ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ದೇವಸ್ಥಾನದ ಟ್ರಸ್ಟ್ ಆಸ್ತಿ ಘೋಷಣೆ, ಚಿನ್ನ, ನಗದು ಎಷ್ಟಿದೆ?

|
Google Oneindia Kannada News

ತಿರುಪತಿ, ನವೆಂಬರ್‌ 6: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ನಿಶ್ಚಿತ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಒಟ್ಟು ಆಸ್ತಿಯ ಪಟ್ಟಿಯನ್ನು ಘೋಷಿಸಿದ್ದು, ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ.

ತಿರುಮಲ ತಿರುಪತಿ ದೇವಸ್ಥಾನಂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 5,300 ಕೋಟಿಗೂ ಹೆಚ್ಚು ಮೌಲ್ಯದ 10.3 ಟನ್‌ ಚಿನ್ನದ ಠೇವಣಿ ಇದೆ ಎಂದು ದೇವಸ್ಥಾನದ ಟ್ರಸ್ಟ್‌ ತಿಳಿಸಿದೆ. ಇದರೊಂದಿಗೆ 15,938 ಕೋಟಿ ರೂಪಾಯಿ ನಗದು ಠೇವಣಿ ಹೊಂದಿದೆ.

ಈ ದಿನಾಂಕಗಳಲ್ಲಿ ತಿರುಪತಿ ತಿರುಮಲ ದೇಗುಲ ಬಂದ್!ಈ ದಿನಾಂಕಗಳಲ್ಲಿ ತಿರುಪತಿ ತಿರುಮಲ ದೇಗುಲ ಬಂದ್!

ಪ್ರಸ್ತುತ ಟ್ರಸ್ಟ್ ಬೋರ್ಡ್ ತನ್ನ ಹೂಡಿಕೆ ಮಾರ್ಗಸೂಚಿಗಳನ್ನು 2019ರಿಂದ ಬಲಪಡಿಸಿದೆ ಎಂದು ಟಿಟಿಡಿ ಘೋಷಿಸಿದೆ. ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿಯು ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ಟ್ರಸ್ಟ್ ನಿರಾಕರಿಸಿದೆ.

Tirupati temple trust property declaration, know details about gold, cash?

ಪತ್ರಿಕಾ ಪ್ರಕಟಣೆಯಲ್ಲಿ ಹೆಚ್ಚುವರಿ ಮೊತ್ತವನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳುತ್ತದೆ. ಟಿಟಿಡಿ ಇಂಥ ಪಿತೂರಿ ಕೂಡಿದ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಭಕ್ತರಲ್ಲಿ ವಿನಂತಿಸಲಾಗಿದೆ. ಟಿಟಿಡಿ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ ನಗದು ಮತ್ತು ಚಿನ್ನದ ಠೇವಣಿಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದೆ.

''ಟಿಟಿಡಿ ತನ್ನ ಆಸ್ತಿಯ ಒಟ್ಟು ಮೌಲ್ಯವನ್ನು 2.26 ಲಕ್ಷ ಕೋಟಿ ರೂಪಾಯಿ ಎಂದು ವರದಿಗಳು ಹೇಳಿದೆ. ದೇವಾಲಯದ ಟ್ರಸ್ಟ್‌ನ ನಿವ್ವಳ ಮೌಲ್ಯ 2.26 ಲಕ್ಷ ರೂಪಾಯಿ ಕೋಟಿಗೆ ಏರಿಕೆಯಾಗಿದೆ 2019 ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯ ನಿಶ್ಚಿತ ಠೇವಣಿಗಳ ರೂಪದಲ್ಲಿ 13,025 ಕೋಟಿ ಹೂಡಿಕೆಗಳು 15,938 ಕೋಟಿಗಳಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆಯು 2,900 ಕೋಟಿಗಳಷ್ಟು ಹೆಚ್ಚಾಗಿದೆ'' ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ತಿಳಿಸಿದ್ದಾರೆ.

Tirupati temple trust property declaration, know details about gold, cash?

ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳನ್ನು ಸೇರಿಸಲಾಗಿದೆ. ಭಾರತದಾದ್ಯಂತ 7,123 ಎಕರೆಗಳಲ್ಲಿ ಹರಡಿರುವ 960 ಆಸ್ತಿಗಳನ್ನು ಒಳಗೊಂಡಿವೆ. ಸ್ಟೇಟಸ್ ನೋಟ್‌ನಲ್ಲಿ ಟಿಟಿಡಿ ನಿಯಮಗಳ ಪ್ರಕಾರ, ಅದು ಎಚ್ 1 ಬಡ್ಡಿದರದಲ್ಲಿ ಮಾತ್ರ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದೆ. ದೇವಸ್ಥಾನದ ಆದಾಯವು ಭಕ್ತರು, ವ್ಯಾಪಾರಗಳು ಮತ್ತು ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ ಎಂದು ಹೇಳಿಕೊಂಡಿದೆ.

English summary
Tirumala Tirupati Devasalam (TTD) has announced a list of its total assets, including its fixed deposits and gold deposits, and released a white paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X