ಪಾಕ್‌ನಲ್ಲಿ ಉಗ್ರ ಸಂಘಟನೆಗೆ ಹಣ ಬೆಂಬಲ ಸಿಗುವುದು ಹೇಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 11 : ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಲಿ ಎಂದು ಭಾರತ ಒತ್ತಾಯಿಸುತ್ತಿದೆ. ವಾಯುನೆಲೆ ಮೇಲೆ ದಾಳಿ ಮಾಡಿದ ಜೈಷ್ ಏ ಮೊಹಮದ್ ಸಂಘಟನೆ ಐಎಸ್‌ಐ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಇದರ ಪರಿಣಾಮವಾಗಿ ಅಲ್ ರೆಹಮತ್ ಟ್ರಸ್ಟ್ ಪಾಕಿಸ್ತಾನದಲ್ಲೇ ಕಾರ್ಯನಿರ್ವಹಣೆ ಮಾಡುತ್ತಿದೆ.

ಅಲ್ ರೆಹಮತ್ ಟ್ರಸ್ಟ್ ಜೈಷ್ ಏ ಮೊಹಮದ್ ಸಂಘಟನೆಗೆ ಹಣಕಾಸಿನ ಬೆಂಬಲವನ್ನು ನೀಡುತ್ತದೆ. ಈ ಟ್ರಸ್ಟ್ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಗ್ರಹಣೆ ಮಾಡುತ್ತದೆ. ಮಸೀದಿ ನಿರ್ಮಾಣ ಮತ್ತು ಸಂಘಟನೆಗಳಲ್ಲಿ ತೊಡಗಿಕೊಂಡು ಸಾವನ್ನಪ್ಪುವ ಉಗ್ರರ ಕುಟುಂಬಕ್ಕೆ ಹಣದ ಸಹಾಯವನ್ನು ಮಾಡುತ್ತದೆ. [ಪಠಾಣ್ ಕೋಟ್ ದಾಳಿ : ಶಾಂತಿ ಮಾತುಕತೆ ರದ್ದು]

pakistan

2010ರಲ್ಲಿ ಮೊದಲ ಬಾರಿಗೆ ಅಲ್ ರೆಹಮತ್ ಟ್ರಸ್ಟ್‌ನ ಹಣದ ವ್ಯವಹಾರ ಬಹಿರಂಗವಾಗಿತ್ತು. ಆದರೆ, ಪಾಕಿಸ್ತಾನ ಟ್ರಸ್ಟ್ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇಂದಿಗೂ ಟ್ರಸ್ಟ್ ತನ್ನ ಕಾರ್ಯವನ್ನು ನಿರ್ವಹಣೆ ಮಾಡುತ್ತಿದೆ. ಟ್ರಸ್ಟ್ ಕಾರ್ಯನಿರ್ವಹಣೆ ಮಾಡುತ್ತಿದ್ದರೆ, ಉಗ್ರ ಸಂಘಟನೆ ಪ್ರಬಲವಾಗಿ ಬೆಳೆಯಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಟ್ರಸ್ಟ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.[ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಈ ಟ್ರಸ್ಟ್ ಕೆಲವು ನಿಯತಕಾಲಿಕೆಗಳನ್ನು ಹೊರತರುತ್ತಿದ್ದು, ಅವುಗಳು ಪಾಕಿಸ್ತಾನದಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ.
ಜೈಷ್-ಏ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ನೇತೃತ್ವದಲ್ಲಿ ಈ ಪತ್ರಿಕೆ ಹೊರಬರುತ್ತಿದ್ದು, ಆತನು ಇದಕ್ಕೆ ಸಾದಿ ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಾನೆ. [ಪಠಾಣ್ ಕೋಟ್ ದಾಳಿ : ಪಾಕಿಸ್ತಾನದಿಂದ ಮಾಹಿತಿ ಬೇಕಾಗಿದೆ]

ಪಠಾಣ್ ಕೋಟ್ ದಾಳಿಯ ಬಗ್ಗೆ ಸಾಕ್ಷಿಗಳನ್ನು ಪಾಕಿಸ್ತಾನಕ್ಕೆ ನೀಡಿರುವ ಭಾರತ ಅಲ್ ರೆಹಮತ್ ಟ್ರಸ್ಟ್‌ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ. ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವ ತನಕ ಶಾಂತಿ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ಈಗಾಗಲೇ 'ಪಾಕ್ ಕೈಗೊಳ್ಳುವ ಕ್ರಮಗಳು ಪರಿಣಾಮಕಾರಿಯಾಗಿರಬೇಕು. ಕಣ್ಣೊರೆಸುವ ತಂತ್ರಗಳಂತಹ ಕ್ರಮಗಳ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India expects Pakistan to act against those who masterminded the Pathankot attack. Investigations have revealed that it was the Jaish-e-Mohammad which had carried out this attack. The JeM today shares a cozy relationship with the ISI and this is probably one of the reasons why the al-Rahmat trust continues to operate in Pakistan.
Please Wait while comments are loading...