ಚಿತ್ರ ಸುದ್ದಿ: ಗಾಲಿ ಕುರ್ಚಿ ಭಗವದ್ಗೀತೆ ಪಾಶಾಗೆ ಜೈ ಹೋ
ಬೆಂಗಳೂರು, ಜ.24 : ಶ್ರೀಕೃಷ್ಣ-ಅರ್ಜುನ ನಡುವಿನ ಸಂವಾದ ಭಗವದ್ಗೀತೆಯ 700ಕ್ಕೂ ಅಧಿಕ ಶ್ಲೋಕಗಳನ್ನು ವೇದಿಕೆ ಮೇಲೆ ತರುವುದೇ ದೊಡ್ಡ ಸಾಹಸ. ಅದರಲ್ಲೂ ಗಾಲಿ ಕುರ್ಚಿಯ ಮೇಲೆ ಕುಳಿತು ಕುರುಕ್ಷೇತ್ರವನ್ನು ರಂಗಮಂಚದ ಮೇಲೆ ಪ್ರದರ್ಶಿಸುವುದು ಅದ್ಭುತವೇ ಸರಿ. ಇಂಥದ್ದೊಂದು ಸಾಹಸವನ್ನು ಪ್ರತಿಭಾವಂತ ಅಂಗವಿಕಲ ಕಲಾವಿದರು ಸಾಧಿಸಿ ತೋರಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಖ್ಯಾತ ನೃತ್ಯಗಾರ ಸೈಯದ್ ಸಲ್ಲಾವುದ್ದಿನ್ ಪಾಶಾ ಅವರ ಸೂಕ್ತ ಮಾರ್ಗದರ್ಶನದ ಮೂಲಕ ಅಬಿಲಿಟಿ ಅನ್ ಲಿಮಿಟೆಡ್ ಫೌಂಡೇಷನ್(AUF) ನ ಅಂಗವಿಕಲರು ಭಗವದ್ಗೀತೆ ರೂಪಕವನ್ನು ಗುರುವಾರ (ಜ.23) ಗಾಲಿಕುರ್ಚಿಯ ಮೇಲೆ ಕುಳಿತು ಪ್ರದರ್ಶಿಸಿದರು.
ಆತ್ಮ ಪರಮಾತ್ಮ, ಜೀವಾತ್ಮ, ಹುಟ್ಟು ಸಾವು, ಜೀವನದ ಧ್ಯೇಯ, ಹೀಗೆ ಆಧಾತ್ಮ, ಸಾಮಾಜಿಕ ಧರ್ಮ, ಸೇರಿದಂತೆ ಅನೇಕ ಅಂಶಗಳನ್ನು ಸಾಂಕೇತಿಕವಾಗಿ ತೋರಿಸಲಾಯಿತು. ಈ ಅದ್ಭುತ ಕಾರ್ಯಕ್ರಮದ ಚಿತ್ರವೊಂದನ್ನು ಇಲ್ಲಿ ಕಾಣಬಹುದು.
ಉಳಿದಂತೆ, ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಅಮೇಥಿಯಲ್ಲಿ ಕಾಣಿಸಿಕೊಂಡ ರಾಹುಲ್, ಪ್ರಿಯಾಂಕಾ, ಹೈದರಾಬಾದಿನಲ್ಲಿ ಸಚಿನ್ ಮುಖವಾಡ, ಉತ್ತರ ಪ್ರದೇಶದಲ್ಲಿ ಮೋದಿ ಸಮಾವೇಶ, ದೆಹಲಿಯ ಟ್ರಾಫಿಕ್ ಜಾಮ್, ಶ್ರೀನಗರದ ಸುಂದರ ಸರೋವರದ ಚಿತ್ರಗಳಿವೆ...

ಬೆಂಗಳೂರಿನಲ್ಲಿ ಗಾಲಿ ಕುರ್ಚಿ ಭಗವದ್ಗೀತೆ
ಖ್ಯಾತ ನೃತ್ಯಗಾರ ಸೈಯದ್ ಸಲ್ಲಾವುದ್ದಿನ್ ಪಾಶಾ ಅವರ ಸೂಕ್ತ ಮಾರ್ಗದರ್ಶನದ ಮೂಲಕ ಅಬಿಲಿಟಿ ಅನ್ ಲಿಮಿಟೆಡ್ ಫೌಂಡೇಷನ್(AUF) ನ ಅಂಗವಿಕಲರು ಭಗವದ್ಗೀತೆ ರೂಪಕವನ್ನು ಗಾಲಿಕುರ್ಚಿಯ ಮೇಲೆ ಕುಳಿತು ಪ್ರದರ್ಶಿಸಿದರು. PTI Photo by Shailendra Bhojak

ಹೈದರಾಬಾದಿನಲ್ಲಿ ಚಿಣ್ಣರಿಂದ ಸಚಿನ್ ಮೇನಿಯಾ
ಹೈದರಾಬಾದಿನಲ್ಲಿ ಚಿಣ್ಣರಿಂದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಮುಖವಾಡ ಧರಿಸಿ ಸಂಭ್ರಮಿಸಿದರು.

ಅಮೇಥಿಯಲ್ಲಿ ಗಾಂಧಿ ಸೋದರ-ಸೋದರಿ
ಅಮೇಥಿ ಕ್ಷೇತ್ರದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋದರಿ ಪ್ರಿಯಾಂಕಾ ವಾದ್ರಾ ಒಟ್ಟಿಗೆ ಚಹಾ ಕುಡಿಯುತ್ತಿದ್ದಾರೆ.

ಗೋರಖ್ ಪುರದಲ್ಲಿ ಮೋಡಿ ಮಾಡಿದ ಮೋದಿ
ಗೋರಖ್ ಪುರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾವೇಶಕ್ಕೆ ಹರಿದು ಬಂದಿದ್ದ ಜನ ಸಾಗರ

ದೆಹಲಿಯ 'ಪ್ರಸಿದ್ಧ' ಟ್ರಾಫಿಕ್ ಜಾಮ್ ಚಿತ್ರ
ಕಾಂಗ್ರೆಸ್ ಇರಲಿ ಎಎಪಿ ಸರ್ಕಾರ ಬರಲಿ ಪ್ರತಿದಿನ ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿಲ್ಲ. ರಿಪಬ್ಲಿಕ್ ಡೇ ರಿಹರ್ಸಲ್ ನಿಂದಾಗಿ ಇನ್ನಷ್ಟು ಸಂಚಾರ ದಟ್ಟಣೆ ಉಂಟಾಗಿದೆ.

ಆಹಾ ಎಂಥಾ ಸುಂದರ ಈ ಸರೋವರ
ಶ್ರೀನಗರ: ಹಿಮದಿಂದ ಆವೃತವಾಗಿರುವ ದಾಲ್ ಸರೋವರದಲ್ಲಿ ಬೋಟ್ ನಲ್ಲಿ ಪ್ರಯಾಣ PTI Photo by S Irfan












Click it and Unblock the Notifications