Tirupati Laddu: ತಿರುಪತಿಗೆ ತುಪ್ಪ ಪೂರೈಸಲು ಕಮಿಷನ್- ಚಾಲಕರನ್ನು ನಿರ್ದೇಶಕರನ್ನಾಗಿ ನೇಮಿಕ
ಹೈದರಾಬಾದ್ ಜನವರಿ 12: ತಿರುಪತಿ ತಿರುಮಲ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ ಆರೋಪ ದೇಶದೆಲ್ಲೆಡೆ ಭಾರೀ ಸುದ್ದಿ ಮಾಡಿದೆ. ಇದರ ತನಿಖೆಯಲ್ಲಿ ದಿನಕ್ಕೊಂದು ಆಘಾತಕಾರಿ ವಿಷಯಗಳು ಹೊರಬರುತ್ತಿವೆ. ಲಡ್ಡು ತಯಾರಿಕೆಗಾಗಿ ಕಮಿಷನ್ ಪಡೆದು ತಿರುಪತಿಗೆ ತುಪ್ಪ ರವಾನೆ ಮಾಡಿದ ವಿಷಯ ತನಿಖೆಯಿಂದ ಬಯಲಾಗಿದೆ. ಈ ಪ್ರಕರಣದಲ್ಲಿ ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಹಾಗಾದರೆ ಈ ನಾಲ್ವರನ್ನು ಬಂಧಿಸಿರುವುದು ಯಾಕೆ? ತುಪ್ಪ ಕಲಬೆರಿಕೆಯಲ್ಲಿ ಇವರ ಪಾತ್ರ ಏನು? ಎಲ್ಲವನ್ನು ಸವಿಸ್ತಾರವಾಗಿ ತಿಳಿಯೋಣ.
ತಿರುಪತಿಯ ಪವಿತ್ರ ಲಡ್ಡು ಪ್ರಸಾದವನ್ನು ತಯಾರಿಸಲು ತಿರುಮಲ ದೇವಸ್ಥಾನಕ್ಕೆ ಕಲಬೆರಕೆ ತುಪ್ಪವನ್ನು ಪೂರೈಸಿದ ಆರೋಪ ತಮಿಳುನಾಡು ಮೂಲದ ಎಆರ್ ಡೈರಿ ಪ್ರೈ. ಲಿಮಿಟೆಡ್ ಹೊತ್ತಿದೆ. ಈ ಡೈರಿ ವೈಷ್ಣವ್ ಡೈರಿಯಿಂದ ತುಪ್ಪ ಖರೀದಿ ಮಾಡಿದರೆ, ಈ ವೈಷ್ಣವ್ ಡೈರಿಯು ಉತ್ತರಾಖಂಡ್ ಮೂಲದ ಡೈರಿಯಿಂದ ಹಸುವಿನ ತುಪ್ಪವನ್ನು ಖರೀದಿಸಿದೆ. ಹೀಗೆ ಪೂರೈಕೆಯಾದ ಪ್ರತಿ ಕಿಲೋಗ್ರಾಂ ತುಪ್ಪಕ್ಕೆ 2.75 ರಿಂದ 3 ರೂ.ಗಳ ಕಮಿಷನ್ ಪಡೆದಿರುವುದು ಸಿಬಿಐ ನೇತೃತ್ವದ ಎಸ್‌ಐಟಿ ತನಿಖೆಯಲ್ಲಿ ತಿಳಿದು ಬಂದಿದೆ. ಹಾಗಾದರೆ ಯಾರು ಯಾರಿಗೆ ಕಮಿಷನ್ ನೀಡಿದ್ದಾರೆ? ಎಲ್ಲಿಂದ ತುಪ್ಪ ರವಾನೆಯಾಗುತ್ತಿತ್ತು? ತುಪ್ಪ ಕಲಬೆರಿಕೆ ಆಗಿದ್ದು ಹೇಗೆ?

ಎಸ್‌ಐಟಿ ವರದಿಯಲ್ಲಿ ಭಯಾನಕ ಸತ್ಯ ಬಯಲು
ತಿರುಪತಿ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಈ ಎಲ್ಲಾ ವಿಷಯವನ್ನು ಹಂಚಿಕೊಳ್ಳಲಾಗಿದೆ. ಕಳೆದ ಭಾನುವಾರ ತಿರುಮಲ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸಲಾದ ಹಸುವಿನ ತುಪ್ಪದ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೇತೃತ್ವದ ಎಸ್‌ಐಟಿ ತಂಡ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ.
ಬಂಧಿತರಲ್ಲಿ ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ಬಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ತಿರುಪತಿಯ ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ ಎಂಡಿ ರಾಜು ರಾಜಶೇಖರನ್ ಸೇರಿದ್ದಾರೆ. ಕಲಬೆರಿಕೆ ತುಪ್ಪ ಪ್ರಕರಣದಲ್ಲಿ ಇವರ ಪಾತ್ರ ಏನು?

ಟೆಂಡರ್‌ನಲ್ಲಿ ಭಾರೀ ಅವ್ಯವಹಾರ
ತುಪ್ಪ ಪೂರೈಕೆಯ ಸಮಯದಲ್ಲಿ ನಿಯಮಗಳ ಉಲ್ಲಂಘನೆ ನಡೆದಿದೆ. ಹಲವು ಅಕ್ರಮಗಳು ನಡೆದಿವೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತಿರುಪತಿಗೆ ತುಪ್ಪವನ್ನು ಪೂರೈಸುತ್ತಿದ್ದ ಉತ್ತರಾಖಂಡದ ಭೋಲೆ ಬಾಬಾ ಒರೊಗೊನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ 2022ರಲ್ಲಿ ಟ್ಯಾಂಕರ್‌ಗಳ ಮೂಲಕ ಟಿಟಿಡಿಗೆ ನೇರವಾಗಿ ತುಪ್ಪವನ್ನು ಪೂರೈಸಿತ್ತು. ಆದರೆ ತುಪ್ಪದ ಗುಣಮಟ್ಟ ಸರಿಯಾಗಿಲ್ಲದನ್ನು ಗಮನಿಸಿದ ಟಿಟಿಡಿ 2022ರಲ್ಲಿ ಭೋಲೆ ಬಾಬಾ ಡೈರಿಯನ್ನು ಪರಿಶೀಲಿಸಿತು. ಆಗ ಟಿಟಿಡಿ ತಂಡಕ್ಕೆ ತುಪ್ಪ ಉತ್ಪಾದನಾ ಪದ್ಧತಿಗಳು ತೃಪ್ತಿಕರವಾಗಲಿಲ್ಲ. ಆದ್ದರಿಂದ ಅದನ್ನು ಅನರ್ಹಗೊಳಿಸಿತು. ಆಗ ಮೇ 2023ರಲ್ಲಿ ಭೋಲೆ ಬಾಬಾ ಡೈರಿ ಎಆರ್ ಡೈರಿಯೊಂದಿಗೆ ಕೆಲಸ ಮಾಡಲು ಶುರು ಮಾಡಿತ್ತು.

ಮಾರ್ಚ್ 2024 ರಲ್ಲಿ ಟಿಟಿಡಿ 1500 ಕಿಮೀ ವರ್ಗದ ಅಡಿಯಲ್ಲಿ ಹಸುವಿನ ತುಪ್ಪ ಅಗ್‌ಮಾರ್ಕ್ ವಿಶೇಷ ದರ್ಜೆಯ ಟೆಂಡರ್‌ಗಳನ್ನು ಕರೆದಿತ್ತು. ಈ ಟೆಂಡರ್‌ನಲ್ಲಿ ಭಾಗಿಯಾಗಲು ಎಆರ್ ಡೈರಿ ಅರ್ಹತೆಗಳನ್ನು ಹೊಂದಿರಲಿಲ್ಲ. ಆಗ ಎಆರ್ ಡೈರಿ ಅರ್ಹತೆ ಪಡೆಯಲು ಭೋಲೆ ಬಾಬಾ ಡೈರಿ ಸುಳ್ಳು ಮತ್ತು ಕೃತಕ ದಾಖಲೆಗಳನ್ನು ಸಿದ್ಧಪಡಿಸಿದೆ. ಇದರಿಂದಾಗಿ ಎಆರ್ ಡೈರಿ ತುಪ್ಪ ಒದಗಿಸುವ ಮಾನ್ಯತೆ ಪಡೆಯಿತು.
ನಿರ್ದಿಷ್ಟವಾಗಿ ಹೇಳುವುದಾದರೆ ಟೆಂಡರ್ ಪ್ರಕಾರ ಟಿಟಿಡಿಗೆ ಅಗತ್ಯವಿರುವ ಹಸುವಿನ ತುಪ್ಪದ ಉತ್ಪಾದನೆಯು ತಿಂಗಳಿಗೆ 180 ಮೆಟ್ರಿಕ್ ಟನ್ ಆಗಿತ್ತು. ಎಆರ್ ಡೈರಿ 2023ಕ್ಕೆ ಕೇವಲ 56.9 ಮೆಟ್ರಿಕ್ ಟನ್ ಹಸುವಿನ ತುಪ್ಪವನ್ನು ಉತ್ಪಾದಿಸಿತ್ತು. ಆದರೂ ಕೂಡ ಅದು 56.9 ಮೆಟ್ರಿಕ್ ಟನ್ ಬದಲಿಗೆ 196.8 ಮೆಟ್ರಿಕ್ ಟನ್ ತುಪ್ಪ ಉತ್ಪಾದಿಸುವುದಾಗಿ ಅಂಕಿ ಅಂಶಗಳನ್ನು ತೋರಿಸಿದೆ. ಹಾಲಿನ ಕನಿಷ್ಠ ಸಂಗ್ರಹಣೆ ದಿನಕ್ಕೆ ಎರಡು ಲಕ್ಷ ಲೀಟರ್ ಆಗಿರಬೇಕು. ಆದರೆ ಇದಕ್ಕೂ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಇದ್ಯಾವುದು ಸರಿಯಾಗಿ ಇಲ್ಲದೆ ಟೆಂಡರ್ ಸಮಯದಲ್ಲಿ ಎಆರ್ ಡೈರಿ ಸಹಿ ಹಾಕಿ ತುಪ್ಪ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಹಾಗಾದರೆ ಉಳಿದ ತುಪ್ಪವನ್ನು ಎಆರ್ ಡೈರಿ ಪಡೆದಿದ್ದು ಎಲ್ಲಿಂದ?
ಎಆರ್ ಡೈರಿ ತುಪ್ಪ ಪಡೆದಿದ್ದು ಎಲ್ಲಿಂದ?
ಟೆಂಡರ್ ಪ್ರಕಾರ ಎಆರ್ ಡೈರಿ ಟಿಟಿಡಿಗೆ ಅಗತ್ಯವಿರುವ ತುಪ್ಪ ತಯಾರಿಸುವುದು ಮತ್ತು ಪೂರೈಸುವುದಾಗಿ ಹೇಳಿತ್ತು. ಆದರೆ ತನಗೆ ತಯಾರಿಸಲು ಸಾಧ್ಯವಾಗದಷ್ಟು ತುಪ್ಪನ್ನು ಎಆರ್ ಡೈರಿಯು ವೈಷ್ಣವಿ ಡೈರಿಯಿಂದ ಖರೀದಿಸಿತು. ಈ ವೈಷ್ಣವಿ ಡೈರಿ ಈ ತುಪ್ಪವನ್ನು ಕಮಿಷನ್ ಪಡೆದು ಭೋಲೆ ಬಾಬಾ ಡೈರಿಯಿಂದ ಖರೀದಿಸಿದೆ. ಉತ್ತರಾಖಂಡದ ಭೋಲೆ ಬಾಬಾ ಒರೊಗೊನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್, ವೈಷ್ಣವಿ ಡೈರಿ ಮತ್ತು ಎಆರ್ ಡೈರಿಗೆ ಕಲಬೆರಕೆ ತುಪ್ಪವನ್ನು ಪೂರೈಸಿದೆ.
ಎಆರ್ ಡೈರಿ ಟೆಂಡರ್‌ನಲ್ಲಿ ಭಾಗವಹಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೂ, ಈ ಸುಳ್ಳು ದಾಖಲೆಗಳನ್ನು ನಿಡುವ ಮೂಲಕ ತುಪ್ಪ ಪೂರೈಕೆಗೆ ಅವಕಾಶ ಪಡೆದಿದೆ. ಅಲ್ಲದೆ ಭೋಲೆ ಬಾಬಾ ಒರೊಗೊನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ ಕಮಿಷನ್ ನೀಡಿ ಗುಣಮಟ್ಟವಿಲ್ಲ ಅಂದರೆ ಕಲಬೆರಿಕೆ ತುಪ್ಪವನ್ನು ವೈಷ್ಣವಿ ಡೈರಿ ಮತ್ತು ಎಆರ್ ಡೈರಿಗೆ ಪೂರೈಸಿದೆ.
ತಿರುಪತಿಗೆ ಎಷ್ಟು ತುಪ್ಪ ಬೇಕಾಗುತ್ತದೆ?
ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಲಡ್ಡು ಪ್ರಸಾದ ಮತ್ತು ಇತರ ಪ್ರಸಾದಗಳನ್ನು ತಯಾರಿಸಲು ಹಸುವಿನ ತುಪ್ಪವು ಮುಖ್ಯವಾಗಿದೆ. ಹಸುವಿನ ತುಪ್ಪದ ಸರಾಸರಿ ದೈನಂದಿನ ಅವಶ್ಯಕತೆ ಸುಮಾರು 15,000 ಕೆಜಿ. ಟಿಟಿಡಿ 6 ತಿಂಗಳ ಅವಧಿಗೆ ಅಗ್‌ಮಾರ್ಕ್ ವಿಶೇಷ ದರ್ಜೆಯ ಟ್ಯಾಂಕರ್‌ಗಳಲ್ಲಿ ಮೂರು ಮಾಡ್ಯೂಲ್‌ಗಳಲ್ಲಿ ಹಸುವಿನ ತುಪ್ಪವನ್ನು ಸಂಗ್ರಹಿಸುತ್ತಿದೆ. ಅಂದರೆ ನ್ಯಾಷನಲ್ ಡೈರೀಸ್ ನಿಂದ (20 ಲಕ್ಷ ಕೆಜಿ), 1500 ಕಿಮೀ (10 ಲಕ್ಷ ಕೆಜಿ) ವ್ಯಾಪ್ತಿಯೊಳಗಿನ ಡೈರೀಸ್ ನಿಂದ ಮತ್ತು ಎಪಿ ಡೈರೀಸ್ (5 ಲಕ್ಷ ಕೆಜಿ) ನಿಂದ ತುಪ್ಪ ಪಡೆಯುತ್ತಿತ್ತು.
ಚಾಲಕರನ್ನು ನಿರ್ದೇಶಕರನ್ನಾಗಿ ನೇಮಕ
ಸೆಪ್ಟೆಂಬರ್ 2024ರಲ್ಲಿ ಭೋಲೆ ಬಾಬಾ ಪ್ರವರ್ತಕರಾದ ವಿಪಿನ್ ಮತ್ತು ಪೊಮ್ಮೆಲ್ ಜೈನ್ ತಮ್ಮ ವಾಹನ ಚಾಲಕರಾದ ಸುರೇಂದ್ರ ಸಿಂಗ್ ಮತ್ತು ಸೌರಭ್ ಕಶ್ಯಪ್ ಅವರನ್ನು ವೈಷ್ಣವಿ ಡೈರಿಯ ನಿರ್ದೇಶಕರನ್ನಾಗಿ ನೇಮಿಸಿದ್ದಾರೆಂದು ರಿಮಾಂಡ್ ವರದಿ ತಿಳಿಸಿದೆ. ಅದೇ ರೀತಿ ತುಪ್ಪ ಪೂರೈಕೆದಾರರು ಎಜಿಮಾರ್ಕ್ ವಿಶೇಷ ದರ್ಜೆಯ ತುಪ್ಪದ ತಯಾರಕರಾಗಿರಬೇಕು. ಆದರೆ ಎಆರ್ ಡೈರಿ ನಕಲಿ ಖಾತರಿ ಪ್ರಮಾಣಪತ್ರವನ್ನು ನೀಡುವ ಮೂಲಕ ಟೆಂಡರ್ ನಿಯಮವನ್ನು ಉಲ್ಲಂಘಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತುಪ್ಪ ಕಲಬೆರಕೆ ವರದಿಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳನ್ನು ಒಳಗೊಂಡ ಐದು ಸದಸ್ಯರ ವಿಶೇಷ ತನಿಖಾ ತಂಡ (SIT)ವನ್ನು ರಚಿಸಿತು. ಐದು ಸದಸ್ಯರ ತಂಡದಲ್ಲಿ ಸಿಬಿಐನಿಂದ ಇಬ್ಬರು, ಆಂಧ್ರ ಸರ್ಕಾರದಿಂದ ಇಬ್ಬರು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದಿಂದ ಒಬ್ಬರು ಇದ್ದರು. ಈ ತಂಡ ಸದ್ಯ ಐದು ಜನರನ್ನು ಬಂಧಿಸಿ ವಿಚಾರಣೆ ನಡೆಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications