ಚಿತ್ರ ಸುದ್ದಿ: ಲಾಕ್ಮೆ ಫ್ಯಾಷನ್ ನಿಂದ ಫ್ಯೂನರಲ್ ವರೆಗೆ

ಬೆಂಗಳೂರು, ಆ.21: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ನಿಂದ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರ ಫ್ಯೂನರಲ್ ತನಕದ ಚಿತ್ರಗಳು ಇಲ್ಲಿವೆ.

ಗುವಾಹಟಿಯಲ್ಲಿ ಮಳೆ ಆರ್ಭಟ, ಪಂಜಾಬಿನಲ್ಲಿ ಮತದಾನ ಮಾಡಿದ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್, ಇಂಫಾಲದ ಆಸ್ಪತ್ರೆಯಿಂದ ಮನೆ ಸೇರಿದ ಐರೋಮ್ ಚಾನು ಶರ್ಮಿಳಾ, ಸಿಂಗಪುರ ಪ್ರವಾಸ ನಿರತ ಟಿಎಂಸಿ ಸಂಸದ ದೇವ್ ಸಾಂಸ್ಕೃತಿಕ ನೃತ್ಯ ಭಂಗಿ, ಸೋನೀಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯಿಂದ ರಾಜೀವ್ ಗಾಂಧಿ ಸ್ಮರಣೆ, ಕಾಬೂಲಿನಲ್ಲಿ ಇತ್ತೀಚಿಗೆ ಸಂಭ್ರಮದ ದಿನ, ಬೆಂಗಳೂರಿನಲ್ಲಿ ಭಾಗ್ವತ್ ವಿರುದ್ದ ಪ್ರತಿಭಟನೆ, ಹೈದರಾಬಾದಿನಲ್ಲಿ ಅಘೋಷಿತ ಬಂದ್, ಗುರ್ ಗಾಂವ್ ನಲ್ಲಿ ಟ್ರಾಫಿಕ್ ಜಾಮ್ ಮುಂತಾದ ಚಿತ್ರಗಳಿವೆ

ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್

ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್

ಮುಂಬೈನ ಲಾಕ್ಮೆ ಫ್ಯಾಷನ್ ವೀಕ್ Winter/Festive 2014 ನಲ್ಲಿ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಬೆಕ್ಕಿನ ನಡಿಗೆ PTI Photo by Mitesh Bhuvad

ಸಿಂಗಪುರದಲ್ಲಿ ಸಂಸದ ದೇವ್ ಡ್ಯಾನ್ಸ್

ಸಿಂಗಪುರದಲ್ಲಿ ಸಂಸದ ದೇವ್ ಡ್ಯಾನ್ಸ್

ಸಿಂಗಪುರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ತೆರಳಿರುವ ತೃಣಮೂಲ ಕಾಂಗ್ರೆಸ್ ಸಂಸದ, ನಟ ದೇವ್ ಅವರು ಬೆಂಗಾಳಿ ಅಸೋಸಿಯೇಷನ್ ಸದಸ್ಯರ ಜೊತೆ ಡ್ಯಾನ್ಸ್ ಮಾಡಿದ್ದು ಹೀಗೆ

ಗುವಾಹಟಿಯಲ್ಲಿ ಮಳೆ ಜೊತೆ ಜನಜೀವನ

ಗುವಾಹಟಿಯಲ್ಲಿ ಮಳೆ ಜೊತೆ ಜನಜೀವನ

ಮಳೆ ಆರ್ಭಟಕ್ಕೆ ಅಸ್ಸಾಂನ ಗುವಾಹಟಿ ತತ್ತರಿಸಿದೆ.ಮಲೆ ಜೊತೆಗೆ ಜನಜೀವನ ಸಾಗಿದೆ. ಸಾರ್ವಜನಿಕರು ಪರಸ್ಪರ ಸಹಾಯ ಹಸ್ತ ಚಾಚುತ್ತಿದ್ದಾರೆ.

ಪುಣೆಯಲ್ಲಿ ಅಯ್ಯಂಗಾರ್ ಅಂತಿಮ ಸಂಸ್ಕಾರ

ಪುಣೆಯಲ್ಲಿ ಅಯ್ಯಂಗಾರ್ ಅಂತಿಮ ಸಂಸ್ಕಾರ

ಪುಣೆಯಲ್ಲಿ ಅಯ್ಯಂಗಾರ್ ಅಂತಿಮ ಕ್ರಿಯೆ ನಡೆಯುತ್ತಿದ್ದು, ವಿದೇಶದಿಂದ ಬಂದಿರುವ ಅವರ ಶಿಷ್ಯಂದಿರು ಆಗಮಿಸಿದ್ದಾರೆ.

ರಾಜೀವ್ ಗಾಂಧಿ ಜನ್ಮದಿನಾಚರಣೆ

ರಾಜೀವ್ ಗಾಂಧಿ ಜನ್ಮದಿನಾಚರಣೆ

ರಾಜೀವ್ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಸಮಾಧಿ ಸ್ಥಳ ವೀರ್ ಭೂಮಿಯಲ್ಲಿ ನಮನ ಸಲ್ಲಿಸಿದರು. PTI Photo by Manvender Vashist

ಭಾಗ್ವತ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಭಾಗ್ವತ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ಇತ್ತೀಚೆಗೆ ನೀಡುತ್ತಿರುವ ಹಿಂದು ಪರ ಹೇಳಿಕೆಗಳನ್ನು ಖಂಡಿಸಿ ಥ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನೆಡೆಸಿದರು. PTI Photo by Shailendra Bhojak

ಹೈದಾರಾಬಾದಿನಲ್ಲಿ ಅಘೋಷಿತ ಬಂದ್

ಹೈದಾರಾಬಾದಿನಲ್ಲಿ ಅಘೋಷಿತ ಬಂದ್

ತೆಲಂಗಾಣ ಜನರ ಗಣತಿಗಾಗಿ ಹೈದಾರಾಬಾದಿನಲ್ಲಿ ಅಘೋಷಿತ ಬಂದ್ ಅಚರಿಸಲಾಯಿತು.

ಮುಂಬೈನಲ್ಲಿ ಕೆಮೆರಾ ಜತೆ ರಣಬೀರ್

ಮುಂಬೈನಲ್ಲಿ ಕೆಮೆರಾ ಜತೆ ರಣಬೀರ್

ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ನಟ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದು ಹೀಗೆ

ಗುರ್ ಗಾವ್ ನಲ್ಲಿ ಟ್ರಾಫಿಕ್ ಜಾಮ್

ಗುರ್ ಗಾವ್ ನಲ್ಲಿ ಟ್ರಾಫಿಕ್ ಜಾಮ್

ಗುರ್ ಗಾಂವ್: ದೆಹಲಿ ಗುರ್ ಗಾಂವ್ ಎಕ್ಸ್ ಪ್ರೆಸ್ ವೇ NH 8ರಲ್ಲಿ ಮಂಗಳವಾರ ಕಂಡು ಬಂದ ದೃಶ್ಯ

ಪಂಜಾಬಿನ ಮತದಾನ ಚಿತ್ರ

ಪಂಜಾಬಿನ ಮತದಾನ ಚಿತ್ರ

ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಅವರು ಪಕ್ಷದ ಅಭರ್ಥಿ ಪ್ರಣೀತ್ ಕೌರ್ ಜೊತೆ ಪಟಿಯಾಲದಲ್ಲಿ ಮತದಾನ ಮಾಡಿದ ನಂತರದ ಚಿತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+