಂಗಿಕವಾಗಿ ಬಳಸಿಕೊಂಡ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಬೆದರಿಕೆ ಸಹ ಒಡ್ಡಿದ್ದ" ಎಂದು ಹೇಳಿಕೆ ನೀಡಿದ್ದಾಳೆ.
ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 16 ವರ್ಷದ ಈ ಯುವತಿ ಉತ್ತರ ಪ್ರದೇಶದ ಶಹಜಹಾನ್ ಪುರ ಮೂಲದವಳು. ಆಕೆ ಅಸಾರಾಮ್ ಗೆ ಸೇರಿದ ಹಾಸ್ಟೇಲ್ ನಲ್ಲೇ ವಾಸಿಸುತ್ತಿದ್ದಳು. ಆಕೆಯ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಅಸಾರಾಮ್ ನನ್ನು ಭೇಟಿ ಮಾಡುವಂತೆ ಪರಿಚಿತರು ಹೇಳಿದ್ದರಿಂದ ಅಸಾರಾಮ್ ನನ್ನು ಬೇಟಿಯಾಗಲು ಕುಟುಂಬ ಸಮೇತ ಹೋಗಿದ್ದಳು.
ಕುಟುಂಬದ ಇತರರಿಗೆ ಮಂತ್ರವೊಂದನ್ನು ಹೇಳಿಕೊಟ್ಟು ಬಾಲಕಿಯನ್ನು ಇಲ್ಲೇ ಬಿಟ್ಟು ಹೋಗುವಂತೆ ಹೇಳಿದ ಅಸಾರಾಮ್, ಆಕೆಯನ್ನು ತನ್ನ ಏಕಾಂತ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗೂ ಬಾಯಿಬಿಡಬೇಡವೆಂದು ಬೆದರಿಸಿದ್ದ. ಆದರೆ ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದ್ದರು. ನಂತರ ಕುಟುಂಬ ಈ ಕುರಿತು ಪೊಲೀಸರಿಗೆ ದೂರು ನೀಡಿತ್ತು.
ಬರೋಬ್ಬರಿ ಐದು ವರ್ಷಗಳ ವಿಚಾರಣೆಯ ನಂತರ ಇದೀಗ ಅಸಾರಾಮ್ ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ನೀಡಿರುವುದು ಕುಟುಂಬಕ್ಕೆ ಕೊಂಚ ಸಮಾಧಾನ ತಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications