Today's Chanakya lok sabha Exit Poll Result 2024: ಎನ್‌ಡಿಎ ಹ್ಯಾಟ್ರಿಕ್ ಗೆಲುವು ಬಹುತೇಕ ಖಚಿತ!
ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಕೊನೆಯ ಹಂತದ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಫಲಿತಾಂಶದ ಚಿತ್ರಣ ನೀಡಿವೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಪರವಾಗಿ ಬಂದಿದ್ದು, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 335 ± 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎನ್‌ಡಿಎ ಒಟ್ಟಾರೆ 400 ± 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ ಈ ಬಾರಿ ಬಿಜೆಪಿ ಹೇಳಿಕೆಯಂತೆ 400 ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ.

ಕಾಂಗ್ರೆಸ್ ಈ ಬಾರಿ 50 ± 11 ಸ್ಥಾನಗಳನ್ನು ಪಡೆಯಲಿದ್ದು, ಇಂಡಿಯಾ ಒಕ್ಕೂಟ ಒಟ್ಟಾರೆ 107 ± 11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇತರೆ ಪಕ್ಷಗಳು ಮತ್ತು ಪಕ್ಷೇತರ 36 ± 9 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹಲವು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. ಟುಡೇಸ್ ಚಾಣಕ್ಯ ಸಮೀಕ್ಷೆ ಪ್ರಕಾರ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿದೆ.
ರಾಜ್ಯವಾರು ಅಂಕಿ ಅಂಶ
ಕರ್ನಾಟಕ
ಎನ್‌ಡಿಎ - 24 ± 4 ಸ್ಥಾನ
ಇಂಡಿಯಾ - 4 ± 4 ಸ್ಥಾನ
ಇತರೆ - 0 ಸ್ಥಾನ
ದೆಹಲಿ
ಎನ್‌ಡಿಎ - 6 ± 1 ಸ್ಥಾನ
ಇಂಡಿಯಾ - 1 ± 1 ಸ್ಥಾನ
ಇತರೆ - 0
ಅಸ್ಸಾಂ
ಎನ್‌ಡಿಎ - 12 ± 2 ಸ್ಥಾನ
ಇಂಡಿಯಾ - 1 ± 1 ಸ್ಥಾನ
ಇತರೆ - 1 ± 1 ಸ್ಥಾನ
ಛತ್ತೀಸ್‌ಗಢ
ಎನ್‌ಡಿಎ - 11 ± 1 ಸ್ಥಾನ
ಇಂಡಿಯಾ - 0 ± 1 ಸ್ಥಾನ
ಇತರೆ - 0 ಸ್ಥಾನ
ಗುಜರಾತ್
ಎನ್‌ಡಿಎ - 26 ± 2 ಸ್ಥಾನ
ಇಂಡಿಯಾ - 0 ± 2 ಸ್ಥಾನ
ಇತರೆ - 0 ಸ್ಥಾನ
ಉತ್ತರಾಖಂಡ
ಎನ್‌ಡಿಎ - 5 ± 1 ಸ್ಥಾನ
ಇಂಡಿಯಾ -0 ± 1 ಸ್ಥಾನ
ಇತರೆ - 0 ಸ್ಥಾನ
ಜಾರ್ಖಂಡ್
ಎನ್‌ಡಿಎ - 12 ± 2 ಸ್ಥಾನ
ಇಂಡಿಯಾ -2 ± 2 ಸ್ಥಾನ
ಇತರೆ - 0 ಸ್ಥಾನ
ಹಿಮಾಚಲ ಪ್ರದೇಶ
ಎನ್‌ಡಿಎ - 4 ± 1 ಸ್ಥಾನ
ಇಂಡಿಯಾ -0 ± 1 ಸ್ಥಾನ
ಇತರೆ - 0 ಸ್ಥಾನ
ಹರಿಯಾಣ
ಎನ್‌ಡಿಎ - 6 ± 2 ಸ್ಥಾನ
ಇಂಡಿಯಾ - 4 ± 2 ಸ್ಥಾನ
ಇತರೆ - 0 ಸ್ಥಾನ
ಒಡಿಶಾ
ಎನ್‌ಡಿಎ - 16 ± 3 ಸ್ಥಾನ
ಬಿಜೆಡಿ- 4 ± 2 ಸ್ಥಾನ
ಇಂಡಿಯಾ - 1 ± 1 ಸ್ಥಾನ
ಇತರೆ - 0 ಸ್ಥಾನ
ಮಹಾರಾಷ್ಟ್ರ
ಎನ್‌ಡಿಎ - 33 ± 5 ಸ್ಥಾನ
ಇಂಡಿಯಾ - 15 ± 5 ಸ್ಥಾನ
ಇತರೆ - 0 ಸ್ಥಾನ
ತೆಲಂಗಾಣ
ಬಿಜೆಪಿ - 12 ± 2 ಸ್ಥಾನ
ಕಾಂಗ್ರೆಸ್ - 5 ± 2 ಸ್ಥಾನ
ಬಿಆರ್ ಎಸ್ - 0
ಇತರೆ - 0 ± 1 ಸ್ಥಾನ
ಆಂಧ್ರಪ್ರದೇಶ
ಟಿಡಿಪಿ- 22 ± 3 ಸ್ಥಾನ
ವೈಎಸ್‌ಆರ್ ಕಾಂಗ್ರೆಸ್ - 3 ± 3 ಸ್ಥಾನ
ಕಾಂಗ್ರೆಸ್ - 0
ಇತರೆ - 0
ಪಂಜಾಬ್
ಎನ್‌ಡಿಎ - 4 ± 3 ಸ್ಥಾನ
ಕಾಂಗ್ರೆಸ್ - 4 ± 3 ಸ್ಥಾನ
ಎಎಪಿ - 2 ± 2 ಸ್ಥಾನ
ಇತರೆ - 3 ± 1 ಸ್ಥಾನ
ಕೇರಳ
ಯುಡಿಎಫ್ - 15 ± 3 ಸ್ಥಾನ
ಎಲ್‌ಡಿಎಫ್ - 1 ± 1 ಸ್ಥಾನ
ಬಿಜೆಪಿ+ - 4 ± 3 ಸ್ಥಾನ
ಇತರೆ - 0
ತಮಿಳುನಾಡು
ಎಐಎಡಿಎಂಕೆ+ - 0 ± 2 ಸ್ಥಾನ
ಡಿಎಂಕೆ+ - 29 ± 5 ಸ್ಥಾನ
ಬಿಜೆಪಿ+ - 10 ± 4 ಸ್ಥಾನ
ಇತರೆ - 0
ಬಿಹಾರ
ಬಿಜೆಪಿ+ - 36 ± 4 ಸ್ಥಾನ
ಇಂಡಿಯಾ - 4 ± 4 ಸ್ಥಾನ
ಇತರೆ - 0 ± 1 ಸ್ಥಾನ
ಪಶ್ಚಿಮ ಬಂಗಾಳ
ಎನ್‌ಡಿಎ - 24 ± 5 ಸ್ಥಾನ
ಎಐಟಿಸಿ - 17 ± 5 ಸ್ಥಾನ
ಭಾರತ - 1 ± 1 ಸ್ಥಾನ
ಇತರೆ - 0
ಉತ್ತರ ಪ್ರದೇಶ
ಎನ್‌ಡಿಎ - 68 ± 7 ಸ್ಥಾನ
ಇಂಡಿಯಾ - 12 ± 6 ಸ್ಥಾನ
ಇತರೆ - 0












Click it and Unblock the Notifications