Tirumala Laddu Row: ತಿರುಪತಿ ತುಪ್ಪದ ವಿವಾದ: ಭಕ್ತರ ಸಂಖ್ಯೆ ಇಳಿಕೆ- ತಿರುಮಲ ಶ್ರೀವಾರಿಯ ದರ್ಶನ ಸುಗಮ
ದೇಶದ ಶ್ರೀಮಂತ ದೇವರುಗಳಲ್ಲಿ ಒಬ್ಬನಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ತುಂಬಾ ಕಡಿಮೆಯಾಗಿದೆ. ಏಳು ಬೆಟ್ಟಗಳ ಒಡೆಯನ ದರ್ಶನಕ್ಕೆ ನಿತ್ಯ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದ ಭಕ್ತರು ಸದ್ಯಕ್ಕೆ ವಿರಾಮ ತೆಗೆದುಕೊಂಡಂತೆ ಕಾಣಿಸುತ್ತಿದೆ. ಹೀಗಾಗಿ ತಿರುಪತಿಯಲ್ಲಿ ದೇವರ ದರ್ಶನ ತುಂಬಾ ಸುಲಭವಾಗಿದ್ದು ನೇರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ.
ಹೌದು... ಆಂಧ್ರಪ್ರದೇಶದ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ. ಇದಕ್ಕೆ ಕಾರಣ ತುಪ್ಪದ ವಿವಾದ ಎನ್ನಲಾಗುತ್ತಿದೆ. ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಡಳಿತ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಕೊಬ್ಬು ಬಳಕೆ ಮಾಡಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದು ಪರೀಕ್ಷಾ ವರದಿಯಿಂದಲೂ ದೃಢಪಟ್ಟಿದೆ.

ಹೀಗಾಗಿ ದೇವಸ್ಥಾನದಲ್ಲಿ ತಯಾರಾಗುವ ಪ್ರಸಿದ್ಧ ಪ್ರಸಾದದ ಗುಣಮಟ್ಟದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ ಈ ಘಟನೆ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ. ಈ ಆರೋಪ ಕೇಳಿ ಬಂದ ನಂತರ ತಿರುಪತಿ ದೇವಸ್ಥಾನವನ್ನು ಪ್ರಧಾನ ಅರ್ಚಕರ ನೇತೃತ್ವದಲ್ಲಿ ಹೋಮ ಹವನ ಮಾಡುವ ಮೂಲಕ ದೇವಸ್ಥಾನದ ಶುದ್ಧೀಕರಣ ಮಾಡಲಾಯಿತು. ಈ ಹೋಮ ಕಾರ್ಯಕ್ರಮದಲ್ಲಿ ಇಒ ಶ್ಯಾಮಲಾ ರಾವ್, ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಭಾಗವಹಿಸಿದ್ದರು. ಬೆಳಿಗ್ಗೆ 6 ಗಂಟೆಗೆ ಆರಂಭವಾದ ಹೋಮವು 10 ಗಂಟೆಯವರೆಗೆ ನಡೆಯಿತು.
ತಿರುಮಲ ದೇವಸ್ಥಾನದಲ್ಲಿ ಪ್ರತಿ ವರ್ಷ ನಾನಾ ಉತ್ಸವಗಳು ನಡೆಯುತ್ತವೆ. ಅಂದರೆ ತಿರುಮಲದಲ್ಲಿ ವರ್ಷವಿಡೀ ದೇವಾಲಯದಲ್ಲಿ ನಡೆಯುವ ಅರ್ಚನೆಗಳು ಮತ್ತು ಉತ್ಸವಗಳಲ್ಲಿ ಯಾತ್ರಿಕರು ಹಾಗೂ ಸಿಬ್ಬಂದಿಗಳಿಂದ ಕೆಲವು ತಪ್ಪುಗಳನ್ನು ಮಾಡಲಾಗುತ್ತದೆ. ಈ ದೋಷಗಳಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಇದಕ್ಕೆ ಆಗಮ ಶಾಸ್ತ್ರದ ಪ್ರಕಾರ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯುತ್ತವೆ.
ಆದರೆ ಶ್ರೀವಾರಿ ನೈವೇದ್ಯದಲ್ಲಿ ಕಲಬೆರಕೆ ತುಪ್ಪ ಕಂಡುಬಂದಿದ್ದರಿಂದ ಪರಿಹಾರವಾಗಿ ಶಾಂತಿ ಹೋಮ ಆಯೋಜಿಸಲು ಆಗಮ ಸಲಹಾ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿಯೇ ಟಿಟಿಡಿ ಕಳೆದ ದಿನ ಶಾಂತಿ ಹೋಮವನ್ನು ಆಯೋಜಿಸಿತ್ತು. ಪಂಡಿತರು ತಿರುಮಲ ದೇವಸ್ಥಾನ, ಅನ್ನಪ್ರಸಾದ ಹಾಗೂ ಲಡ್ಡು ತಯಾರಿಕೆ ಸ್ಥಳದಲ್ಲಿ ಪಂಚಗವ್ಯ ಪ್ರೋಕ್ಷಣೆ ಮಾಡಿದರು.

ತಿರುಮಲಕ್ಕೆ ತೆರಳುವ ಭಕ್ತರಿಗೆ ನೆಮ್ಮದಿ..
ಈ ಸಮಯದಲ್ಲಿ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ದೇವರ ದರ್ಶನ ಬಹುಬೇಗ ಪೂರ್ಣಗೊಳ್ಳುತ್ತಿದ್ದು, ನೂಕುನುಗ್ಗಲು ಕೂಡ ಕಡಿಮೆಯಾಗಿದೆ. ಇಂದು ಬೆಳಗ್ಗೆಯಿಂದಲೇ ಭಕ್ತರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಕಳೆದ ಎರಡ್ಮೂರು ದಿನಗಳಿಗೆ ಹೋಲಿಸಿದರೆ ಭಕ್ತರು ದೇವರ ದರ್ಶನವನ್ನು ಬೇಗ ಮುಗಿಸಿದ್ದಾರೆ. ಟಿಕೆಟ್ ಇಲ್ಲದ ಭಕ್ತರ ದರ್ಶನಕ್ಕೆ 4ರಿಂದ 6 ಗಂಟೆ ಬೇಕು. ಅಲ್ಲದೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ 3 ಗಂಟೆಗಳಲ್ಲಿ ದರ್ಶನ ಪೂರ್ಣಗೊಳ್ಳುತ್ತದೆ.
ಆದರೆ ಸೋಮವಾರದಿಂದ ವೈಕುಂಠಂ ಸರದಿ ಸಂಕೀರ್ಣ ಖಾಲಿಯಾಗಿ ಕಾಣುತ್ತಿದೆ. ಭಾನುವಾರ 82,436 ಭಕ್ತರು ತಿರುಮಲ ದರ್ಶನಕ್ಕೆ ಭೇಟಿ ನೀಡಿದ್ದಾರೆ. 25,437 ಭಕ್ತರು ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಈ ಒಂದು ದಿನ ತಿರುಮಲ ಶ್ರೀವಾರಿ ಹುಂಡಿಯ ಆದಾಯ 4.57 ಕೋಟಿ ರೂಪಾಯಿ ಎಂದು ಟಿಟಿಡಿ ತಿಳಿಸಿದೆ. ಇನ್ನೊಂದೆಡೆ ತಿರುಮಲ ಶ್ರೀವಾರಿ ಬ್ರಹ್ಮೋತ್ಸವಕ್ಕೆ ಟಿಟಿಡಿ ಅದ್ಧೂರಿ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications