Breaking: West Bengal: ಟಿಎಂಸಿ ನಾಯಕನನ್ನು ಗುಂಡಿಟ್ಟು ಕೊಂದ ಹಂತಕರು

ನವದೆಹಲಿ, ನವೆಂಬರ್ 13: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಜಾಯ್‌ನಗರದಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆಸಿದೆ.

ಜೋಯ್‌ನಗರದ ಟಿಎಂಸಿ ವಲಯದ ಅಧ್ಯಕ್ಷ ಸೈಫುದ್ದೀನ್ ಲಸ್ಕರ್ ಅವರನ್ನು ಕೆಲವು ದುಷ್ಕರ್ಮಿಗಳು ಅವರ ಮನೆಯ ಬಳಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಕೃತ್ಯ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ದುಷ್ಕಮಿಗಳ ಪೈಕಿ ಒಬ್ಬರನ್ನು ಎಳೆದು ಥಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

tmc-leader-saifuddin-laskar-shot-out

ತಮ್ಮ ಮುಖಂಡನ ಹತ್ಯೆಯ ಹಿಂದೆ ಸಿಪಿಐ(ಎಂ) ಬೆಂಬಲಿಗರ ಕೈವಾಡ ಇದೆ ಎಂದು ಸ್ಥಳೀಯ ಟಿಎಂಸಿ ಮುಖಂಡರು ಅನುಮಾನ ವ್ಯಕ್ತಪಿಡಿಸಿದ್ದಾರೆ. ಘಟನೆಯಿಂದ ಆಕ್ರೊಶಗೊಂಡ ಲಸ್ಕರ್ ಬೆಂಬಲಿಗರು ಸಿಪಿಐ(ಎಂ) ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಿದರು. ಮನೆಯನ್ನು ಧ್ವಂಶ ಮಾಡಿದ್ದಲ್ಲದೇ, ಕೆಲವೆಡೆ ಬೆಂಕಿ ಹಚ್ಚಲಾಯಿತು.

ಘಟನೆ ಕುರಿತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಹಂತಕರು ಯಾರೇ ಆಗಿದ್ದರು ಬಂಧಿಸಲಾಗುವುದು. ಕೊಲೆ ಪಿತೂರಿಯನ್ನು ಬಹಿರಂಗೊಳಿಸಲಾಗುವುದು. ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಅವರು ಸೂಚಿಸಿದರು.

ಸೈಫುದ್ದೀನ್ ಲಸ್ಕರ್ ಹತ್ಯೆಯಾಗಿರುವುದು ನೋವಿನ ಸಂಗತಿ. ಇದು ಅವರ ಟಿಎಂಸಿ ಪಕ್ಷದೊಳಗಿನ ಆಂತರಿಕ ಕಲಹದ ಪರಿಣಾಮ ಆಗಿದೆ. ಅದನ್ನು ಬಿಟ್ಟು ಸಿಪಿಐ(ಎಂ) ದೂಷಿಸುವುದದರಲ್ಲಿ ಯಾವ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+