ಚಿತ್ರ ಸುದ್ದಿ: ರಾಹುಲ್ ಕ್ಷೇತ್ರದಲ್ಲಿ ಪೂರಕೆಗಳ ಸದ್ದು

ಅಮೇಥಿ(ಉತ್ತರಪ್ರದೇಶ), ಫೆ.19: ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಕ್ಷೇತ್ರದಲ್ಲಿ ಪೂರಕೆ ಹಿಡಿದು ಭಾರಿ ಸದ್ದು ಮಾಡಿದ್ದಾರೆ. ಅಮೇಥಿಯಲ್ಲಿ ಜನ ಸಾಮಾನ್ಯರ ಪಕ್ಷದ ಕಾರ್ಯಕರ್ತರು ಮಂಗಳವಾರ ಕಸಪೊರಕೆ ಮೆರವಣಿಗೆ ನಡೆಸಿದ್ದಲ್ಲದೆ ನಗರದ ನಾನಾ ಭಾಗಗಳಲ್ಲಿ ಮಹಾತ್ಮ ಗಾಂಧಿ ಮತ್ತು ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ, ಹೂಹಾರ ಹಾಕಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದಿಂದ ಕುಮಾರ್ ವಿಶ್ವಾಸ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಅವರ ಸ್ವಕ್ಷೇತ್ರದಲ್ಲಿ ಕುಮಾರ್ ಈ 'ಜಾಡೂ ಚಲೋ ಯಾತ್ರ' ಹಮ್ಮಿಕೊಂಡಿದ್ದರು.

ಉಳಿದಂತೆ ಇಂದಿನ ಚಿತ್ರಸುದ್ದಿಗಳಲ್ಲಿ ಲಾಕ್ಮಿ ಫ್ಯಾಷನ್ ವೀಕ್ ಸಮ್ಮರ್ ನ ಮಾಡೆಲ್ ಗಳು, ದೆಹಲಿಯಲ್ಲಿ ತೆಲಂಗಾಣ ಪರ ಕಾರ್ಯಕರ್ತರ ಸಂಭ್ರಮ, ಲಕ್ನೋದಲ್ಲಿ ಕುರ್ತಾ ಪ್ರತಿಭಟನೆ, ಮುಂಬೈನಲ್ಲಿ ಮಾಧುರಿ ದೀಕ್ಷಿತ್ ಗುಲಾಬ್ ಗ್ಯಾಂಗ್ ಗಾಗಿ ಜಿಮ್ ಹೊಕ್ಕಿದ್ದು, ಇಂದೋರ್ ನಲ್ಲಿ ಶಿವರಾಜ್ ಚೌಹಾಣ್ ಸಂಪುಟ ಸದಸ್ಯರು ಸಂಗಮದಲ್ಲಿ ಮಿಂದ ಚಿತ್ರಗಳಿವೆ ತಪ್ಪದೇ ನೋಡಿ...

ರಾಹುಲ್ ಕ್ಷೇತ್ರದಲ್ಲಿ ಪೂರಕೆಗಳ ಸದ್ದು

ರಾಹುಲ್ ಕ್ಷೇತ್ರದಲ್ಲಿ ಪೂರಕೆಗಳ ಸದ್ದು

ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಕ್ಷೇತ್ರದಲ್ಲಿ ಪೂರಕೆ ಹಿಡಿದು ಭಾರಿ ಸದ್ದು ಮಾಡಿದ್ದಾರೆ. ಅಮೇಥಿಯಲ್ಲಿ ಜನ ಸಾಮಾನ್ಯರ ಪಕ್ಷದ ಕಾರ್ಯಕರ್ತರು ಮಂಗಳವಾರ ಕಸಪೊರಕೆ ಮೆರವಣಿಗೆ ನಡೆಸಿದ್ದಾರೆ. [ವಿವರ ಇಲ್ಲಿ ಓದಿ]

ಗುಲಾಬಿ ಗ್ಯಾಂಗ್ ನಾಯಕಿ ಮಾಧುರಿ

ಗುಲಾಬಿ ಗ್ಯಾಂಗ್ ನಾಯಕಿ ಮಾಧುರಿ

ಮುಂಬೈ: ಇಲ್ಲಿನ ಬಾಂದ್ರಾ ಜಿಮ್ ವೊಂದರಲ್ಲಿ ಗುಲಾಬಿ ಗ್ಯಾಂಗ್ ಚಿತ್ರದ ನಾಯಕಿ ಮಾಧುರಿ ದೀಕ್ಷಿತ್ ಅವರು ಕಾನಿಷ್ಕ ಶರ್ಮ(Shailon ಸಾಹಸ ಕಲೆ ಪರಿಣತ) ಜತೆ ಪೋಸ್..

ಗೆಲುವು ನಮಗೆ ಸಿಕ್ಕಿತು ಕೊನೆಗೆ : ವಿಜಯಶಾಂತಿ

ಗೆಲುವು ನಮಗೆ ಸಿಕ್ಕಿತು ಕೊನೆಗೆ : ವಿಜಯಶಾಂತಿ

ಗೆಲುವು ನಮಗೆ ಸಿಕ್ಕಿತು ಕೊನೆಗೆ ಎಂದು ಸಂಸತ್ತಿನ ಮುಂದೆ ಕೈಎತ್ತಿ ನಿಂತಿರುವ ಟಿಆರ್ ಎಸ್ ನಾಯಕಿ ವಿಜಯಶಾಂತಿ.. ಇನ್ನಷ್ಟು ಚಿತ್ರಗಳು ಇಲ್ಲಿ ನೋಡಿ

ಲಾಕ್ಮಿ ಫ್ಯಾಷನ್ ವೀಕ್ ಸಮ್ಮರ್ ನ ಮಾಡೆಲ್

ಲಾಕ್ಮಿ ಫ್ಯಾಷನ್ ವೀಕ್ ಸಮ್ಮರ್ ನ ಮಾಡೆಲ್

ಮುಂಬೈ:ಲಾಕ್ಮಿ ಫ್ಯಾಷನ್ ವೀಕ್ ಸಮ್ಮರ್ ರೆಸಾರ್ಟ್ 2014ನ ರೂಪದರ್ಶಿಗಳುPTI Photo by Mitesh Bhuvad

ಆರ್ ಎಲ್ ಡಿ ಸದಸ್ಯರಿಂದ ಕುರ್ತಾ ಪ್ರತಿಭಟನೆ

ಆರ್ ಎಲ್ ಡಿ ಸದಸ್ಯರಿಂದ ಕುರ್ತಾ ಪ್ರತಿಭಟನೆ

ಲಕ್ನೋ: ಇಬ್ಬರು ಆರ್ ಎಲ್ ಡಿ ಸದಸ್ಯರು ಆಡಳಿತಾರೂಢ ಸಮಾಜವಾದಿ ಪಕ್ಷದ ವಿರುದ್ಧ ಕುರ್ತಾ ಪ್ರತಿಭಟನೆ ಮಾಡಿದ್ದು ಹೀಗೆ. ಸಕ್ಕರೆ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಲಿಲ್ಲ ಎಂದು ಸದನದಲ್ಲಿ ಕುರ್ತಾ ಕಳಚಿ ನಿಂತರು PTI Photo by Mitesh Bhuvad. ಕರ್ನಾಟಕದ ಗೂಳಿಹಟ್ಟಿ ಶೇಖರ್ ಅವರಂತೆ ಇವರಿಬ್ಬರು ಬಟ್ಟೆ ಹರಿದುಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ

ಮೆಸ್ಸಿ ಓಟ ತಡೆಯುವವರು ಯಾರು?

ಮೆಸ್ಸಿ ಓಟ ತಡೆಯುವವರು ಯಾರು?

UEFA ಚಾಂಪಿಯನ್ಸ್ ಲೀಗ್ ಫುಟ್ಬಾಲ್ ನ ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಸ್ಪೇನಿನ ಕ್ಲಬ್ ಬಾರ್ಸಿಲೋನಾದ ಆಟಗಾರ ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ) ಓಟ. ಮೆಸ್ಸಿ, ಡ್ಯಾನಿ ಆಲ್ವಾ ಗೋಲಿನ ನೆರವಿನಿಂದ ಬಾರ್ಸಿಲೋನಾ 2-0 ಅಂತರದ ಗೆಲುವು ಸಾಧಿಸಿತು.

ಇಂದೋರ್ ನಲ್ಲಿ ಶಿವರಾಜ್ ಚೌಹಾಣ್ ಸಂಪುಟ

ಇಂದೋರ್ ನಲ್ಲಿ ಶಿವರಾಜ್ ಚೌಹಾಣ್ ಸಂಪುಟ

ಇಂದೋರ್ ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಸಂಪುಟ ಸದಸ್ಯರು ಉಜ್ಜಯಿನಿ ಸಮೀಪದ ನರ್ಮದಾ ಹಾಗೂ ಕ್ಷಿಪ್ರಾ ನದಿ ಸಂಗಮದಲ್ಲಿ ಸಿಎಂ ಜತೆ ಮಿಂದು ಪೋಸ್ ಕೊಟ್ಟಿದ್ದು ಹೀಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+